ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂತೆಗೆತ | ಚೀನಾ-ಭಾರತ ಯೋಧರಿಂದ ಸಿಹಿ ಹಂಚಿ ದೀಪಾವಳಿ ಶುಭಾಶಯ ವಿನಿಮಯ
ಬುಧವಾರ ಎಲ್‌ಎಸಿಯ ಎರಡೂ ಘರ್ಷಣೆಯ ಸ್ಥಳಗಳಿಂದ ಸೇನಾ ಪಡೆಯನ್ನು ಹಿಂಪಡೆದಿದ್ದು, ಶೀಘ್ರದಲ್ಲೇ ಗಸ್ತು ಪ್ರಕ್ರಿಯೆ ಆರಂಭಿಸಲಾಗುವುದು. ಎರಡೂ ಕಡೆಯ ಸೇನಾಪಡೆಗಳು ಹಿಂದೆ ಸರಿದ ಬಳಿಕ ಗ್ರೌಂಡ್ ಕಮಾಂಡರ್‌ಗಳು ಪರಿಶೀಲನಾ ಪ್ರಕ್ರಿಯೆ ನಡೆಸಿದರು ಎಂದು ಹೇಳಿವೆ.;
ಪೂರ್ವ ಲಡಾಖ್ ಪ್ರದೇಶದ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದ ಘರ್ಷಣೆಯ ಸ್ಥಳಗಳಿಂದ ಸೇನೆ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಭಾರತ-ಚೀನಾ ಯೋಧರು ಗುರುವಾರ ದೀಪಾವಳಿ ಅಂಗವಾಗಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಉದ್ದಕ್ಕೂ ಐದು ಬಾರ್ಡರ್ ಪಾಯಿಂಟ್‌ಗಳಲ್ಲಿ ಉಭಯ ದೇಶಗಳ ಯೋಧರು ಸಿಹಿ ವಿನಿಮಯ ಮಾಡಿಕೊಂಡರು ಎಂದು ಸೇನಾ ಮೂಲಗಳು ತಿಳಿಸಿವೆ.
ಬುಧವಾರ ಎಲ್‌ಎಸಿಯ ಎರಡೂ ಘರ್ಷಣೆಯ ಸ್ಥಳಗಳಿಂದ ಸೇನಾ ಪಡೆಯನ್ನು ಹಿಂಪಡೆದಿದ್ದು, ಶೀಘ್ರದಲ್ಲೇ ಗಸ್ತು ಪ್ರಕ್ರಿಯೆ ಆರಂಭಿಸಲಾಗುವುದು. ಎರಡೂ ಕಡೆಯ ಸೇನಾಪಡೆಗಳು ಹಿಂದೆ ಸರಿದ ಬಳಿಕ ಗ್ರೌಂಡ್ ಕಮಾಂಡರ್‌ಗಳು ಪರಿಶೀಲನಾ ಪ್ರಕ್ರಿಯೆ ನಡೆಸಿದರು ಎಂದು ಹೇಳಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅ. 21 ರಂದು ದೆಹಲಿಯಲ್ಲಿ ಭಾರತ ಮತ್ತು ಚೀನಾ ನಡುವೆ ಗಸ್ತು ಒಪ್ಪಂದದ ಕುರಿತು ಅಧಿಕೃತವಾಗಿ ಘೋಷಿಸಿದ್ದರು. 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತ ಯೋಧರ ಮಧ್ಯೆ ಘರ್ಷಣೆ ನಡೆದಿತ್ತು. ನಾಲ್ಕು ವರ್ಷಗಳ ನಂತರ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಉಭಯ ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು.