Delhi polls | ಡೆಲ್ಲಿಯಲ್ಲಿ ಬಿಜೆಪಿ ಜಯಭೇರಿ, ಫಲಿತಾಂಶದ ಮೋದಿ ಸೇರಿದಂತೆ ನಾಯಕರ ಅಭಿಪ್ರಾಯಗಳೇನು?

Delhi polls : ಪ್ರಧಾನ ಮಂತ್ರಿ ನರೇಂದ್ರ ಮೋದಿ ಚುನಾವಣೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರೆ, ರಾಷ್ಟ್ರ ರಾಜಧಾನಿಯ ಜನರ ಜತೆ ಸದಾ ಇರುತ್ತೇವೆ ಎಂದು ಹೇಳಿದ್ದಾರೆ.;

Update: 2025-02-08 12:41 GMT
ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿ 27 ವರ್ಷದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48ರಲ್ಲಿ ಗೆದ್ದಿದ್ದರೆ ಆಪ್ 22ಕ್ಕೆ ತೃಪ್ತಿ ಪಟ್ಟಿದೆ. ಬಿಜೆಪಿಯ ಅರ್ಥಕ್ಕೂ ಆಪ್​ ತಲುಪಿಲ್ಲ. ಫಲಿತಾಂಶಗಳು ಬಹುತೇಕ ಪ್ರಕಟಗೊಂಡ ಬಳಿಕ ಪ್ರಧಾನಿ ಮೋದಿ ಸೇರಿದಂತೆ ನಾನಾ ಪಕ್ಷಗಳು ನಾಯಕರು ಪ್ರತಿಕ್ರಿಯಿಸಿದ್ದಾರೆ. ಅದರ ವಿವರ ಇಲ್ಲಿದೆ.

"ಜನಶಕ್ತಿಯೇ ಪರಮಶಕ್ತಿ" ಎಂದು  ಮೋದಿ ಹೇಳಿದ್ದಾರೆ. "ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಭರವಸೆ ಗೆದ್ದಿದೆ" ಎಂದು ಪ್ರಧಾನಿ ಹೇಳಿದ್ದಾರೆ. ಈ ವೇಳೆ ಅವರು ಐತಿಹಾಸಿಕ ಗೆಲುವಿಗೆ ಸಹಕಾರ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾವು ದೆಹಲಿಯ ಸಮಗ್ರ ಅಭಿವೃದ್ಧಿಗೆ ನೀಡಿದ ಭರವಸೆ ಪೂರ್ಣಗೊಳಿಸುತ್ತೇವೆ.  ಜನರ ಜೀವನ ಸುಧಾರಿಸುತ್ತೇವೆ ಎಂಬ ಭರವಸೆ ಈಡೇರಿಸುತ್ತೇವೆ. ದೆಹಲಿ ಅಭಿವೃದ್ಧಿ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಾವು ಈಗ  ಇನ್ನಷ್ಟು ಶಕ್ತಿಯೊಂದಿಗೆ ದೆಹಲಿಯ ಜನರ ಸೇವೆ ಮಾಡಲಿದ್ದೇವೆ " ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿಯ ಹೊಸ ಪರ್ವ: ಅಮಿತ್ ಶಾ

ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ದೆಹಲಿ ಚುನಾವಣಾ ಫಲಿತಾಂಶವನ್ನು ದೇಶ ರಾಜಧಾನಿಯ ಅಭಿವೃದ್ಧಿಯ ಹೊಸ ಪರ್ವ ಎಂದು ಹೊಗಳಿದ್ದಾರೆ. ಸುಳ್ಳು, ಮೋಸ, ಭ್ರಷ್ಟಾಚಾರದ ಆಡಳಿತದ ಅಂತ್ಯ ಎಂದು ನುಡಿದಿದ್ದಾರೆ.

"ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂ.1 ರಾಜಧಾನಿಯಾಗಿ ಮಾಡಲು ಬದ್ಧ" ಎಂದು ಶಾ ಹೇಳಿದ್ದಾರೆ.

ಅಭಿವೃದ್ಧಿ ಕಡೆಗೆ ದೆಹಲಿ: ರಾಜನಾಥ್ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ, ದೆಹಲಿಯ ಅಭಿವೃದ್ಧಿ ಭಾರತವನ್ನು ಕಟ್ಟಲು ಅತ್ಯಗತ್ಯ ಎಂದು ಹೇಳಿದ್ದಾರೆ.

"ಡಬಲ್ ಎಂಜಿನ್ ಸರ್ಕಾರ ದೆಹಲಿಯ ಅಭಿವೃದ್ಧಿ ಕಾರ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ" ಎಂದು ಅವರು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ಜನರ ಗೆಲುವು : ಜೆಪಿ ನಡ್ಡಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ಭಾರೀ ಗೆಲುವು ಜನರ ಬೆಂಬಲಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

"ದೆಹಲಿಯ ಆಪ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ಎಲ್ಲ ಮಿತಿಗಳನ್ನು ಮೀರಿತ್ತು. ನಗರವು ಈಗ ತನ್ನ ಸುಳ್ಳು , ಮೋಸ ಮತ್ತು ಕಪಟಿಗಳಿಂದ ಮುಕ್ತವಾಗಿದೆ. ಪ್ರಗತಿಯ ಹೊಸ ಯುಗಕ್ಕೆ ಪ್ರವೇಶಿಸಿದೆ" ಎಂದು ಅವರು ಹೇಳಿದ್ದಾರೆ.

ದೆಹಲಿಯ ಪರಿವರ್ತನೆಯಾಗಲಿದೆ: ನಿರ್ಮಲಾ ಸೀತಾರಾಮನ್

ಫಲಿತಾಂಶದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಜನತಾ ಪಕ್ಷ ದೆಹಲಿಯ ಪರಿವರ್ತನೆಗೊಂದು ಹೊಸ ಹಾದಿ ಕಲ್ಪಿಸಲಿದೆ, ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ ಸಂತೋಷದಾಯಕ. ಮೋದಿ ನೇತೃತ್ವದಲ್ಲಿ ದೆಹಲಿಯ ಜನಸೇವೆಗೆ ಮೊದಲ ಆದ್ಯತೆ ನೀ ಸರ್ಕಾರ ರಚನೆಗೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಆಪ್​ ವಿರುದ್ಧದ ವಿಜಯ ಎಂದ ಕಾಂಗ್ರೆಸ್​

ದೆಹಲಿ ಗೆಲುವು ಬಿಜೆಪಿಯ ಸ್ವಂತ ಗೆಲುವಲ್ಲ. ಆಪ್ ವಿರುದ್ಧದ ಅಸಮಾಧಾನದ ಜನಮತ ಎಂದು ಕಾಂಗ್ರೆಸ್ ಹೇಳಿದೆ. 2015 ಮತ್ತು 2020ರಲ್ಲಿ ಪ್ರಧಾನಿ ಮೋದಿಯ ಜನಪ್ರಿಯತೆ ಪರಾಕಾಷ್ಠೆಯಲ್ಲಿ ಇದ್ದಾಗಲೂ ಆಪ್ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಇದು ಮೋದಿ ಪರ ಜನರ ಒಪ್ಪಿಗೆ ಅಲ್ಲ ಎಂಬುದು ಸ್ಪಷ್ಟ ಎಂದು ಕಾಂಗ್ರೆಸ್​ ಹೇಳಿದೆ.

ವಿವಿಧ ಹಗರಣಗಳನ್ನು ಮಾಡಿಕೊಂಡು 12 ವರ್ಷಗಳ ಆಪ್ ಆಡಳಿತದ ವಿರುದ್ಧದ ಜನರ ತೀರ್ಪು ನೀಡಿದೆ ಎಂದು ಆ ಪಕ್ಷ ಹೇಳಿದೆ. 

ಬದಲಾವಣೆಗಾಗಿ ಮತ : ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ, ಜನರು ಬದಲಾವಣೆಗೆ ಮತ ಹಾಕಿದ್ದಾರೆ. ಅವರಿಗೆ ಇತರ ಆಯ್ಕೆಗಳು ತೃಪ್ತಿಕರವಾಗಿರಲಿಲ್ಲ ಎಂದು ಹೇಳಿದ್ದಾರೆ.

ನಾವು ಹೆಚ್ಚು ಶ್ರಮವಹಿಸಬೇಕು. ಜನರೊಂದಿಗೆ ನೇರ ಸಂಪರ್ಕದಲ್ಲಿರಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಪಾಠವನ್ನು ಈ ಫಲಿತಾಂಶ ಹೇಳಿಕೊಟ್ಟಿದೆ ಎಂದು ಅವರು ಪ್ರಿಯಾಂಕ ಅಭಿಪ್ರಾಯಪಟ್ಟಿದ್ದಾರೆ. 

ದೆಹಲಿ ಜನರೊಂದಿಗೆ ಇರುವೆವು: ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೋಲನ್ನು ಒಪ್ಪಿಕೊಂಡಿದ್ದಾರೆ. ಜನರ ತೀರ್ಪನ್ನು ಗೌರವಿಸುತ್ತೇವೆ ಎಂಬುದಾಗಿಯೂ ನುಡಿದಿದ್ದಾರೆ.

"ನಾವು ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ ಮತ್ತು ಬಿಜೆಪಿಯ ಈ ಗೆಲುವಿಗೆ ಅಭಿನಂದಿಸುತ್ತೇವೆ. ಅವರು ದೆಹಲಿಯ ಜನರ ನಿರೀಕ್ಷೆಗಳನ್ನು ಈಡೇರಿಸುವ ಭರವಸೆಯಿದೆ,'' ಎಂದು ಅವರು ಹೇಳಿದ್ದಾರೆ.

"ಮುಂದಿನ ಐದು ವರ್ಷಗಳಲ್ಲಿ ನಾವು ಅತ್ಯುತ್ತಮ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸುತ್ತೇವೆ. ದೆಹಲಿಯ ಜನರೊಂದಿಗೆ ಸದಾ ಇರುತ್ತೇವೆ. ನಮಗೆ ಅಧಿಕಾರ ಮುಖ್ಯವಲ್ಲ, ಜನಸೇವೆ ಮುಖ್ಯ" ಎಂದು ಅವರು ಹೇಳಿದ್ದಾರೆ.

ಅಣ್ಣಾ ಹಜಾರೆ ಏನಂದ್ರು?

ಹೋರಾಟಗಾರ **ಅಣ್ಣಾ ಹಜಾರೆ ಮಾತನಾಡಿ, ಮದ್ಯ ನೀತಿಯಲ್ಲಿನ ಹಣದೊಂದಿಗೆ ಪಕ್ಷವೂ ಮುಳುಗಿತು ಎಂದು ಟೀಕಿಸಿದ್ದಾರೆ.

ಸುಳ್ಳು ಸೋತಿದೆ: ಏಕನಾಥ್ ಶಿಂಧೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಗೆಲುವು ಮೋದಿ ಭರವಸೆಗಳ ಮಾಯೆ. ದೆಹಲಿ ಜನರು ಸುಳ್ಳು ತಿರಸ್ಕರಿಸಿದ್ದಾರೆ ಮತ್ತು ಸತ್ಯದೊಂದಿಗೆ ನಿಂತಿದ್ದಾರೆ ಎಂದು ನುಡಿದಿದ್ದಾರೆ. 

Similar News