ದೆಹಲಿಯಲ್ಲಿ ಮತ್ತೆ ಪ್ರವಾಹ; ಇಬ್ಬರು ಸಾವು

Update: 2024-08-01 10:29 GMT

ದೆಹಲಿಯಲ್ಲಿ ಸುರಿದ ಭಾರೀ ಮಳೆಗೆ ತಾಯಿ ಮತ್ತು ಮಗು ಬಲಿಯಾಗಿದ್ದಾರೆ. 

ಮಯೂರ್ ವಿಹಾರದಲ್ಲಿ ಮೂರು ಗಂಟೆಗಳಲ್ಲಿ 119 ಮಿಮೀ ಮಳೆ ದಾಖಲಾಗಿದೆ. ನಗರದ ಹಲವು ಭಾಗಗಳು ಜಲಾವೃತಗೊಂಡವು ಮತ್ತು ದೆಹಲಿ ಸರ್ಕಾರ ಎಲ್ಲಾ ಶಾಲೆಗಳನ್ನು ಗುರುವಾರ ಮುಚ್ಚುವುದಾಗಿ ಘೋಷಿಸಿತು. ಬುಧವಾರ ಸಂಜೆ ಕನಿಷ್ಠ 10 ವಿಮಾನಗಳನ್ನು ತಿರುಗಿಸಲಾಗಿದೆ. 

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ನಗರದ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ ಸಂಜೆ 5.30 ರಿಂದ 8.30 ರ ನಡುವೆ 79.2 ಮಿಮೀ ಮಳೆ ದಾಖಲಾಗಿದೆ. ಮಯೂರ್ ವಿಹಾರದ ಹವಾಮಾನ ಕೇಂದ್ರಗಳು 119 ಮಿಮೀ, ದೆಹಲಿ ವಿಶ್ವವಿದ್ಯಾನಿಲಯ 77.5 ಮಿಮೀ, ಪೂಸಾ 66.5 ಮಿಮೀ ಮತ್ತು ಪಾಲಂ 43.7 ಮಿಮೀ ಮಳೆಯನ್ನು ದಾಖಲಿಸಿವೆ.

ಗಾಜಿಪುರದಲ್ಲಿ ಚರಂಡಿಗೆ ಬಿದ್ದ 22 ವರ್ಷದ ಮಹಿಳೆ ಮತ್ತು ಆಕೆಯ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತನುಜಾ ಮತ್ತು ಅವರ ಮಗ ಪ್ರಿಯಾಂಶ್(3) ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಹೊರಟಿದ್ದಾಗ, ನೀರು ತುಂಬಿದ ಚರಂಡಿಗೆ ಜಾರಿ ಬಿದ್ದು ಮುಳುಗಿದ್ದಾರೆ. ಖೋಡಾ ಕಾಲೋನಿ ಬಳಿ ಈ ಘಟನೆ ಸಂಭವಿಸಿದೆ.

10 ವಿಮಾನಗಳ ಮಾರ್ಗ ಬದಲು: ಬುಧವಾರ ಸಂಜೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಕನಿಷ್ಠ 10 ವಿಮಾನಗಳ ಮಾರ್ಗ ಬದಲಿಸಲಾಗಿದೆ. ಎಂಟು ವಿಮಾನಗಳನ್ನು ಜೈಪುರಕ್ಕೆ ಮತ್ತು ಎರಡು ವಿಮಾನಗಳನ್ನು ಲಕ್ನೋಗೆ ತಿರುಗಿಸಲಾಗಿದೆ. 

ಕೆಟ್ಟ ಹವಾಮಾನದಿಂದ ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಬಹುದು ಎಂದು ಏರ್‌ಲೈನ್ಸ್ ಎಕ್ಸ್‌ ನಲ್ಲಿ ಹೇಳಿದೆ.

Tags:    

Similar News