ಬಿಜೆಪಿ: ಚುನಾವಣೆ ಬಾಂಡ್‌ಗಳಿಂದ 1,300 ಕೋಟಿ ರೂ.

Update: 2024-02-10 10:59 GMT

ಭಾರತೀಯ ಜನತಾ ಪಕ್ಷ (ಬಿಜೆಪಿ) 2022-23ರಲ್ಲಿ ಚುನಾವಣೆ ಬಾಂಡ್‌ ಗಳಿಂದ ಸುಮಾರು 1,300 ಕೋಟಿ ರೂ.ಸಂಗ್ರಹಿಸಿದೆ. ಇದು ಕಾಂಗ್ರೆಸ್ ಸಂಗ್ರಹಿಸಿದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು. 

2022-23ರ ಹಣಕಾಸು ವರ್ಷದಲ್ಲಿ ಬಿಜೆಪಿ 2,120 ಕೋಟಿ ರೂ. ಶೇಖರಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಪ್ರಕಾರ, ಶೇ.61ರಷ್ಟು ಆದಾಯ ಚುನಾವಣೆ ಬಾಂಡ್‌ಗಳಿಂದ ಬಂದಿದೆ. 2021-22ರ ಹಣಕಾಸು ವರ್ಷದಲ್ಲಿ ಪಕ್ಷ ಒಟ್ಟು 1,775 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. 2022-23 ರಲ್ಲಿ ಪಕ್ಷದ ಒಟ್ಟು ಆದಾಯ 2,360.8 ಕೋಟಿ ರೂ. 2021-22 ರಲ್ಲಿ 1,917 ಕೋಟಿ ರೂ. 

2022-23 ರಲ್ಲಿ ಕಾಂಗ್ರೆಸ್ ಚುನಾವಣೆ ಬಾಂಡ್‌ಗಳಿಂದ 171 ಕೋಟಿ ರೂ. ಸಂಗ್ರಹಿಸಿದೆ. 2021-22ಕ್ಕೆ ಹೋಲಿಸಿದರೆ, 236 ಕೋಟಿ ರೂ. ಕಡಿಮೆ. ಸಮಾಜವಾದಿ ಪಕ್ಷ 2021-22ರಲ್ಲಿ 3.2 ಕೋಟಿ ರೂ. ಸಂಗ್ರಹಿಸಿತ್ತು. 2022-23 ರಲ್ಲಿ ಯಾವುದೇ ದೇಣಿಗೆ ಸ್ವೀಕರಿಸಿಲ್ಲ. ಟಿಡಿಪಿ 2022-23ರಲ್ಲಿ ಚುನಾವಣೆ ಬಾಂಡ್‌ನಿಂದ 34 ಕೋಟಿ ರೂ. ಸಂಗ್ರಹಿಸಿದೆ. ಹಿಂದಿನ ವರ್ಷಕ್ಕಿಂತ ಇದು 10 ಪಟ್ಟು ಹೆಚ್ಚು. 2021-22 ರಲ್ಲಿ ಬಿಜೆಪಿ ಬಡ್ಡಿಯಿಂದ 237 ಕೋಟಿ ರೂ.ಗಳಿಸಿದೆ(ಹಿಂದಿನ ವರ್ಷ 135 ಕೋಟಿ ರೂ.). ವಿಮಾನ-ಹೆಲಿಕಾಪ್ಟರ್‌ ಬಳಕೆಗೆ 78.2 ಕೋಟಿ ರೂ. ವೆಚ್ಚ ಮಾಡಿದ್ದು, ಅಭ್ಯರ್ಥಿಗಳಿಗೆ 76.5 ಕೋಟಿ ರೂ. ನೆರವು ನೀಡಿದೆ. 

Tags:    

Similar News