ಮೊದಲ ಸಿಐಎಸ್‌ಎಫ್‌ ಮಹಿಳಾ ಬೆಟಾಲಿಯನ್; 1,025 ಸಿಬ್ಬಂದಿ ಭದ್ರತಾ ತಂಡ ರಚನೆಗೆ ಕೇಂದ್ರ ನಿರ್ಧಾರ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಮೊಟ್ಟಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.;

Update: 2024-11-13 12:28 GMT
ಮಹಿಳಾ ಬೆಟಾಲಿಯನ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಮೊಟ್ಟಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

 "ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಐಎಸ್‌ಎಫ್‌ನ ಮೊದಲ  ಮಹಿಳಾ ಬೆಟಾಲಿಯನ್ ಸ್ಥಾಪನೆಗೆ  ಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರಕಟಣೆ  ತಿಳಿಸಿದೆ.

68 ವಿವಿಧ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೊ, ತಾಜ್‌ಮಹಲ್, ಕೆಂಪು ಕೋಟೆ ಸೇರಿದಂತೆ ಹಲವು ಐತಿಹಾಸಿಕ ಸಂಕೀರ್ಣಗಳ ಭದ್ರತಾ ಉಸ್ತುವಾರಿಯನ್ನು ಸಿಐಎಸ್ಎಫ್ ನಿಭಾಯಿಸುತ್ತಿದೆ ಎಂದು ಅಮಿತ್‌ ಷಾ ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.  ಈ ನಿರ್ಧಾರವು ರಾಷ್ಟ್ರವನ್ನು ರಕ್ಷಿಸುವ ನಿರ್ಣಾಯಕ ಕಾರ್ಯದಲ್ಲಿ ಭಾಗವಹಿಸುವ ಹೆಚ್ಚಿನ ಮಹಿಳೆಯರ ಆಕಾಂಕ್ಷೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಹಾಲಿ ಇರುವ ಎರಡು ಲಕ್ಷ ಸಿಬ್ಬಂದಿಯಲ್ಲಿ ಆಯ್ಕೆ ಮಾಡಿ ಹೊಸದಾಗಿ ಮಂಜೂರಾದ ‌ ಮಹಿಳಾತುಕಡಿ ರಚಿಸಲಿದ್ದು, ಹಿರಿಯ ಕಮಾಂಡೆಂಟ್ ದರ್ಜೆಯ ಅಧಿಕಾರಿ ನೇತೃತ್ವ ವಹಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪ್ರಸ್ತುತ 12 ಮೀಸಲು ತುಕಡಿಗಳಿವೆ.


Tags:    

Similar News