ಸ್ಥಗಿತಗೊಂಡಿದ್ದ ಏರ್ ಇಂಡಿಯಾ ವಿಮಾನ ಸೇವೆಗಳು ಆಗಸ್ಟ್ 1ರಿಂದ ಪುನರಾರಂಭ
ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು.;
ಏರ್ ಇಂಡಿಯಾ ವಿಮಾನ ಮತ್ತೆ ಆರಂಭಗೊಂಡಿದೆ.
ಜೂನ್ 12ರಂದು ನಡೆದ ಬೋಯಿಂಗ್ 787-8 ವಿಮಾನ ಅಪಘಾತದ ನಂತರ ಸ್ಥಗಿತಗೊಂಡಿದ್ದ ತನ್ನ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಏರ್ ಇಂಡಿಯಾ ಆಗಸ್ಟ್ 1ರಿಂದ ತಾತ್ಕಾಲಿಕವಾಗಿ ಪುನರಾರಂಭಿಸುವುದಾಗಿ ಸೋಮವಾರ ಘೋಷಿಸಿದೆ. ಸಂಪೂರ್ಣ ಸೇವೆಗಳು ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.
ಜೂನ್ 12ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಈ ಭೀಕರ ದುರಂತದಲ್ಲಿ 242 ಪ್ರಯಾಣಿಕರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಮೃತಪಟ್ಟಿದ್ದರು. ಜೊತೆಗೆ, ನೆಲದ ಮೇಲಿದ್ದ 19 ಜನರು ಪ್ರಾಣ ಕಳೆದುಕೊಂಡಿದ್ದರು, ಇದು ದಶಕದ ಅತ್ಯಂತ ಘೋರ ವಿಮಾನ ದುರಂತವಾಗಿದೆ. ಈ ಅಪಘಾತದ ನಂತರ, ಟಾಟಾ ಗ್ರೂಪ್‌ಗೆ ಸೇರಿದ ಏರ್ ಇಂಡಿಯಾ "ಸುರಕ್ಷತಾ ವಿರಾಮ" ಘೋಷಿಸಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಈ ವಿರಾಮದ ಅವಧಿಯು ಬೋಯಿಂಗ್ 787 ವಿಮಾನಗಳ ಮೇಲೆ ಹೆಚ್ಚುವರಿ ಮತ್ತು ಎಚ್ಚರಿಕೆಯ ಪರೀಕ್ಷೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಅಲ್ಲದೆ, ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯ ವಾಯುಪ್ರದೇಶಗಳ ಮುಚ್ಚುವಿಕೆಯಿಂದ ಉಂಟಾದ ದೀರ್ಘ ಹಾರಾಟದ ಸಮಯವನ್ನು ಸರಿಹೊಂದಿಸಲಾಯಿತು ಎಂದು ವಿಮಾನ ಸಂಸ್ಥೆ ಹೇಳಿದೆ.
ಆಗಸ್ಟ್ 1ರಿಂದ ಸೆಪ್ಟೆಂಬರ್ 30ರವರೆಗೆ ಅಹಮದಾಬಾದ್-ಲಂಡನ್ (ಹೀಥ್ರೋ) ಮಾರ್ಗದಲ್ಲಿ ವಾರಕ್ಕೆ ಮೂರು ವಿಮಾನ ಸೇವೆಗಳು ಆರಂಭವಾಗಲಿವೆ. ಇದು ಈಗಿರುವ ಅಹಮದಾಬಾದ್-ಗ್ಯಾಟ್ವಿಕ್ ಮಾರ್ಗದ ವಾರಕ್ಕೆ ಐದು ವಿಮಾನಗಳ ಸೇವೆಯ ಬದಲಾಗಿರುತ್ತದೆ. ಇದೇ ಅವಧಿಯಲ್ಲಿ ಅಮೃತಸರ-ಲಂಡನ್ (ಗ್ಯಾಟ್ವಿಕ್), ಗೋವಾ (ಮೋಪಾ)-ಲಂಡನ್ (ಗ್ಯಾಟ್ವಿಕ್), ಬೆಂಗಳೂರು-ಸಿಂಗಾಪುರ ಮತ್ತು ಪುಣೆ-ಸಿಂಗಾಪುರ ಮಾರ್ಗಗಳ ಸೇವೆಗಳ ಇರುವುದಿಲ್ಲ. .
ದೆಹಲಿ-ಲಂಡನ್ (ಹೀಥ್ರೋ) ಮಾರ್ಗದಲ್ಲಿ ಕಡಿತಗೊಂಡಿದ್ದ ಎರಡು ವಾರಾಂತ್ಯ ಸೇವೆಗಳನ್ನು ಜುಲೈ 16ರಿಂದಲೇ ಮರುಆರಂಭಿಸಲಾಗಿದ್ದು, ಇದರೊಂದಿಗೆ ಒಟ್ಟು 24 ವಾರಾಂತ್ಯ ವಿಮಾನಗಳು ಜುಲೈ 16ರಿಂದಲೇ ಕಾರ್ಯನಿರ್ವಹಿಸುತ್ತಿವೆ. ದೆಹಲಿ-ಜ್ಯೂರಿಚ್ ಮಾರ್ಗದಲ್ಲಿ ಈಗಿರುವ ವಾರಕ್ಕೆ ನಾಲ್ಕು ಸೇವೆಗಳನ್ನು ಆಗಸ್ಟ್ 1ರಿಂದ ಐದು ಸೇವೆಗಳಿಗೆ ಹೆಚ್ಚಿಸಲಾಗುತ್ತದೆ. ದೆಹಲಿ-ಟೋಕಿಯೊ (ಹನೆಡಾ) ಮಾರ್ಗದಲ್ಲಿ ನಿಲುಗೊಂಡಿದ್ದ ಎರಡು ವಾರಾಂತ್ಯ ಸೇವೆಗಳನ್ನು ಆಗಸ್ಟ್ 1ರಿಂದ ಪುನರಾರಂಭಿಸಲಾಗಿದ್ದು, ಎಲ್ಲಾ 7 ವಾರಾಂತ್ಯ ವಿಮಾನಗಳು ಈಗ ಕಾರ್ಯನಿರ್ವಹಿಸಲಿವೆ. ದೆಹಲಿ-ಸೋಲ್ (ಇಂಚಿಯಾನ್) ಮಾರ್ಗದಲ್ಲಿ ಕಡಿತಗೊಂಡಿದ್ದ ಎರಡು ವಾರಾಂತ್ಯ ಸೇವೆಗಳು ಸೆಪ್ಟೆಂಬರ್ 1ರಿಂದ ಪುನರಾರಂಭಗೊಂಡು, ಎಲ್ಲಾ ಐದು ವಾರಾಂತ್ಯ ವಿಮಾನಗಳು ಚಾಲನೆಯಲ್ಲಿರುತ್ತವೆ.
"ಸುರಕ್ಷತಾ ವಿರಾಮ"ದ ಭಾಗವಾಗಿ ಜುಲೈ 31ರವರೆಗೆ ಕೈಗೊಂಡಿದ್ದ ವೇಳಾಪಟ್ಟಿ ಕಡಿತಗಳು ಜಾರಿಯಲ್ಲಿರುತ್ತವೆ. ಸೇವೆಗಳ ಸಂಪೂರ್ಣ ಪುನರಾರಂಭ ಹಂತಹಂತವಾಗಿ ನಡೆಯಲಿದೆ. ಆದ್ದರಿಂದ, ಆಗಸ್ಟ್ 1ರಿಂದ ಸೆಪ್ಟೆಂಬರ್ 30ರವರೆಗೆ ವೇಳಾಪಟ್ಟಿಯಲ್ಲಿ ಕೆಲವು ಸೇವೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.