ವಿಶ್ವಕಪ್ ಫೈನಲ್: ಭಾರತದ ಸೋಲಿಗೆ ಪಿಚ್ ಕಾರಣ ಎಂದ ರಿಕಿ ಪಾಂಟಿಂಗ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ, ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ದಾಖಲೆಯ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.;

Update: 2024-02-05 06:30 GMT

ಐಸಿಸಿ ವಿಶ್ವಕಪ್ 2023ರ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಪಿಚ್ ತಾಂತ್ರಿಕತೆ ಅರಿಯುವಲ್ಲಿ ವಿಫಲವಾಯಿತು. ಹಾಗಾಗಿ ಅವರಿಗೆ ಹಿನ್ನಡೆಯಾಯಿತು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾನುವಾರ (ನ.19) ಹೇಳಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ, ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ದಾಖಲೆಯ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟ್ರಾವಿಸ್ ಹೆಡ್ ಅಮೋಘ 137 ರನ್ ಗಳಿಸಿ ಬ್ಯಾಟಿಂಗ್ ವಿಭಾಗದಲ್ಲಿ ಹೀರೋ ಆದರು.

ಆಸ್ಟ್ರೇಲಿಯಾ ತಂಡ 47 ರನ್ ಗಳಿಸಿ 3 ವಿಕೆಟ್‌ ಕಳೆದುಕೊಂಡಾಗ ಸಂಕಷ್ಟಲ್ಲಿತ್ತು. ಆಗ ಹೆಡ್ ಮತ್ತು ಮರ‍್ನಸ್ ಲ್ಯಾಬುಸ್ಚಾಗ್ನೆ (ಔಟಾಗದೆ 58) ನಾಲ್ಕನೇ ವಿಕೆಟ್‌ಗೆ 192 ರನ್‌ಗಳನ್ನು ಸೇರಿಸಿದರು, ಆನಂತರ ಪಂದ್ಯ ಆಸ್ಟ್ರೇಲಿಯಾದತ್ತ ಕಡೆಗೆ ವಾಲಿತು.

ನಿಧಾನಗತಿಯ ಪಿಚ್‌ನಲ್ಲಿ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಆಯ್ಕೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಟಾಸ್‌ನಲ್ಲಿ ರೋಹಿತ್ ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿದರು.

ಭಾರತ ತಂಡ 10 ಓವರ್‌ಗಳ ಮೊದಲ ಪವರ್‌ಪ್ಲೇನಲ್ಲಿ 80 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತು. ಆಸ್ಟ್ರೇಲಿಯನ್ನರ ಮಾರಕ ಬೌಲಿಂಗ್‌ ದಾಳಿಗೆ ಭಾರತ ತಂಡ ಅಲ್ಪ ಮೊತ್ತ ಸೇರಿಸಲು ಮಾತ್ರ ಶಕ್ತವಾಯಿತು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 240 ಮಾತ್ರ ಗಳಿಸಿತು.

11ನೇ ಓವರ್‌ನಿಂದ 50 ಓವರ್‌ಗಳ ನಡುವೆ ಭಾರತ ಕೇವಲ ನಾಲ್ಕು ಬೌಂಡರಿಗಳನ್ನು ಮಾತ್ರ ಗಳಿಸಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ರ‍್ಧಶತಕಗಳ ಹೊರತಾಗಿ ಬೇರೆ ಯಾವ ಆಟಗಾರನು ದೊಡ್ಡ ಕೊಡುಗೆ ನೀಡಲಿಲ್ಲ.

ಫೈನಲ್‌ ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ʼʼಪಿಚ್ ತಂತ್ರವು ಭಾರತ ತಂಡಕ್ಕೆ ಹಿನ್ನಡೆಯಾಯಿತು" ಎಂದು ಹೇಳಿದರು.

"ವಿಕೆಟ್ ಹೋಗದಂತೆ ತಡೆಯಲು ಭಾರತ ತಂಡ ತಯಾರಿ ನಡೆಸಲಿಲ್ಲ, ಬಹುಶಃ ಇದು ಭಾರತದ ಸೋಲಿಗೆ ಕಾರಣವಾಯಿತು. ಈ ವಿಶ್ವಕಪ್‌ನಲ್ಲಿ ಭಾರತದ ಕೆಳ ಕ್ರಮಾಂಕವನ್ನು ಪರೀಕ್ಷಿಸದ ಕಾರಣ ಹಿನ್ನಡೆಯಾಯಿತು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್ ಪಾಂಟಿಂಗ್ ಹೇಳಿಕೆಯನ್ನು ವಿವರಿಸಿದರು. ಆರಂಭಿಕ ಹಂತದಲ್ಲಿ ತ್ವರಿತವಾಗಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ರಕ್ಷಣಾತ್ಮಕ ಆಟ ತಂಡಕ್ಕೆ ಅಲ್ಪಮಟ್ಟಿಗೆ ನೆರವಾಯಿತು” ಎಂದು ಹೇಳಿದರು.

Tags:    

Similar News