ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲು: ವಿವಾದಕ್ಕೆ ಈಡಾಯ್ತು ನ್ಯಾ.ಕಾಟ್ಜು ಹೇಳಿಕೆ

ಆಸ್ಟ್ರೇಲಿಯಾ ಎಂಬ ಹೆಸರು "ಅಸ್ತ್ರಾಲಯ"ದಿಂದ ಬಂದಿದೆ. ಮಹಾಭಾರತದ ಸಮಯದಲ್ಲಿ ಈ ಭಾಗವನ್ನು ಪಾಂಡವರ ಶಸ್ತ್ರಾಗಾರ ಎಂದು ಕರೆಯಲಾಗುತ್ತಿತ್ತು.;

Update: 2024-02-05 06:30 GMT

ಭಾನುವಾರ (ನವೆಂಬರ್ 19) ನಡೆದ 2023 ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಏಕೆ ಸೋತಿತು ಎಂಬ ಬಗ್ಗೆ ಭಾರತೀಯ ಕ್ರಿಕೆಟ್‌ ಪ್ರೇಮಿಗಳು, ತಜ್ಞರು ತಮ್ಮದೇ ಆದ ವಿವರಣೆಯನ್ನು ನೀಡುತ್ತಿದ್ದಾರೆ.

ಆಸ್ಟ್ರೇಲಿಯಾ ಎಂಬ ಹೆಸರು "ಅಸ್ತ್ರಾಲಯ"ದಿಂದ ಬಂದಿದೆ. ಮಹಾಭಾರತದ ಸಮಯದಲ್ಲಿ ಈ ಭಾಗವನ್ನು ಪಾಂಡವರ ಶಸ್ತ್ರಾಗಾರ ಎಂದು ಕರೆಯಲಾಗುತ್ತಿತ್ತು. ಆದ್ದರಿಂದಲೇ ಪಂದ್ಯವನ್ನು ಗೆದ್ದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ.

"ಆಸ್ಟ್ರೇಲಿಯಾವು ಪಾಂಡವರ 'ಅಸ್ತ್ರಗಳ' [ಆಯುಧಗಳ] ಶೇಖರಣಾ ಕೇಂದ್ರವಾಗಿತ್ತು. ಅದನ್ನು ‘ಅಸ್ತ್ರಾಲಯ’ ಎಂದು ಕರೆಯಲಾಯಿತು. ಅವರು ವಿಶ್ವಕಪ್ ಗೆಲ್ಲಲು ಇದು ನಿಜವಾದ ಕಾರಣ” ಎಂದು ನ್ಯಾಯಮೂರ್ತಿ (ನಿವೃತ್ತ) ಕಟ್ಜು ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದೂ ಆಧ್ಯಾತ್ಮಿಕ ನಾಯಕ ರವಿಶಂಕರ್ ಗುರೂಜಿ ಅವರ ವೀಡಿಯೊಂದು ಒಂದೆರಡು ವರ್ಷಗಳ ಹಿಂದೆ ವೈರಲ್ ಆಗಿತ್ತು. ಅದರಲ್ಲಿ ಅವರು ಆಸ್ಟ್ರೇಲಿಯಾ ತನ್ನ ಹೆಸರನ್ನು "ಅಸ್ತ್ರಾಲಯ" ದಿಂದ ಪಡೆಯಲಾಗಿದೆ ಎಂದು ಹೇಳಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕಾಟ್ಜು ಅವರು ಈ ಪೋಸ್ಟ್ ಅನ್ನು ವ್ಯಂಗ್ಯದಿಂದ ಪೋಸ್ಟ್‌ ಮಾಡಿದ್ದಾರೆಯೇ? ಆಥವಾ ಆ ವೀಡಿಯೊವನ್ನು ಉಲ್ಲೇಖಿಸಲಾಗಿದೆಯೇ, ಅಥವಾ ಅವರು ಗಂಭೀರವಾಗಿಯೇ ಈ ಪೋಸ್ಟ್‌ ಅನ್ನು ಮಾಡಿದ್ದಾರೆಯೇ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಾಟ್ಟು ಅವರು ಹಿಂದಿನ ಪೋಸ್ಟ್‌ನಲ್ಲಿ, “ಒಬ್ಬ ಯಾದವ, ಶ್ರೀಕೃಷ್ಣ, ಪಾಂಡವರಿಗೆ ಮಹಾಭಾರತ ಯುದ್ಧವನ್ನು ಗೆಲ್ಲಲು ಅನುವು ಮಾಡಿಕೊಟ್ಟನು. ಭಾರತ ತನ್ನ ತಂಡದಲ್ಲಿ ಒಬ್ಬರಲ್ಲ, ಇಬ್ಬರು ಯಾದವರಿದ್ದಾಗ ವಿಶ್ವಕಪ್ ಫೈನಲ್‌ನಲ್ಲಿ ಹೇಗೆ ಸೋಲಬಹುದು? ಇದು ಯಾದವರಲ್ಲ, ಆದರೆ ಅಹಿರ್‌ಗಳೆಂದು ಕೆಲವರು ಹೇಳುತ್ತಾರೆ. ಆದರೆ ನನಗೆ ಇದು ಅಚ್ಚರಿಯ ಸಂಗತಿ” ಎಂದು ಬರೆದಿದ್ದರು.

ಈ ಪೋಸ್ಟ್‌ಗೆ ನೆಟ್ಟಿಗರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ʼʼಧನ್ಯವಾದಗಳು ಸರ್. ನಿಮ್ಮ ಹಾಸ್ಯದ ಮೂಲಕ ನೀವು ನಮ್ಮನ್ನು ಗೌರವಿಸಿದ್ದೀರಿ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು "ಆಸ್ಟ್ರೇಲಿಯಾ ಲ್ಯಾಟಿನ್ ಭಾಷೆಯ ಆಸ್ಟ್ರೇಲಿಸ್‌ನಿಂದ ಬಂದಿದೆʼʼ ಎಂದು ಬರೆದಿದ್ದಾರೆ.

1970 ರಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ ನ್ಯಾಯಮೂರ್ತಿ (ನಿವೃತ್ತ) ಕಾಟ್ಜು ಅವರು ಏಪ್ರಿಲ್ 2006ರಿಂದ ಸೆಪ್ಟೆಂಬರ್ 2011 ರವರೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದರು. ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಬಹಿರಂಗವಾಗಿ ಮಾತನಾಡುವ ಇವರು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ.

ಈ ಹಿಂದೆ ಇವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮದರ್ ತೆರೇಸಾ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ಸುಭಾಷ್ ಚಂದ್ರ ಬೋಸ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು. ಪತ್ರಿಕೆಯೊಂದರ ಅಂಕಣದಲ್ಲಿ, ಅವರು ಒಮ್ಮೆ "90 ಪ್ರತಿಶತ ಭಾರತೀಯರು ಮೂರ್ಖರು" ಎಂದು ಬರೆದರು ಮತ್ತು ಬ್ಲಾಗ್‌ನಲ್ಲಿ "ಮಹಿಳೆಯರಿಂದ ದೂರವಿರಿ" ಎಂದು ಬರೆದಿದ್ದರು. ಹೀಗೆ ಆಗಾಗ ವಿವಾದಾತ್ಮಾಕ ಬರಹಗಳಿಂದ ಕಾಟ್ಜು ಅವರು ಸುದ್ದಿಯಲ್ಲಿರುತ್ತಾರೆ.

Tags:    

Similar News