ಭಾರತೀಯ ಮೂಲದ ಬ್ರಿಟನ್ ಪ್ರಜೆ ನಿತಾಶಾ ಕೌಲ್ ಅವರಿಗೆ ದೇಶಕ್ಕೆ ಪ್ರವೇಶ ನಿರಾಕರಿಸಿರುವುದು ʻಸಾರ್ವಭೌಮತ್ವದ ನಿರ್ಧಾರʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ʻಯುಕೆ ಪ್ರಜೆಯಾದ ಕೌಲ್ ಫೆಬ್ರವರಿ 22 ರಂದು ಭಾರತಕ್ಕೆ ಬಂದರು. ದೇಶಕ್ಕೆ ವಿದೇಶಿ ಪ್ರಜೆಗಳ ಪ್ರವೇಶಕ್ಕೆ ಅನುಮತಿ ನೀಡುವ/ನೀಡದೆ ಇರುವ ಅಧಿಕಾರ ನಮಗಿದೆʼ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಫೆ.29ರಂದು ಹೇಳಿದರು.
ಆರ್ ಎಸ್ ಎಸ್ ಟೀಕೆ: ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಕೌಲ್, ʻಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆʼ ಎಂದು ಎಕ್ಸ್ ನಲ್ಲಿ ಬರೆದಿದ್ದರು. ವಲಸೆ ಇಲಾಖೆ ತನಗೆ ಯಾವುದೇ ಕಾರಣವನ್ನು ನೀಡಿಲ್ಲ.ಅದು ʻದೆಹಲಿಯಿಂದ ಬಂದ ಆದೇಶʼ. ಆರ್‌ಎಸ್‌ಎಸ್‌ನ ಟೀಕೆ ಕಾರಣʼ ಎಂದು ಕೌಲ್ ಬರೆದಿದ್ದರು.
ಕೌಲ್(48) ಅವರನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಫೆಬ್ರವರಿ 24 ಮತ್ತು 25 ರಂದು ಸಮ್ಮೇಳನಕ್ಕೆ ಆಹ್ವಾನಿಸಿತ್ತು. ರಾಜ್ಯ ಬಿಜೆಪಿ ʻಆಹ್ವಾನಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿತ್ತು. ಪ್ರತಿಯಾಗಿ ಕಾಂಗ್ರೆಸ್,ಅವರ ಗಡಿಪಾರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಟೀಕಿಸಿತ್ತು.