ಗಬ್ಬೆದ್ದಿರುವ ಪಬ್ಲಿಕ್‌ ಟಾಯ್ಲೆಟ್‌ಗಳಲ್ಲಿ (ಅ)ವ್ಯವಸ್ಥೆಯ ʼಸರ್ವದರ್ಶನʼ!?

ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ.;

Update: 2024-02-10 08:05 GMT
ಸಾರ್ವಜನಿಕ ಶೌಚಾಲಯದ ಸಾಂದರ್ಭಿಕ ಚಿತ್ರ

ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಶೇಕಡಾ 91 ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿಗಾಗಿ ಕಸದಬುಟ್ಟಿಗಳನ್ನೇ ಇಡಲಾಗಿಲ್ಲ.ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಶೇಕಡಾ 91 ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿಗಾಗಿ ಕಸದಬುಟ್ಟಿಗಳನ್ನೇ ಇಡಲಾಗಿಲ್ಲ.ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಶೇಕಡಾ 91 ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿಗಾಗಿ ಕಸದಬುಟ್ಟಿಗಳನ್ನೇ ಇಡಲಾಗಿಲ್ಲ.ಬೆಂಗಳೂರು: ಸಿಲಿಕಾನ್ ನಗರ ಬೆಂಗಳೂರಿನಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಹೇಗಿದೆ ಎಂದರೆ ವಿಶೇಷ ಚೇತನರು ಪ್ರವೇಶಿಸುವುದು ಕಷ್ಟ. ಮಹಿಳೆಯರಿಗೆ ಬಾಗಿಲುಗಳ ಚಿಲಕವಿಲ್ಲದ, ಇತರ ಸೌಲಭ್ಯಗಳಿಲ್ಲದ ಸಂಕಷ್ಟ.

ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿರುವುದು ಗುವು ಚೇಂಜ್ ಲೀಡರ್ (Nguvu Change Leader ) ಎಂಬ ಸ್ವಯಂಸೇವಾ ಸಂಸ್ಥೆಯೊಂದು ಬೆಂಗಳೂರಿನಲ್ಲಿ ನಡೆಸಿದ 'ದ ಬಿಗ್ ಬೆಂಗಳೂರು ಟಾಯ್ಲೆಟ್ ಸರ್ವೇ"ಯ ಮೂಲಕ!

ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ೪೮ ಸಾರ್ವಜನಿಕ ಶೌಚಾಲಯಗಳ ಆತಂಕಕಾರಿ ಪರಿಸ್ಥಿತಿ ಹಾಗೂ ಆದ್ಯತೆಗಳನ್ನು ಬಹಿರಂಗಪಡಿಸಿವೆ. ಸಮೀಕ್ಷೆ ಯಲ್ಲಿ 32 ಸ್ವಯಂಸೇವಕರ ತಂಡ ಭಾಗಿಯಾಗಿತ್ತು ಮತ್ತು ಸಮೀಕ್ಷೆಯ ಭಾಗವಾಗಿ ವಿಡಿಯೋ ದಾಖಲೀಕರಣ, ಆಯ್ದ ವ್ಯಕ್ತಿಗಳ, ಸಂಬಂಧಿತರ ಸಂದರ್ಶನ ನಡೆಸಲಾಗಿದೆ, ಸಮೀಕ್ಷೆಯ ಸಮಯದಲ್ಲಿ ದಾಖಲಾದ ವೀಡಿಯೋ ಪುರಾವೆಗಳು ಪುರುಷ ಮತ್ತು ಮಹಿಳಾ ಶೌಚಾಲಯಗಳ ವಾಸ್ತವಿಕ ವ್ಯವಸ್ಥೆಯನ್ನು ಬಯಲು ಮಾಡಿದೆ.

ಆತಂಕಕಾರಿ ವಿಷಯವೆಂದರೆ ಈ ಶೌಚಾಲಯಗಳನ್ನು ಶುಚಿಗೊಳಿಸುವ ಪುರುಷ ಮತ್ತು ಮಹಿಳಾ ಸಿಬಂದಿ ಶೌಚಾಲಯದ ಆವರದಲ್ಲೇ ವಾಸವಾಗಿರುವ ನಿದರ್ಶನಗಳೂ ಇವೆ. ಜತಗೆ ಶೌಚಾಲಯ ಪ್ರವೇಶಿಸವವರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯೇ ಸವಾಲಾಗುವ ಸಾಧ್ಯತೆಯನ್ನೂ ಸಮೀಕ್ಷೆ ಸಾಕ್ಷೀಕರಿಸಿದೆ.

ಸಮೀಕ್ಷೆ ನಡೆಸಿದ ಸಂಸ್ಥೆಯ ಪ್ರತಿನಿಧಿ ಅರ್ಚನಾ ಕೆ ಆರ್ ಹೇಳುವ ಪ್ರಕಾರ, ಶೇಕಡಾ 75 ರಷ್ಟು ಶೌಚಾಲಯಗಳು ಸರಿಯಾದ ಬಾಗಿಲುಗಳು ಮತ್ತು ಬಾಗಿಲ ಬೀಗಗಳನ್ನು ಹೊಂದಿರುವುದಿಲ್ಲ ಈ ಶೌಚಾಲಯಗಳಲ್ಲಿ ಶೇಕಡಾ 66 ಅಸಮರ್ಪಕ ಬೆಳಕನ್ನು ಹೊಂದಿದ್ದು, ವಿಶೇಷವಾಗಿ ರಾತ್ರಿಯಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತವಾಗಿದೆ. " ನಮ್ಮ ಸಮೀಕ್ಷೆಯು ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಭಯಾನಕ ಪರಿಸ್ಥಿತಿಗಳನ್ನು ಬಹಿರಂಗಪಡಿಸಿದೆ. ನಾವು ಒಂದೊಂದು ಶೌಚಾಲಯವನ್ನು ಗಮನಿಸಿದರೂ, ಮಹಿಳೆಯರಿಗೆ ಅಸುರಕ್ಷಿತ ಭಾವನೆಯನ್ನು ಉಂಟುಮಾಡುವ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದು ಸಾರ್ವಜನಿಕ ಶೌಚಾಲಯಗಳ ಸಂಬಂಧ ಆಡಳಿತಾತ್ಮಕ ಮಟ್ಟದಲ್ಲಿ ಸರಿಯಾದ ನೀತಿ ನಿರೂಪಣೆಯಾಗಬೇಕಾದ ಅನಿವಾರ್ಯತೆಯನ್ನಯ ತೋರಿಸುತ್ತದೆ ಎಂದು ಹೇಳಿದರು.

ಬೆಂಗಳೂರಿನ 48 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಶೇಕಡಾ 91 ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿಗಾಗಿ ಕಸದಬುಟ್ಟಿಗಳನ್ನೇ ಇಡಲಾಗಿಲ್ಲ. ಸಮರ್ಪಕ ಬಾಗಿಲುಗಳಿಲ್ಲದ ಈ ಮಹಿಳಾ ಶೌಚಾಲಯಗಳು ಅಲ್ಲಲ್ಲಿ ಎಸೆದ ಬಳಸಿದ ಪ್ಯಾಡ್ಗಳು, ಟಿಶ್ಯೂಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಮೂಲಕ ತೆರೆದ ತೊಟ್ಟಿಗಳಂತೆ ಭಾಸವಾಗುತ್ತದೆ. ಶೇಕಡಾ ೫೦ರಷ್ಟ್ಟು ಶೌಚಾಲಯಗಳಲ್ಲಿ ಒಳಚರಂಡಿ ವ್ಯವಸ್ಥೆಯ ಸಂಪರ್ಕವೇ ಇಲ್ಲದೆ ಮನುಷ್ಯರು ಪ್ರವೇಶಿಸದಂತಹ, ಪ್ರವೇಶಿದರೂ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡೇ ಹೋಗುವ ಕೆಟ್ಟ ಪರಿಸ್ಥಿತಿ ಕಂಡು ಬಂದಿದೆ. ಈ ರೀತಿ ನೈರ್ಮಲ್ಯದ ಅರ್ಥವನ್ನೇ ಕಳೆದುಕೊಂಡಿರುವ ಈ ಪಬ್ಲಿಕ್ ಟಾಯ್ಲೆಟ್ (ಸಾರ್ವಜನಿಕ ಶೌಚಾಲಯ)ಗಳಲ್ಲಿ ಆಗತ್ಯ ನೀರು, ಮಗ್ಗಳು, ಶುಚಿಗೊಳಿಸುವ ಪೊರಕೆಯಂತಹ ಸಾಮಗ್ರಿಗಳೇ ಕಣ್ಮರೆಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

ಭೇದಭಾವ

ಈ ಶೌಚಾಲಯಗಳಲ್ಲಿ ಮಹಿಳೆ ಮತ್ತು ಪುರುಷರ ಬಳಕೆಯ ಸಂಬಂಧಿ ಇರುವ ತಾರತಮ್ಯ ನೀತಿ ಮತ್ತು ಲಿಂಗ ಬೇಧ ನೀತಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಪುರುಷ ಬಳಕೆದಾರರಿಗೆ ಕೇವಲ 2 ರೂಪಾಯಿಗಳನ್ನು ವಿಧಿಸಲಾಗಿದ್ದು, ಮಹಿಳಾ ಬಳಕೆದಾರರು 5 ರೂಪಾಯಿಗಳನ್ನು ಪಾವತಿಸುತ್ತಾರೆ. ಇನ್ನೂ ವಿಚಿತ್ರವೆಂದರೆ, ಸದಾ ವಿಶೇಷ ಚೇತನ ವ್ಯಕ್ತಿಗಳತ್ತ ʼಮೊಸಳೆ ಕಣ್ಣೀರುʼ ಸುರಿಸುವ ಬಿಬಿಎಂಪಿ ಆಡಳಿತಕ್ಕೆ ಅದರ ಪಬ್ಲಿಕ್ ಟಾಯ್ಲಟ್ಗಳಲ್ಲಿ ವಿಶೇಷ ಚೇತನರಿಗೆ ಬಳಕೆಯೇ ಕಷ್ಟ ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಶೇಕಡಾ ೯೧ ಶೌಚಾಲಯಗಳು ವಿಶೇಷ ಚೇತನ ಸ್ನೇಹಿ ಶೌಚಾಲಯಗಳಾಗಿಲ್ಲ ಎಂಬುದನ್ನು ಸಮೀಕ್ಷೆ ದಾಖಲೆಗಳು ಸಿದ್ಧಪಡಿಸಿವೆ.

ಸ್ವಚ್ಛತಾ ಸಿಬಂದಿ

ಈ ಶೌಚಾಲಯಗಳ ಸ್ವಚ್ಛತಾ ಸಿಬಂದಿ ಶೌಚಾಲಯಗಳ ಆವರಣದಲ್ಲೇ ವಾಸವಾಗಿರುವುದು ಮತ್ತು ಆಮಾನವೀಯವಾಗಿ ಬದುಕು ಸಾಗಿಸುತ್ತಿರುವುದು ಬಿಬಿಎಂಪಿ ಕಣ್ಣಿನಡಿಯಲ್ಲೇ ಕಂಡುಬಂದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ವಲಸೆ ಬಂದವರಾಗಿದ್ದು, ಶೌಚಾಲಯಗಳಲ್ಲೇ ವಾಸ ಮತ್ತು ಶುಚಿಗೊಳಸುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಅರಿವಿಲ್ಲದೆ ಇರುವುದು ಹಾಗೂ ಆ ಸಂಬಂಧ ಅಗತ್ಯ ಉಪಕರಣಗಳ ಕೊರತೆಯಿಂದಾಗಿ ಚರ್ಮದ ಅಲರ್ಜಿ, ಉಸಿರಾಟ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದೂ ಸಮೀಕ್ಷೆಯಿಂದ ಕಂಡುಬಂದಿದೆ.

ಶೌಚಾಲಯದೊಳಗೆ ವಾಸಿಸುವುದು ಅವರ ಆರೋಗ್ಯ ತೊಂದರೆಗಳನ್ನು ಹೆಚ್ಚಿಸುತ್ತದೆ ಮತ್ತು ಭಾಷೆಯ ಅಡೆತಡೆಗಳಿಂದಾಗಿ (ಬಹುತೇಕರು ಅನ್ಯರಾಜ್ಯದವರು) ಅವರು ತಮ್ಮ ಅಗತ್ಯಗಳನ್ನು ತಿಳಿಸಲು ಅಥವಾ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಹೆಣಗಾಡುತ್ತಾರೆ. ನಿಗದಿತ ಸಂಬಳವಿಲ್ಲದಿರುವುದು, ಸಾರ್ವಜನಿಕರು ನೀಡುವ ಇಂತಿಷ್ಟು ಹಣದ ಮೇಲಿನ ಅವಲಂಬನೆ ಮತ್ತು (ಅ)ವ್ಯವಸ್ಥೆಯ ಮೇಲೆ ಸಾರ್ವಜನಿಕರು ತೋರುವ ಸಿಟ್ಟು ಈ ಅಮಾಯಕರ ಮೇಲೆ ಬೀಳುವುದು.. ಒಟ್ಟಾರೆಯಾಗಿ ಶೌಚಾಲಯ ಕಾರ್ಮಿಕರ ಪರದಾಟಕ್ಕೆ ಕಾರಣವಾಗಿರುವುದಾಗಿ ಶೇಖಡಾ 44 ಮಂದಿ ತಿಳಿಸಿದ್ದಾರೆ.

ಅಸ್ತಿತ್ವದಲ್ಲಿರುವ ಶೌಚಾಲಯಗಳ ಪ್ರಸ್ತುತ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ಶೌಚಾಲಯ ಯೋಜನೆಗಳನ್ನು ಪ್ರಾರಂಭಿಸುವಾಗ ಸರಿಪಡಿಸುವ ಕ್ರಮಗಳನ್ನು ಜಾರಿಗೆ ತರಲು ಬಿಬಿಎಂಪಿ ಇದೇ ರೀತಿಯ ಸಮೀಕ್ಷೆಗಳನ್ನು ನಡೆಸಬೇಕು ಎಂದು ಅರ್ಚನಾ ಮತ್ತು ಅವರ ತಂಡ ಹೇಳುತ್ತಾರೆ. "ಸಾರ್ವಜನಿಕರಿಗೆ ನಿಜವಾಗಿಯೂ ಸೇವೆ ಸಲ್ಲಿಸುವ ಮೂಲಸೌಕರ್ಯಗಳನ್ನು ರಚಿಸಲು ನೆಲದ ವಾಸ್ತವಗಳ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಅತ್ಯಗತ್ಯ. ಕರ್ನಾಟಕ ಸರ್ಕಾರವು ನಗರಾಭಿವೃದ್ಧಿಗೆ ಜವಾಬ್ದಾರಿಯುತ ಮತ್ತು ಸ್ಪಂದಿಸುವ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ, ”ಎಂದು ಅರ್ಚನಾ ಹೇಳುತ್ತಾರೆ.

ಮುಖ್ಯಾಂಶಗಳು

* 91% ಶೌಚಾಲಯಗಳು ವಿಶೇಷ ಚೇತನರಿಗೆ ಅನುಕೂಲಕರವಾಗಿಲ್ಲ.

* 75% ಶೌಚಾಲಯಗಳಿಗೆ ಬೀಗಗಳೇ ಸರಿಯಾಗಿಲ್ಲ. ಬಾಗಿಲಿಗೆ ಚಿಲಕಗಳೇ ಇಲ್ಲ.

* 91% ಮಹಿಳಾ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿಲೇವಾರಿ ಮಾಡಲು ಕಸದ ತೊಟ್ಟಿಗಳಿಲ್ಲ.

* 100% ಶೌಚಾಲಯಗಳಲ್ಲಿ ಪ್ರತಿ ಭೇಟಿಗೆ ಪುರುಷರು ರೂ. 2, ಮಹಿಳೆಯರು ರೂ. 5 ರೂ.ಪಾವತಿಸಬೇಕು.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ (SWM) ವಿಭಾಗದ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಪ್ರಸ್ತುತ 803 ಸಾರ್ವಜನಿಕ ಶೌಚಾಲಯಗಳಿವೆ ಆದರೆ ಇವುಗಳಲ್ಲಿ ಎಷ್ಟು ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಇದಲ್ಲದೆ, ಸ್ವಚ್ಛ ಭಾರತ್ ಮಿಷನ್ ಮಾನದಂಡಗಳ ಪ್ರಕಾರ, ನಗರಕ್ಕೆ ಕನಿಷ್ಠ 1,300 ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ.

Tags:    

Similar News