ಬಳಸಿದ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ನಂ.2!

ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ ಸಂಸ್ಥೆ ನಡೆಸಿದ ಸಮೀಕ್ಷೆ

Update: 2024-03-13 13:15 GMT
ಬೆಂಗಳೂರು

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಈ ನಡುವೆ ಸರ್ಕಾರ, ಜಲಮಂಡಳಿ ಹಾಗೂ ಬಿಬಿಎಂಪಿ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸೂಕ್ತ ಪರಿಹಾರ ಕಂಡುಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆದರೆ, ಅಚ್ಚರಿ ಎನ್ನುವಂತೆ ಬಳಸಿದ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ಭಾರತದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ ಹಾಗೂ ವಾಟರ್ ಆ್ಯಂಡ್ ಎನ್ವಿರಾನ್‌ಮೆಂಟ್ ಎನ್ನುವ ಸಂಸ್ಥೆ ಸಮೀಕ್ಷೆಯೊಂದನ್ನು ನಡೆಸಿದ್ದು, ಈ ಸಮೀಕ್ಷೆಯಲ್ಲಿ ಬೆಂಗಳೂರು ಬಳಸಿದ ನೀರಿನ ನಿರ್ವಹಣೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಸಮೀಕ್ಷೆ ಮಾಡುವುದಕ್ಕೆ ಭಾರತದ 10 ಪ್ರಮುಖ ರಾಜ್ಯಗಳ ಪೈಕಿ 500 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಅನುಕ್ರಮವಾಗಿ ಹರಿಯಾಣ ಹಾಗೂ 1.94 ಮತ್ತು 1.74 ಅಂಕ ಗಳಿಸಿವೆ. ಈ ರಾಜ್ಯಗಳ ಪ್ರಮುಖ ನಗರಗಳಾದ ಸೂರತ್ ಮತ್ತು ಬೆಂಗಳೂರು ಸಮೀಕ್ಷೆಯಲ್ಲಿ ಅತ್ಯುತ್ತಮ ವಿಭಾಗದಲ್ಲಿವೆ. ಬಳಸಿದ ನೀರು ನಿರ್ವಹಣೆಯಲ್ಲಿ ಹರಿಯಾಣದ ಹಲವು ನಗರಗಳು ಉತ್ತಮ ಸ್ಥಾನದಲ್ಲಿವೆ. ಗುಜರಾತ್ ಹಾಗೂ ಕರ್ನಾಟಕ ಬಳಸಿದ ನೀರನ್ನು ಉತ್ತಮವಾಗಿ ಸಂಸ್ಕರಿಸುತ್ತಿವೆ.

ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿಯು ʼಬಳಸಿದ ನೀರಿನ ನಿರ್ವಹಣೆʼ ವಿಷಯದ ಆಧಾರದ ಮೇಲೆ ಅಧ್ಯಯನ ನಡೆಸಿತ್ತು. ಕರ್ನಾಟಕವೂ ಸೇರಿದಂತೆ 10 ರಾಜ್ಯಗಳು ಸಂಸ್ಕರಿಸಿದ ಗೃಹ ತ್ಯಾಜ್ಯದ ನೀರನ್ನು ಮರುಬಳಕೆ ಮಾಡಲು ಸಂಸ್ಕರಿಸಿ ಬಳಸುವ ನೀರು ನಿರ್ವಹಣಾ ನೀತಿಯನ್ನು ಅಳವಡಿಸಿಕೊಂಡಿವೆ.

Tags:    

Similar News