Tungabhadra Dam Gate Break | ಚೀಫ್ ಎಂಜಿನಿಯರ್​ ಹುದ್ದೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ? ಎಚ್​ಡಿಕೆ ಪ್ರಶ್ನೆ

Update: 2024-08-13 10:26 GMT

ʻʻತುಂಗಭದ್ರಾ ಜಲಾಶಯದ ಚೀಫ್ ಎಂಜಿನಿಯರ್ ಹುದ್ದೆಗೆ ಎಷ್ಟೆಷ್ಟು ರೇಟ್ ಫಿಕ್ಸ್ ಮಾಡಿದ್ದೀರಾ?ʼʼ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಚೈನ್ ಕತ್ತರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ʻʻಸೇಫ್ಟಿ ಮೆಜಾರಿಟಿ ಕಮಿಟಿಗೆ ಒಂದು ಫಾರ್ಮೇಟ್ ಕೊಟ್ಟಿರುತ್ತಾರೆ. ಪ್ರತಿಯೊಂದು ವಸ್ತುಗಳನ್ನು ಚೆಕ್ ಮಾಡಬೇಕು. ಪ್ರತಿವರ್ಷ ಲೂಬ್ರಿಕೇಷನ್ ಮಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 2021ರಲ್ಲಿ ಹೊಸ ಕಾನೂನು ತಂದಿದೆ. ಅದರ ಪ್ರಕಾರ ಕೇಂದ್ರ ಸರ್ಕಾರದಿಂದ ಒಬ್ಬ, ರಾಜ್ಯ ಸರ್ಕಾರದಿಂದ ಒಬ್ಬ ಅಧಿಕಾರಿ ಇರುತ್ತಾರೆ. ಚೀಫ್ ಎಂಜಿನಿಯರ್‌ನ ನೇಮಕ ಮಾಡೋಕೆ ಎಷ್ಟೆಷ್ಟು ಫಿಕ್ಸ್ ಮಾಡಿದ್ದಿರಾ? ಎಂಡಿ, ಚೀಫ್ ಇಂಜಿನಿಯರ್ ನೇಮಕಕ್ಕೆ ಎಷ್ಟು ಲಂಚ ಪಡೆದಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದಾರೆ.

"ತುಂಗಭದ್ರಾ ಡ್ಯಾಂಗೆ 70 ವರ್ಷ ಆಗಿದೆ. ಇದು ಟಿಬಿ ಬೋರ್ಡ್‌ಗೆ ಬರುತ್ತದೆ. ಆಂಧ್ರ, ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ. ಈ ಕುರಿತು ರಿಪೊರ್ಟ್ ಕೊಡುವುದಕ್ಕೆ ಎಂದು ಒಂದು ಕಮಿಟಿ ಇದೆ. 122 ಟಿಎಂಸಿ ನಮ್ಮ ರಾಜ್ಯಕ್ಕೆ ಸಿಗಬೇಕು, 73 ಟಿಎಂಸಿ ನೀರು ಆಂಧ್ರಕ್ಕೆ ಸಿಗಬೇಕು. 103 ಟಿಎಂಸಿ ಈಗ ಸಿಗುತ್ತಿದೆ. ಇನ್ನು ದುಡ್ಡು ಕೊಟ್ಟು ಬಂದ ಅಧಿಕಾರಿಯು ಈ ಡ್ಯಾಂ ಏನಾಗಿದೆ, ಗೇಟ್ ಏನಾಗಿದೆ ಎಂದು ಏಕೆ ನೋಡುತ್ತಾನೆ? ಈಗ ತರಾತುರಿಯಲ್ಲಿ ರಿಪೇರಿ ಮಾಡೋದಕ್ಕೆ ಹೋಗಿ ಮತ್ತೆ ಏನೇನೋ ಅವಾಂತರ ಆಗುವುದು ಬೇಡ, ರೈತರಿಗೆ ವಿಶ್ವಾಸ ಬರುವಂತೆ ಮಾಡಿ. ನಿಮ್ಮ ಊಹೆ ಮೇಲೆ ನಿರ್ಧಾರ ಮಾಡಿ ರೈತರ ಬೆಳೆ ನಷ್ಟ ಮಾಡಬೇಡಿʼʼ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Tags:    

Similar News