ಮುಳುಗುತ್ತಿದ್ದ ಯುವಕನನ್ನು ರಕ್ಷಿಸುವಾಗ ದುರಂತ: ನಾಲ್ವರ ದಾರುಣ ಸಾವು
ಇಬ್ಬರ ಮೃತದೇಹ ಪತ್ತೆ: ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ;
ಕಾವೇರಿ ನದಿಯಲ್ಲಿ ಈಜುತ್ತಿದ್ದ ನಾಲ್ವರು ದಾರುಣ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯದಲ್ಲಿ ಸಂಭವಿಸಿದೆ.
ಮೈಸೂರಿನಿಂದ ಮಂಡ್ಯದ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಅವಘಡ ನಡೆದಿದೆ.
ಕಾವೇರಿಯಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಯುವಕರ ತಂಡದಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಮೈಸೂರು ಮೂಲದ ನಾಗೇಶ್ (40), ಭರತ್ (17), ಗುರು (32) ಮತ್ತು ಮಹದೇವ್ (16 ) ಎಂದು ಗುರುತಿಸಲಾಗಿದೆ. ಇಲ್ಲಿಯ ವರೆಗೆ ಇಬ್ಬರ ಮೃತದೇಹ ಪತ್ತೆ ಮಾಡಲಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ಮಂಡ್ಯದ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಮೈಸೂರಿನಿಂದ 40 ಜನರು ಪ್ರವಾಸಕ್ಕೆಂದು ಒಂದೇ ಬಸ್‌ನಲ್ಲಿ ಪ್ರಯಾಣಿಸಿದ್ದರು. ಕಾವೇರಿ ನದಿಯಲ್ಲಿ ಈಜುವ ಸಂದರ್ಭದಲ್ಲಿ ಮೊದಲಿಗೆ ಯುವಕ ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಲು ಮೂವರು ಮುಂದಾಗಿದ್ದಾರೆ. ಆದರೆ, ನೀರಿನ ಸೆಳತಕ್ಕೆ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ.