ಮೆಟ್ರೋ ಕಾಮಗಾರಿ ವಿಳಂಬ | BMRCL ವಿರುದ್ಧ ಸಂಸದ ತೇಜಸ್ವಿ ಸೂರ್ಯ ತರಾಟೆ

ಮೆಟ್ರೋ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ರಾಷ್ಟ್ರೀಯಾ ವಿದ್ಯಾಲಯ ರಸ್ತೆಯಿಂದ ಇಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಯೆಲ್ಲೋ ಮೆಟ್ರೋ ಕಾಮಾಗಾರಿ ಇನ್ನು ಪೂರ್ಣಗೊಂಡಿಲ್ಲ ಎಂದು ಸಂಸದರು ತರಾಟೆಗೆ ತೆಗೆದುಕೊಂಡರು

Update: 2024-08-24 13:34 GMT
ತೇಜಸ್ವಿ ಸೂರ್ಯ

ಮೆಟ್ರೋ ಮೂರನೇ ಹಂತದ ಮಾರ್ಗಕ್ಕೆ ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಅನುಮತಿ ನೀಡಿತ್ತು. ಅದರ ಬೆನ್ನಲ್ಲೇ ಶನಿವಾರ(ಆ.24) ಸಂಸದ ತೇಜಸ್ವಿ ಸೂರ್ಯ ಮೆಟ್ರೋ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮೂರನೇ ಹಂತದ ಮೆಟ್ರೋ ಮಾರ್ಗ ಪರಿಶೀಲನೆ ನಡೆಸಿದರು. ಜೆಪಿ ನಗರದ 4 ನೇ ಹಂತದಿಂದ ಮಾರ್ಗ ಪರಿಶೀಲಿಸಿದರು.

ಬಳಿಕ ಮಾಧ್ಯವದವರೊಂದಿಗೆ ಮಾತನಾಡಿದ ಅವರು, ಮೆಟ್ರೋ ಕಾಮಗಾರಿ ನಿಧಾನಗತಿಯ ವಿರುದ್ಧ ಬಿಎಂಆರ್‌ಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲೂ ಇರುವ ಒಂದೇ ಪರಿಹಾರ ಎಂದರೆ ಮೆಟ್ರೋ ಎಂದು ಸಾರ್ವಜನಿಕರಿಗೆ ಹಾಗೂ ಮೆಟ್ರೋ ಅಧಿಕಾರಿಗಳಿಗೂ ತಿಳಿದಿದೆ. ಆದರೂ ಮೆಟ್ರೋ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ರಾಷ್ಟ್ರೀಯಾ ವಿದ್ಯಾಲಯ ರಸ್ತೆಯಿಂದ ಇಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಯೆಲ್ಲೋ ಮೆಟ್ರೋ ಕಾಮಾಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಾಗಲೇ ಮೂರು ವರ್ಷ ತಡವಾಗಿದೆ ಎಂದು ಸಂಸದರು ಪ್ರಶ್ನಿಸಿದರು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಉದ್ಘಾಟನೆ ಆಗಬೇಕಿದ್ದ ಎಲ್ಲೋ ಮೆಟ್ರೋ ಮಾರ್ಗ, ಈಗ 2025ರ ಆರಂಭದಲ್ಲಿ ಉದ್ಘಾಟನೆ ಆಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಸಾರ್ವಜನಿಕರ ಹಣದಿಂದ ಆಗುತ್ತಿರುವ ಈ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ನೀವು ಏನು ಮಾಡುತ್ತಿದ್ದೀರಿ? ಜನರು ಎಷ್ಟು ದಿನ ಅಂತ ಟ್ರಾಫಿಕ್ ಸಮಸ್ಯೆಗಳಿಗೆ ಒಳಗಾಗುವುದು ಎಂದು ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tags:    

Similar News