The Federal Interview: ಕನ್ನಡ ಮಾತನಾಡಲ್ಲ ಎಂದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮ್ಯಾನೇಜರ್! ಬ್ಯಾಂಕ್‌ನಲ್ಲಿ ನಡೆದದ್ದೇನು?

ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಮಹಿಳಾ ಮ್ಯಾನೇಜರ್ ಕನ್ನಡ ಮಾತನಾಡುವ ವಿಚಾರದಲ್ಲಿ ಗ್ರಾಹಕರೊಬ್ಬರ ಜೊತೆ ಏರು ದನಿಯಲ್ಲಿ ಮಾತನಾಡಿರುವ ಘಟನೆ ನಡೆದಿದ್ದು, ಇದು ವ್ಯಾಪಕ ಖಂಡನೆಗೆ ಒಳಗಾಗಿದೆ.;

Update: 2025-05-21 13:37 GMT

ಇಡೀ ರಾಜ್ಯಾದ್ಯಂತ ಸಾಕಷ್ಟು ಚರ್ಚೆ ಹಾಗು ವೈರಲ್ ಆಗಿರುವ ಆನೇಕಲ್ ನ ಸೂರ್ಯನಗರದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಮಹಿಳಾ ಮ್ಯಾನೇಜರ್ ಕನ್ನಡ ಮಾತನಾಡುವ ವಿಚಾರದಲ್ಲಿ ಗ್ರಾಹಕರೊಬ್ಬರ ಜೊತೆ ಏರು ದನಿಯಲ್ಲಿ ಮಾತನಾಡಿರುವ ಘಟನೆ ನಡೆದಿದ್ದು, ಇದು ವ್ಯಾಪಕ ಖಂಡನೆಗೆ ಒಳಗಾಗಿದೆ.

ಬ್ಯಾಂಕ್‌ನ ಆ ಅಧಿಕಾರಿ ಕನ್ನಡ ಮಾತನಾಡದೆ ಗ್ರಾಹಕರೊಬ್ಬರಿಗೆ ಏರು ದನಿಯಲ್ಲಿ ಮಾತನಾಡಿದ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಹಾ ಇದನ್ನು ಖಂಡಿಸಸುವ ಪರಿಸ್ಥಿತಿ ಬಂತು. ಕೊನೆಗೂ ಆ ಮ್ಯಾನೇಜರ್‌  ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ.

ಆದರೆ, ಈ ಘಟನೆ ನಡೆದದ್ದು ಗ್ರಾಹಕ ಮಹೇಶ್‌ ಎಂಬವರ ಜತೆ. ಘಟನೆ ನಡೆದ ಬಗ್ಗೆ  ಖುದ್ದು ಮಹೇಶ್ ಅವರು ಪೆಡರಲ್ ಕರ್ನಾಟಕದ ಜೊತೆ ಇಂಚಿಂಚೂ ವಿವರಿಸಿದ್ದಾರೆ.‌ ಅವರ ಕಿರು ಸಂದರ್ಶನದ ವಿವರ ಇಲ್ಲಿದೆ.

ವಿಡಿಯೋ ಮಾಡುವ ಮುಂಚೆ ನಡೆದ ಘಟನೆ ಏನು?

"ನಾನು ಹಣ ಕಟ್ಟುವ ವಿಚಾರಕ್ಕೆ ಸಂಬಂದಿಸಿದಂತೆ  ಬ್ಯಾಂಕಿಗೆ ಮಂಗಳವಾರ ಬೆಳಿಗ್ಗೆ ಹೋಗಿದ್ದೆ. ಬ್ಯಾಂಕಿಗೆ ಹೋದ ವೇಳೆ ಕೌಂಟರ್ ಗಳಲ್ಲಿ ಸಿಬ್ಬಂದಿ ಯಾರೂ ಇರಲಿಲ್ಲ. ಈ ವೇಳೆ ಮ್ಯಾನೇಜರ್ ಬಳಿ ಹೋಗಿ ಕೌಂಟರ್ ನಲ್ಲಿ ಯಾರೂ ಇಲ್ಲ ಯಾಕೆ ಎಂದು ಕೇಳಿದೆ. ಅದಕ್ಕೆ ಹಿಂದಿಯಲ್ಲಿ ಬರುತ್ತಾರೆ ಹೋಗಿ ಕುಳಿತುಕೊಳ್ಳಿ ಎಂದು ಹೇಳಿದರು. ಅದಕ್ಕೆ ನಾನು ಕನ್ನಡ ಬರಲ್ವಾ ಎಂದು ಸಾಮನ್ಯವಾಗಿ ಹೇಳಿದೆ. ಅಷ್ಟಕ್ಕೆ ನಾನು ಕನ್ನಡದಲ್ಲಿ ಮಾತನಾಡಲ್ಲ ಎಂದು ಜೋರು ದನಿಯಲ್ಲಿ ಹೇಳಿದರು. ಆಗ ನಾನು ಯಾಕೆ ಕನ್ನಡ ಮಾತನಾಡಲ್ಲ ಎಂದು ಕೇಳಿದೆ," ಎನ್ನುತ್ತಾರೆ ಮಹೇಶ್‌.

" ಮೊದಲು ಅವರು ಜೋರು ದನಿಯಲ್ಲಿ ಮಾತನಾಡಿದರು. ಬೇಕಿದ್ದರೆ ಸಿಸಿ ಟಿವಿ ಪರೀಕ್ಷಿಸಲಿ. ಕನ್ನಡ ಮಾತನಾಡಲ್ಲ ಏನು ಬೇಕಾದರೆ ಮಾಡಿಕೊಳ್ಳಿ ಎಂದು ಉದ್ದಟತನ ತೋರಿದರು. ಮೊದಲು ನಾನು ಕೇಳಿದಾಗ ಕನ್ನಡದರವರು ಬರುತ್ತಾರೆ ನನಗೆ ಕನ್ನಡ ಬರಲ್ಲ ಸ್ವಲ್ಪ ಕಾಯಿರಿ ಎಂದು ಸೌಜನ್ಯವಾಗಿ ಹೇಳಿದ್ದರೆ ನಾನು ಸುಮ್ಮನಾಗುತ್ತಿದ್ದೆ. ಆದರೆ ಜೋರು ದನಿಯಲ್ಲಿ ಕನ್ನಡ ಮಾತನಾಡಲ್ಲ ಏನು ಬೇಕಾದರು ಮಾಡಿಕೊಳ್ಳಿ ಎಂದು ಹೇಳಿದ ಕಾರಣ ವಿಡಿಯೋ ಮಾಡಿದೆ," ಎನ್ನುತ್ತಾರೆ ಮಹೇಶ್.‌

"ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡದ ಅಧಿಕಾರಿಗಳ ಸಂಬಂಧ ಕ್ರಮ ಕೈಗೊಳ್ಳೂವಂತೆ ಕೇವಲ  ಟ್ವೀಟ್ ಮಾಡಿದರೆ ಸಾಲದು. ಕನ್ನಡಕ್ಕೆ ಅವಮಾನ ಆದಾಗ ಕಠಿಣ ಕ್ರಮಕೈಗೊಳ್ಳಬೇಕು. ಬೇರೆ ರಾಜ್ಯದಲ್ಲಿ ಹೋಗಿ ನೋಡಲಿ ಅವರ ಸ್ಥಳೀಯ ಭಾಷೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಅಂತಾ.. " ಎಂಬುದು ಮಹೇಶ್‌ ಅಭಿಪ್ರಾಯ.

ಏನಿದು ಪ್ರಕರಣ?

ಆನೇಕಲ್‌ ತಾಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಗ್ರಾಹಕರೊಬ್ಬರು ಮಂಗಳವಾರ(ಮೇ20) ಬೆಳಗ್ಗೆ 10.30ಕ್ಕೆ ತೆರಳಿದ್ದರು. ಆದರೆ ಕೌಂಟರ್‌ನಲ್ಲಿ ಯಾರು ಹಾಜರಿರಲಿಲ್ಲ. ಈ ಕುರಿತು ಗ್ರಾಹಕ ವ್ಯವಸ್ಥಾಪಕರ ಬಳಿ ವಿಚಾರಿಸಲು ಹೋದಾಗ ವ್ಯವಸ್ಥಾಪಕಿ ನನಗೆ ಕನ್ನಡ ಬರೋದಿಲ್ಲ ಕೇವಲ ಹಿಂದಿಯಲ್ಲಿ ಮಾತನಾಡುವಂತೆ ತಿಳಿಸಿದ್ದಾರೆ. ಆಗ ಗ್ರಾಹಕ ನನಗೆ ಕನ್ನಡ ಬಿಟ್ಟರೆ ಇಂಗ್ಲೀಷ್‌ ಅಥವಾ ಹಿಂದಿ ಬರುವುದಿಲ್ಲ. ಕನ್ನಡದಲ್ಲೇ ವ್ಯವಹರಿಸುವಂತೆ ಮನವಿ ಮಾಡಿದ್ದಾರೆ.

ಇದರಿಂದ ಕೋಪಗೊಂಡ ವ್ಯವಸ್ಥಾಪಕಿ, ಇದು ಭಾರತ. ನಾನೇಕೆ ಕನ್ನಡದಲ್ಲಿ ಮಾತನಾಡಲಿ, ಕನ್ನಡದಲ್ಲೇ ಮಾತನಾಡಬೇಕೆಂಬ ನಿಯಮವಿಲ್ಲ, ನನಗೆ ಕೆಲಸ ನೀಡಿರುವುದು ನೀವಲ್ಲ, ಏನೂ ಬೇಕಾದರು ಮಾಡಿಕೊಳ್ಳಿ ಎಂದು ದರ್ಪದಿಂದ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಶೋತ್ತಮ ಬಿಳಿಮಲೆ ಸೇರಿದಂತೆ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅಪಾಯ ಎದುರಾಗುತ್ತಿದ್ದು, ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕೋರಮಂಗಲದ ಹೋಟೆಲ್‌ನ ಡಿಜಿಟಲ್‌ ಬೋರ್ಡ್‌ನಲ್ಲಿ ಕನ್ನಡಿಗರನ್ನು ನಿಂದಿಸಿರುವ ಬರಹ ವೈರಲ್‌ ಆಗಿತ್ತು. ಬಿಬಿಎಂಪಿ ಅಧಿಕಾರಿಗಳು ಹೋಟೆಲ್‌ ಪರವಾನಗಿಯನ್ನೇ ರದ್ದುಪಡಿಸಿದ್ದರು. 

ಬ್ಯಾಂಕ್‌ ಅಧಿಕಾರಿಗೆ ಕನ್ನಡದಲ್ಲಿ ಮಾತನಾಡಲು ತಿಳಿಹೇಳಿದ ಹಾಗೂ ಕನ್ನಡ ಮಾತನಾಡದ ಬ್ಯಾಂಕ್‌ ಅಧಿಕಾರಿ ವರ್ಗಾವಣೆಗೆ ಕಾರಣರಾದ ಮಹೇಶ್‌ ಅವರು ದ ಫೆಡರಲ್‌ ಕರ್ನಾಟಕದ ಜತೆ ನಡೆಸಿದ ಮಾತುಕತೆಯ ವಿವರಕ್ಕಾಗಿ ಈ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ.

Full View

Tags:    

Similar News