Gold Smuggling |ಹಲವು ಬಾರಿ ಕಪಾಳಕ್ಕೆ ಹೊಡೆದರು, ನಿದ್ದೆಗೂ ಬಿಡಲಿಲ್ಲ, ಊಟವೂ ನೀಡಿಲ್ಲ ಎಂದು ಆರೋಪಿಸಿದ ರನ್ಯಾ ​

ಕನ್ನಡ ನಟಿ ರನ್ಯಾ ರಾವ್, ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್​ ಅವರ ಮಲಮಗಳು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಹಕ್ಕೆ ಅಂಟಿಸಿಕೊಂಡು 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಬಂಧನಕ್ಕೆ ಒಳಗಾಗಿದ್ದಳು.;

Update: 2025-03-15 14:35 GMT

ಚಿನ್ನದ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕನ್ನಡ ನಟಿ ರನ್ಯಾ ರಾವ್, ತನ್ನ ಕಪಾಳಕ್ಕೆ ಡಿಆರ್​ಐ ಅಧಿಕಾರಿಗಳು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾಳೆ. ಆಹಾರ ಕೊಡಲಿಲ್ಲ ಮತ್ತು ನಿದ್ದೆ ಮಾಡಲು ಬಿಡದೇ ಖಾಲಿ ದಾಖಲೆಗಳಿಗೆ ಸಹಿ ಹಾಕಿಸಿದ್ದಾರೆ ಎಂದೂ ದೂರಿದ್ದಾಳೆ. ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟೊರೇಟ್ (ಡಿಆರ್​ಐ) ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ರನ್ಯಾ, ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಹಾಕಲಾಗಿದೆ ಎಂದು ಹೇಳಿದ್ದಾಳೆ.

ಕನ್ನಡ ನಟಿ ರನ್ಯಾ ರಾವ್, ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್​ ಅವರ ಮಲಮಗಳು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಹಕ್ಕೆ ಅಂಟಿಸಿಕೊಂಡು 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಬಂಧನಕ್ಕೆ ಒಳಗಾಗಿದ್ದಳು. ಇದೀಗ, ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರ ಮೂಲಕ ಕಳುಹಿಸಿದ ಪತ್ರದಲ್ಲಿ, ರನ್ಯಾ ತನ್ನನ್ನು ವಿಮಾನದೊಳಗೇ ಬಂಧಿಸಲಾಗಿದ್ದು. ವಿವರಿಸಲು ಅವಕಾಶ ನೀಡದೆ ಡಿಆರ್​ಐ ಅಧಿಕಾರಿಗಳು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ.

10-15 ಬಾರಿ ಕಪಾಳಕ್ಕೆ ಹೊಡೆದರು

ರನ್ಯಾ ತನ್ನ ಪತ್ರದಲ್ಲಿ, ಡಿಆರ್​ಐ ಅಧಿಕಾರಿಗಳು ಮೊದಲೇ ಸಿದ್ಧಪಡಿಸಿದ್ದ ಹೇಳಿಕೆಗಳಿಗೆ ಸಹಿ ಹಾಕಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ . ನಿರಾಕರಿಸಿದ್ದಕ್ಕೆ 15 ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ. 50-60 ಮುದ್ರಣ ಇದ್ದ ಪುಟಗಳು ಮತ್ತು 40 ಖಾಲಿ ಪುಟಗಳಿಗೆ ಸಹಿ ಹಾಕಲು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾಳೆ.

"ಬಂಧಿಸಿದ ಕ್ಷಣದಿಂದ ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಡಿಆರ್​ಐ ಅಧಿಕಾರಿಗಳು ನನಗೆ 10ರಿಂ15 ಬಾರಿ ಹೊಡೆದರು. ಹಲವು ಬಾರಿ ದೈಹಿಕ ದೌರ್ಜನ್ಯಕ್ಕೆ ಒಳಗಾದರೂ, ಅವರು ಸಿದ್ಧಪಡಿಸಿದ್ದ ಹೇಳಿಕೆಗಳಿಗೆ ಸಹಿ ಹಾಕಲು ನಾನು ನಿರಾಕರಿಸಿದೆ," ಎಂದು ರನ್ಯಾ ಪತ್ರದಲ್ಲಿ ಬರೆದಿದ್ದಾಳೆ.

"ಅತ್ಯಂತ ಒತ್ತಡ ಮತ್ತು ದೈಹಿಕ ದೌರ್ಜನ್ಯದ ನಡುವೆ, ನಾನು 50-60 ಟೈಪ್ ಮಾಡಿದ ಪುಟಗಳು ಮತ್ತು 40 ಖಾಲಿ ಪುಟಗಳಿಗೆ ಸಹಿ ಹಾಕಿದೆ," ಎಂದು ಪತ್ರದಲ್ಲಿ ಹೇಳಲಾಗಿದೆ.

ನಿದ್ರೆ ಮಾಡಲು ಬಿಡಲಿಲ್ಲ, ಊಟವೂ ಕೊಡಲಿಲ್ಲ

ಅಧಿಕಾರಿಯೊಬ್ಬರು ತಮ್ಮ ತಂದೆಯ ಗುರುತನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿದ್ದರು ಎಂದಿರುವ ರನ್ಯಾ ತಮ್ಮ ತಂದೆ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾಳೆ.

ಮಾರ್ಚ್ 3ರಂದು ಸಂಜೆ 6:45 ರಿಂದ ಮಾರ್ಚ್ 4ರಂದು ಸಂಜೆ 7:50 ರವರೆಗೆ ನಿದ್ರೆ ಮಾಡಲು ಬಿಡಲಿಲ್ಲ ಹಾಗೂ ಆಹಾರವೂ ಕೊಡಲಿಲ್ಲ ಎಂದು ರನ್ಯಾ ಆರೋಪಿಸಿದ್ದಾಳೆ. ತಮ್ಮ ವಿರುದ್ಧ ದಾಖಲಿಸಲಾದ ಕೇಸ್​ಗಳ ಬಗ್ಗೆ ಪ್ರಶ್ನಿಸಿದ ರನ್ಯಾ, ತಮ್ಮ ಬಳಿಕ ಯಾವುದೇ ಚಿನ್ನ ಇರಲಿಲ್ಲ ಎಂದು ಹೇಳಿದ್ದಾಳೆ.

ಹೇಳಿಕೆಗಳಲ್ಲಿ ವ್ಯತ್ಯಾಸ

ರಣ್ಯಾ ತನ್ನ ಹೇಳಿಕೆಗಳನ್ನು ಬದಲಿಸುತ್ತಿರುವುದು ಗಮನಕ್ಕೆ ಬಂದಿದೆ. ಮಾರ್ಚ್ 7ರಂದು ಡಿಆರ್​ಐ ಅಧಿಕಾರಿಗಳಿಗೆ ನೀಡಿದ ಮೊದಲ ಹೇಳಿಕೆಯಲ್ಲಿ, ತಾನು ಚಿನ್ನ ಕಳ್ಳಸಾಗಾಣಿಕೆ ಮಾಡಿದ್ದೇನೆ ಮತ್ತು 17 ಚಿನ್ನದ ಗಟ್ಟಿಗಳು ಇದ್ದವು ಎಂದು ಹೇಳಿದ್ದಳು.

ಮಾರ್ಚ್ 10ರಂದು, ರನ್ಯಾ ನ್ಯಾಯಾಲಯದಲ್ಲಿ ಅಳುತ್ತಾ, ಅಧಿಕಾರಿಗಳು ತಮ್ಮನ್ನು ಹೀಯಾಳಿಸಿದ್ದಾರೆ ಎಂದು ಹೇಳಿದ್ದಳು. ಈ ವೇಳೆ ದೈಹಿಕ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಳು.

ರನ್ಯಾ ಬಂಧನದ ನಂತರ, ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ.  

Tags:    

Similar News