ಪರಿಷತ್‌ ಚುನಾವಣೆ | ಹನ್ನೊಂದು ಸ್ಥಾನಗಳಿಗೆ ಚುನಾವಣೆ ಘೋಷಣೆ

Update: 2024-05-20 11:40 GMT
ಪರಿಷತ್‌ ಚುನಾವಣೆ | ಹನ್ನೊಂದು ಸ್ಥಾನಗಳಿಗೆ ಚುನಾವಣೆ ಘೋಷಣೆ

ಜೂನ್ನಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯ ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗುವ ಆ ಎಲ್ಲಾ ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ.

ಸೋಮವಾರ(20) ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದ್ದು ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 13ರಂದು ಮತದಾನದ ದಿನವೇ ಸಂಜೆ ಮತ ಎಣಿಕೆ ನಡೆಯಲಿದೆ.

ಪರಿಷತ್ ಸಭಾ ನಾಯಕ ಹಾಗೂ ಸಚಿವ ಎನ್ ಎಸ್ ಬೋಸರಾಜು, ಡಾ ತೇಜಸ್ವಿನಿ ಗೌಡ, ಅರವಿಂದ ಕುಮಾರ್ ಅರಳಿ, ಕೆ ಪಿ ನಂಜುಂಡಿ, ರಘುನಾಥ ರಾವ್ ಮಲ್ಕಾಪುರೆ, ಬಿ ಎಂ ಫಾರೂಕ್, ಎಸ್ ರುದ್ರೇಗೌಡ, ಎನ್ ರವಿಕುಮಾರ್, ಕೆ ಹರೀಶ್ಕುಮಾರ್, ಮುನಿರಾಜು ಗೌಡ, ಕೆ ಗೋವಿಂದ್ ರಾಜ್ ಅವರ ಅವಧಿ ಜೂನ್ 17 ರಂದು ಮುಕ್ತಾಯವಾಗಲಿದೆ. ಆ ಹಿನ್ನೆಲೆಯಲ್ಲಿ ತೆರವಾಗಲಿರುವ ಈ ಹನ್ನೊಂದು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.

Tags:    

Similar News