Operation Sindoor: ಬೆಂಗಳೂರಿನಲ್ಲಿ ನಡೆಯಿತು ಮಾಕ್‌ಡ್ರಿಲ್‌

ರಾಷ್ಟ್ರಾದ್ಯಂತ ಭಾರತ ಸರ್ಕಾರ ಸೇನೆ ಮತ್ತು ಇತರ ರಕ್ಷಣಾ ತಂಡಗಳು ಮಾಕ್‌ ಡ್ರಿಲ್‌ ಅಥವಾ ಅಣಕು ಕವಾಯತುಗಳನ್ನು ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಾಕ್‌ಡ್ರಿಲ್‌ ನಡೆಸಲಾಗಿದೆ.;

Update: 2025-05-07 11:33 GMT

ರಾಷ್ಟ್ರಾದ್ಯಂತ ಭಾರತ ಸರ್ಕಾರ ಸೇನೆ ಮತ್ತು ಇತರ ರಕ್ಷಣಾ ತಂಡಗಳು ಮಾಕ್‌ ಡ್ರಿಲ್‌ ಅಥವಾ ಅಣಕು ಕವಾಯತುಗಳನ್ನು ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಾಕ್‌ಡ್ರಿಲ್‌ ನಡೆಸಲಾಗಿದೆ.

ಬೆಂಗಳೂರು ಹಲಸೂರು ಬಳಿಯೊರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಗೃಹ ರಕ್ಷಕ ದಳ ಮತ್ತು ಪೌರ ರಕ್ಷಣೆ, ರಾಜ್ಯ ವಿಪತ್ತು ಪಡೆ ಕಚೇರಿ ಬಳಿ ಮಾಕ್ ಡ್ರಿಲ್ ನಡೆಸಲಾಯಿತು.  ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರು ಸೈರನ್‌ ಮೊಳಗಿಸಿ ಮಾಕ್ ಡ್ರಿಲ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕೇಂದ್ರ ಗೃಹ ಸಚಿವಾಲಯ ಆದೇಶದ ಪ್ರಕಾರ, ಬೆಂಗಳೂರು ನಗರ, ರಾಯಚೂರು ಮತ್ತು ಕಾರವಾರ ಸೇರಿದಂತೆ ದೇಶಾದ್ಯಂತ 244 ಸ್ಥಳಗಳಲ್ಲಿ ಬುಧವಾರ ( ಮೇ 7) ಅಣಕು ಕವಾಯತುಗಳನ್ನು ನಡೆಸಲಾಗುತ್ತಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಯಾವ ಕ್ಷಣದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಬುಧವಾರ (ಮೇ 07) ಮಾಕ್​ ಡ್ರಿಲ್ ಮಾಡುವಂತೆ ಕೇಂದ್ರ ಸಂದೇಶ ರವಾನಿಸಿತ್ತು.


ಮಾಕ್ ಡ್ರಿಲ್ ಯುದ್ದದ ಪೂರಕವಾಗಿ ಮಾಡುವುದು ಹಾಗೂ ಮುಂಜಾಗ್ರತಾ ಕ್ರಮವಾಗಿ ಮಾಕ್ ಡ್ರಿಲ್ ಮಾಡಲಾಗುತ್ತದೆ. ಅದು ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ ಹಾಗೂ ಒಂದು ವಾರ ನಡೆಯುತ್ತದೆ. ಏರ್ ಸ್ಟ್ರೈಕ್ ನಿಂದ ಅನಾಹುತ ಆದರೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶ ಎನ್ನಲಾಗಿದೆ.


ಏರ್ ಸ್ಟ್ರಕ್ ವೇಳೆ ಯಾವ ರೀತಿ ಜನರನ್ನು ರಕ್ಷಿಸಬೇಕು ಎಂದು ತಾಲೀಮು ನಡೆಸಲಾಗುತ್ತದೆ ಹಾಗೂ ಮಾಕ್ ಡ್ರಿಲ್ ವೇಳೆ ಲೋಪಗಳಾದರೆ ಅದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ವಾಯುಸೇನಾ ಬೇಸ್‌ (ಏರ್‌ಬೇಸ್)‌ ಇರುವ ಕಾರಣ ಈ ಭಾಗದಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತದೆ . 6 ಹಂತದ ಅಧಿಕಾರಿಗಳು ಸಿಬ್ಬಂದಿ ಈ ಮಾಕ್ ಡ್ರಿಲ್ ನಲ್ಲಿ ಭಾಗಿಯಾಗುತ್ತಾರೆ‌ ಎಂದವರು ವಿಶ್ಲೇಷಿಸಿಲಾಗಿದೆ.

Tags:    

Similar News