ಎನ್‌ಐಆರ್‌ಎಫ್ 2024: ಐಐಎಸ್‌ಸಿ ಅತ್ಯುತ್ತಮ ವಿಶ್ವವಿದ್ಯಾನಿಲಯ

ಐಐಎಸ್‌ಸಿ ಬೆಂಗಳೂರು ‌ʻಒಟ್ಟಾರೆʼ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಐಐಟಿ ಬಾಂಬೆ ನಂತರದ ಸ್ಥಾನದಲ್ಲಿದೆ. ಕಾನೂನು ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ಸ್ಥಾನ ಗಳಿಸಿದೆ.;

Update: 2024-08-12 12:47 GMT

ಶಿಕ್ಷಣ ಸಚಿವಾಲಯದ ಪ್ರಕಾರ, ಎನ್‌ಆರ್‌ಐಎಫ್‌ (ರಾಷ್ಟ್ರೀಯ ಇನ್‌ಸ್ಟಿಟ್ಯೂಟ್ ರಾಂಕಿಂಗ್ ಫ್ರೇಮ್‌ವರ್ಕ್,  2024) ನಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಒಂಬತ್ತನೇ ವರ್ಷ ಅತ್ಯುತ್ತಮ ವಿಶ್ವವಿದ್ಯಾನಿಲಯವೆಂಬ ಖ್ಯಾತಿಗೆ ಪಾತ್ರವಾಗಿದೆ. 

ಐಐಟಿ ಮದ್ರಾಸ್ ಸತತ ಆರನೇ ವರ್ಷ ಅಗ್ರ ಸ್ಥಾನ ಗಳಿಸಿದೆ. ಐಐಎಸ್‌ಸಿ ಬೆಂಗಳೂರು ‌ʻಒಟ್ಟಾರೆʼ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಐಐಟಿ ಬಾಂಬೆ ನಂತರದ ಸ್ಥಾನದಲ್ಲಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಐಐಟಿ ದೆಹಲಿ, ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹೊಸದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಎಂಎಂಎಸ್‌) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಜೊತೆಗೆ ಎಂಟು ಐಐಟಿಗಳು ಮೊದಲ ಹತ್ತ ರಲ್ಲಿ ಸ್ಥಾನ ಪಡೆದಿವೆ.

ಜೆಎನ್‌ಯು, ಜಾಮಿಯಾ ಮಿಲಿಯಾ ಎರಡನೇ ಸ್ಥಾನ: ವಿಶ್ವವಿದ್ಯಾನಿಲಯಗಳಲ್ಲಿ ಐಐಎಸ್‌ಸಿ ಬೆಂಗಳೂರು ನಂತರದ ಸ್ಥಾನಗಳಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಇವೆ. 

ಒಂಬತ್ತು ಐಐಟಿಗಳು ಎಂಜಿನಿಯರಿಂಗ್ ಕಾಲೇಜುಗಳ ಮೊದಲ ಹತ್ತು ಪಟ್ಟಿಯಲ್ಲಿವೆ. ಐಐಟಿ ಮದ್ರಾಸ್, ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ಕೂಡ ವಿಭಾಗದಲ್ಲಿ ಕ್ರಮವಾಗಿ 1, 2 ಮತ್ತು ಮೂರನೇ ಸ್ಥಾನ ಉಳಿಸಿಕೊಂಡಿವೆ. ತಿರುಚಿರಾಪಳ್ಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಮೊದಲ ಹತ್ತರ ಪಟ್ಟಿಯಲ್ಲಿರುವ ಐಐಟಿಯೇತರ ಸಂಸ್ಥೆ. 

ಮ್ಯಾನೇಜ್‌ಮೆಂಟ್ ಕಾಲೇಜು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಅಹಮದಾಬಾದ್ ಅಗ್ರಸ್ಥಾನ ಉಳಿಸಿಕೊಂಡಿದೆ. ಐಐಎಂ ಬೆಂಗಳೂರು 2 ಮತ್ತು ಐಐಎಂ ಕೋಯಿಕ್ಕೋಡ್ 3ನೇ ಸ್ಥಾನದಲ್ಲಿದೆ. ಬಾಂಬೆ ಮತ್ತು ದೆಹಲಿ ಐಐಟಿಗಳ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಮೊದಲ 10 ಪಟ್ಟಿಯಲ್ಲಿ ಇವೆ. 

ಇತರ ವರ್ಗಗಳು: ಫಾರ್ಮಸಿಯಲ್ಲಿ, ಜಾಮಿಯಾ ಹಮ್ದರ್ದ್ ಎರಡನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಏರಿದ್ದು, ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಬಿಟ್ಸ್ ಪಿಲಾನಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. 

ಕಾಲೇಜುಗಳ ವಿಭಾಗ: ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜು ಮೊದಲ ಮತ್ತು ಮಿರಾಂಡಾ ಹೌಸ್ 2ನೇ ಸ್ಥಾನ ಗಳಿಸಿದೆ. ಸೇಂಟ್ ಸ್ಟೀಫನ್ಸ್ ಮೂರನೇ ಸ್ಥಾನದಲ್ಲಿದೆ.

ಕಾನೂನು ವಿಭಾಗ: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ, ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿ 2ನೆಯ ಮತ್ತು ಹೈದರಾಬಾದ್‌ನ ನಲ್ಸಾರ್ ಯುನಿವರ್ಸಿಟಿ ಆಫ್ ಲಾ ಮೂರನೇ ಸ್ಥಾನ ಉಳಿಸಿಕೊಂಡಿವೆ.

ವಾಸ್ತುಶಿಲ್ಪ ಮತ್ತು ಯೋಜನೆ ವಿಭಾಗ:  ಐಐಟಿ ರೂರ್ಕಿ ಅತ್ಯುತ್ತಮವೆಂದು ಘೋಷಿಸಲಾಗಿದೆ, ನಂತರ ಐಐಟಿ ಖರಗ್‌ಪುರ ಮತ್ತು ಎನ್‌ಐಟಿ ಕ್ಯಾಲಿಕಟ್ ಇವೆ. 

ವೈದ್ಯಕೀಯ ಕಾಲೇಜುಗಳು: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಅಗ್ರ ಸ್ಥಾನದಲ್ಲಿದ್ದು, ಚಂಡೀಗಢದ ಪಿಜಿಐಎಂಇ 2 ಮತ್ತು ಸಿಎಂಸಿ ವೆಲ್ಲೂರ್ ಮೂರನೇ ಸ್ಥಾನದಲ್ಲಿವೆ.

ದಂತ ವೈದ್ಯ ಕಾಲೇಜು: ಚೆನ್ನೈನ ಸವೀತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್ ಮೊದಲಿನ ಮತ್ತು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ 2ನೇ ಸ್ಥಾನ ಉಳಿಸಿಕೊಂಡಿದ್ದು, ಮೂರನೇ ಸ್ಥಾನ ನವದೆಹಲಿಯ ಮೌಲಾನಾ ಆಜಾದ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಪಾಲಾಗಿದೆ.

ಸಂಶೋಧನೆ ಕ್ಷೇತ್ರದಲ್ಲಿ ಐಐಎಸ್‌ಸಿ ಬೆಂಗಳೂರು ಅತ್ಯುತ್ತಮ, ಐಐಟಿ ಮದ್ರಾಸ್ 2 ಮತ್ತು ಐಐಟಿ ದೆಹಲಿ ಮೂರನೇ ಸ್ಥಾನದಲ್ಲಿವೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯ ಮೊದಲ ಸ್ಥಾನ, ಕೋಲ್ಕತ್ತಾದ ಜಾಧವ್‌ಪುರ ವಿಶ್ವವಿದ್ಯಾನಿಲಯ 2 ಮತ್ತು ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ 3ನೇ ಸ್ಥಾನ ಪಡೆದುಕೊಂಡಿದೆ.

Tags:    

Similar News