ಅಂಬೇಡ್ಕ‌ರ್ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು

ಎಂ.ಕೆ.ಹುಬ್ಬಳ್ಳಿಯ ದಲಿತ ಸಂಘರ್ಷ ಸಮಿತಿ ಯುವಕರು ಆಳವಡಿಸಿದ್ದ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದು ವಿಕೃತಿ ಮರೆದಿದ್ದಾರೆ.;

Update: 2025-04-21 06:08 GMT

ಅಂಬೇಡ್ಕರ್‌ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದಿರುವ ದುಷ್ಕರ್ಮಿಗಳು 

ಡಾ.ಬಿ.ಆ‌ರ್. ಅಂಬೇಡ್ಕ‌ರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದು ವಿಕೃತಿ ಮೆರೆದಿರುವ ಘಟನೆ ಬೆಳಗಾವಿಯ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ. 

ಎಂ.ಕೆ.ಹುಬ್ಬಳ್ಳಿಯ ದಲಿತ ಸಂಘರ್ಷ ಸಮಿತಿ ಯುವಕರು ಆಳವಡಿಸಿದ್ದ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದು ವಿಕೃತಿ ಮರೆದಿದ್ದಾರೆ. ಸದ್ಯ ಅದನ್ನು ತೆರವು ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಚನ್ನಮ್ಮನ ಕಿತ್ತೂರು ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ಸಮುದಾಯದ ಜನ ಸೇರಿಕೊಂಡು ಶಾಂತಿಯುತವಾಗಿ ಚರ್ಚೆ ನಡೆಸಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರದಲ್ಲೂ ಕೂಡ ಇಂತಹದ್ದೇ ಕೃತ್ಯ ನಡೆದಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಲಾಗಿತ್ತು. ಈ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಬಳಿದು, ಫ್ಲೆಕ್ಸ್ ಗಳನ್ನು ಹರಿದು, ಚಪ್ಪಲಿ ಹಾರ ಹಾಕಿ, ನೀಲಿ ಧ್ವಜಗಳನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದರು. 

Tags:    

Similar News