ʼಅಮ್ಮಾ ತಾಯಿʼ ಎಂದು ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದೀರಾ?: ಸಿಎಂಗೆ ಹೆಚ್‌ಡಿಕೆ ಪ್ರಶ್ನೆ

ರಾಜ್ಯದ ಮುಖ್ಯಮಂತ್ರಿ ಅಮ್ಮ ತಾಯಿ ಎಂದು ಕೇಳುತ್ತಿದ್ದಾರೆ, ಇಂತಹ ದಯನೀಯ ಸ್ಥಿತಿಯಲ್ಲಿ ಬೇಡುವಂತ ಪರಿಸ್ಥಿತಿಯನ್ನು ಏತಕ್ಕೆ ತಂದುಕೊಂಡಿದ್ದೀರಾ? ಎಂದು ಸಿಎಂ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.

Update: 2024-02-24 07:33 GMT

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಅಮ್ಮ ತಾಯಿ ಎಂದು, ದಯನೀಯ ಸ್ಥಿತಿಯಲಿ ಬೇಡುವಂತ ಸನ್ನಿವೇಶ ಉದ್ಬವವಾಗಿದೆ. ಈ ರಾಜ್ಯದ ಸರ್ಕಾರವನ್ನು ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದೀರಾ? ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮರಾಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಭೇಟಿ ಬಳಿಕ ಮೈತ್ರಿ ಸೀಟು ಹಂಚಿಕೆ ಕುರಿತಂತೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ʼʼಯಾವುದೇ ರೀತಿಯಲ್ಲಿ ಮೈತ್ರಿ ಹಾಗೂ ಸೀಟು ಹಂಚಿಕೆಯಲ್ಲಿ ಸಮಸ್ಯೆ ಇಲ್ಲ. ಈ ಕೆಟ್ಟ ಸರ್ಕಾರವು ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದೆ ಎನ್ನುವ ಆತಂಕ ಇದೆ. ನಾವು 28 ಸ್ಥಾನ ಗೆಲ್ಲಬೇಕು ಇದು ನಮ್ಮ ಉದ್ದೇಶʼʼ ಎಂದು ಹೇಳಿದ್ದಾರೆ.

ನಮ್ಮ ಸಿಎಂ ವಿಧಾನ ಪರಿಷತ್ ನಲ್ಲಿ ʼʼಅಮ್ಮ ತಾಯಿ 6 ಸಾವಿರ ಕೋಟಿ ಕೊಡು ತಾಯಿʼʼ ಎಂದು ಬೇಡುತ್ತಾ ಆ ವಿಷಯವನ್ನ ಪ್ರಸ್ತಾಪ ಮಾಡಿದ್ದರು. ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬಡವರು ಹಸಿವಿನಿಂದ ಮನೆಗಳ ಮುಂದೆ ರಾತ್ರಿ ಊಟ ಆಗಿ ಉಳಿದಿರೋದನ್ನು ಪಡೆಯೋದಕ್ಕೆ, ಹೋಗುವ ಜನರಿಗೆ ಭಿಕ್ಷೆ ಹಾಕುವ ಹಾಗೆ ನಮ್ಮ ಸಿಎಂ ಕೇಳುತ್ತಿದ್ದಾರೆ. ಹಸಿವನ್ನು ನೀಗಿಸಲು ಹೋಗುವ ಜನ ಅಮ್ಮ ತಾಯಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿ ಅಮ್ಮ ತಾಯಿ ಎಂದು ಕೇಳುತ್ತಿದ್ದಾರೆ, ಇಂತಹ ದಯನೀಯ ಸ್ಥಿತಿಯಲ್ಲಿ ಬೇಡುವಂತ ಪರಿಸ್ಥಿತಿಯನ್ನು ಏತಕ್ಕೆ ತಂದುಕೊಂಡಿದ್ದೀರಾ? ಈ ರಾಜ್ಯದ ಸರ್ಕಾರವನ್ನ ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದೀರಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ʼʼಕರ್ನಾಟಕ ಸಂಪತ್ ಭರಿತ ರಾಜ್ಯ ಹಣದ ಕೊರತೆ ಇಲ್ಲ. ರೋಡ್ ಟ್ಯಾಕ್ಸ್ ರೆವೆನ್ಯೂನಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಸ್ವಂತ ಟ್ಯಾಕ್ಸ್ ಕಲೆಕ್ಟ್ ಮಾಡೋದರಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ, ಹಣದ ಕೊರತೆಯಿಲ್ಲ. ನಿಮ್ಮ ಲೂಟಿಯ ದಾಹಕ್ಕೆ ರಾಜ್ಯದ ಖಜಾನೆ ಖಾಲಿ‌ಮಾಡುತ್ತಿದ್ದೀರಾ? ಗ್ಯಾರಂಟಿಯಿಂದ ಖಜಾನೆ ಖಾಲಿಯಾಗಲ್ಲ, ನಿಮ್ಮ ಸ್ವೇಚ್ಛಾಚಾರದಿಂದ ಖಾಲಿಯಾಗುತ್ತಿದೆ. ಕೇಂದ್ರ ಸರ್ಕಾರದ ಮುಂದೆ ಪದೇ ‌ಪದೇ ಕೇಳಿಕೊಂಡು ಹೋಗುತ್ತಿದ್ದೀರಿ, ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದೀರಿ ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ಹೇಳಿದ್ದಾರೆ.

Tags:    

Similar News