ಜಾರ್ಖಂಡ್‌ ಮಾಜಿ ಸಿಎಂ ಶಿಬು ಸೊರೇನ್‌ ವಿಧಿವಶ

ತಂದೆಯ ನಿಧನದ ಮಾಹಿತಿಯನ್ನು ಪುತ್ರನಾದ ಜಾರ್ಖಂಡ್‌ ಸಿಎಂ ಹೇಮಂತ್ ಸೊರೇನ್‌ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.;

Update: 2025-08-04 05:42 GMT

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಸ್ಥಾಪಕ ಶಿಬು ಸೊರೇನ್‌ (81) ನಿಧನರಾಗಿದ್ದಾರೆ.

ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಸೊರೇನ್ ಅವರನಿಂಫ್ನು ಚಿಕಿತ್ಸೆಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಂದ ಶಿಬು ಸೊರೇನ್‌ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು.

ತಂದೆಯ ನಿಧನದ ಮಾಹಿತಿಯನ್ನು ಪುತ್ರನಾದ ಜಾರ್ಖಂಡ್‌ ಸಿಎಂ ಹೇಮಂತ್ ಸೊರೇನ್‌ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ʻಪ್ರೀತಿಯ ದಿಶೋಮ್ ಗುರೂಜಿ ನಮ್ಮನ್ನು ಅಗಲಿದ್ದಾರೆ. ನಾನಿಂದು ಎಲ್ಲವನ್ನೂ ಕಳೆದುಕೊಂಡೆʼ ಎಂದು ಭಾವುಕ ಸಂದೇಶ ಹಾಕಿದ್ದಾರೆ. ಶಿಬು ಸೊರೇನ್ ಅವರು ಕಳೆದ 38 ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದರು. 4 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಶಿಬು ಸೊರೇನ್‌ ತಮ್ಮದೇ ಛಾಪು ಮೂಡಿಸಿದ್ದರು. 8 ಬಾರಿ ಲೋಕಸಭೆ, ಎರಡು ಅವಧಿಗೆ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು.

Tags:    

Similar News