Cong workers Fight | ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ

ಪಂಚಾಯತ್‌ ಉಪಚುನಾವಣೆಯಲ್ಲಿ ಆಯ್ಕೆಯಾದವರ ಸನ್ಮಾನದ ಕುರಿತು ಆರಂಭವಾದ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದೆ

Update: 2024-12-02 12:01 GMT
ಮಂಗಳೂರು ಕಾಂಗ್ರೆಸ್‌ ಕಚೇರಿಯಲ್ಲಿ ಹೊಡೆದಾಟ ನಡೆದಿದೆ.

ಪಂಚಾಯತ್‌ ಉಪಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನದ ಬಗ್ಗೆ ಪಕ್ಷದ ಪದಾಧಿಕಾರಿಗಳ ನಡುವೆ ಆರಂಭವಾದ ಮಾತಿನ ಚಕಮಕಿ, ಹೊಡೆದಾಟದಲ್ಲಿ ಅಂತ್ಯಕಂಡ ಘಟನೆ ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದಿದೆ. 

ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ, ಹರೀಶ್ ಕುಮಾರ್ ಅವರತ್ತ ಹೊಡೆಯಲು ಪ್ರಕಾಶ್ ಶೆಟ್ಟಿ ಮುಂದಾದರು. ಘಟನ ಬಳಿಕ, ಸಂಟ್ರಲ್ ಎಸಿಪಿ ಮತ್ತು ಕದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ನಾಯಕರು ಸಂಧಾನಕ್ಕೆ ಮುಂದಾದರೂ, ಕಚೇರಿ ಬಳಿಯ ಉದ್ವಿಗ್ನತೆ ಹತೋಟಿಗೆ ಬಾರದ ಕಾರಣ, ಹೆಚ್ಚುವರಿ ಪೊಲೀಸ್ ರಕ್ಷಣೆಯನ್ನು ನಿಯೋಜಿಸಲಾಯಿತು. ಒಂದು ಕೆಎಸ್‌ಆರ್‌ಪಿ ತಂಡವನ್ನು ಸ್ಥಳದಲ್ಲಿ ನೇಮಿಸಲಾಗಿದೆ. ಕಚೇರಿ ಬಳಿ ಉಭಯ ನಾಯಕರ ಬೆಂಬಲಿಗರು ಜಮಾಯಿಸುತ್ತಿದ್ದು, ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. 

Tags:    

Similar News