Myosre MUDA scam: ರಾಜೀನಾಮೆ ನೀಡದಂತೆ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ಮಂಡ್ಯ ತಾಲೂಕಿನ ಸುಮಹಳ್ಳಿ ಗ್ರಾಮದ ಸಚಿನ್ ಎಂಬುವರು ಪತ್ರ ಬರೆದು ತಮ್ಮ ಅಭಿಮಾನ ಮೆರೆದಿದ್ದಾರೆ. ನನ್ನ ಕೈಯಿಂದ ರಕ್ತ ತೆಗೆದು, ಅದರಲ್ಲಿ ನಿಮಗೆ ಪತ್ರ ಬರೆದಿದ್ದೇನೆ. ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಭಿನ್ನವಿಸಿಕೊಂಡಿದ್ದಾರೆ.;
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಪ್ರಬಲ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿಯೊಬ್ಬರು ತಮ್ಮ ಕೈಯಾರೆ ರಕ್ತದಲ್ಲಿ ಪತ್ರ ಬರೆದು, ರಾಜೀನಾಮೆ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯ ತಾಲೂಕಿನ ಸುಮಹಳ್ಳಿ ಗ್ರಾಮದ ಸಚಿನ್ ಎಂಬುವರು ಪತ್ರ ಬರೆದು ತಮ್ಮ ಅಭಿಮಾನ ಮೆರೆದಿದ್ದಾರೆ. ನನ್ನ ಕೈಯಿಂದ ರಕ್ತ ತೆಗೆದು, ಅದರಲ್ಲಿ ನಿಮಗೆ ಪತ್ರ ಬರೆದಿದ್ದೇನೆ. ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಭಿನ್ನವಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಡಿ.ದೇವರಾಜು ಅರಸು ಅವರ ಬಳಿಕ ಬಡವರು ಹಾಗೂ ದಲಿತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದವರು ನೀವು. ದಲಿತರು ಹಾಗೂ ಬಡವರ ಮುಖ್ಯಮಂತ್ರಿಯಾಗಿಯೇ ಅಧಿಕಾರ ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಮೂಡಾ ಹಗರಣಕ್ಕೆ ಸಂಬಂಧಿಸಿ ನೀವು ರಾಜೀನಾಮೆ ನೀಡಬಾರದು. ರಾಜ್ಯದ ಎಲ್ಲ ಬಡವರು ನಿಮ್ಮೊಂದಿಗಿದ್ದು, ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಒಂದೆಡೆ ವಿರೋಧ ಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ತರುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಬಡವರು, ದೀನ ದಲಿತರು ಮುಖ್ಯ ಮಂತ್ರಿ ಪರವಾಗಿ ಗೋಡೆಯಂತೆ ನಿಂತಿದ್ದಾರೆ.
ಮೈಸೂರಿನಲ್ಲಿ ಶನಿವಾರ ನಡೆದಿದ್ದ ʼಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣʼ ಕೃತಿ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಯೋಜನೆ ಫಲಾನುಭವಿಗಳು ತಮಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಹೆಚ್ಚು ಮಾತನಾಡಬೇಕು ಎಂದು ಕರೆ ನೀಡಿದ್ದರು.