ಕೆಲಸ ನೀಡಿದ್ದ ಮಾಲೀಕನ 1.51ಕೋಟಿ ಹಣ ಎಗರಿಸಿದ ಡ್ರೈವರ್‌ ಬಂಧನ

ಚಾರ್ಟಡ್‌ ಆಕೌಂಟೆಡ್‌ ಆಗಿರುವ ತೋಟಪ್ರಸಾದ್‌ ಬಳಿ ಕಳೆದ ಹತ್ತು ವರ್ಷಗಳಿಂದ ರಾಜೇಶ್‌ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಏಪ್ರಿಲ್‌ 6ರಂದು ತೋಟಪ್ರಸಾದ್‌ ಬ್ಯಾಂಕ್‌ಗೆ ಜಮೆ ಮಾಡಲು 1.51ಕೋಟಿ ರೂಪಾಯಿ ಹಣವನ್ನು ಚಾಲಕ ರಾಜೇಶ್‌ಗೆ ನೀಡಿದ್ದ.;

Update: 2025-05-13 09:24 GMT

ಕಾಲ್ಪನಿಕ ಚಿತ್ರ

ಬ್ಯಾಂಕ್‌ನಲ್ಲಿ  ಠೇವಣಿ ಇಡಲು ನೀಡಿದ್ದ  1.51 ಕೋಟಿ ರೂಪಾಯಿ ಕದ್ದೊಯ್ದಿದ್ದ ಆಂಧ್ರಪ್ರದೇಶದ ಗುಂಟೂರಿನ ಮೂಲದ ಚಾಲಕ ರಾಜೇಶ್‌ ಎಂಬಾತನನ್ನು ವೈಯಾಲಿಕಾವಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ  1.49 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಚಾರ್ಟರ್ಡ್ ಅಕೌಂಟೆಂಟ್ ತೋಟಪ್ರಸಾದ್ ಅವರ ಬಳಿ ಕಳೆದ 10 ವರ್ಷಗಳಿಂದ ರಾಜೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 6ರಂದು ತೋಟಪ್ರಸಾದ್ ಅವರು ಬ್ಯಾಂಕ್‌ಗೆ ಜಮೆ ಮಾಡಲು 1.51 ಕೋಟಿ ರೂಪಾಯಿ ರಾಜೇಶ್‌ನಿಗೆ ನೀಡಿದ್ದರು. ವಾಹನ ನಿಲುಗಡೆ ಮಾಡುವ ನೆಪದಲ್ಲಿ ಹಣ ಪಡೆದು ಚಾಲಕ ಪರಾರಿಯಾಗಿದ್ದ. ನಂತರ ಆತ ಹಣವನ್ನು ತನ್ನ ಮನೆಯಲ್ಲಿಟ್ಟುಕೊಂಡು ಸುಮಾರು ₹2.5 ಲಕ್ಷ ಖರ್ಚು ಮಾಡಿದ್ದ.

ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Tags:    

Similar News