ಬಿಜೆಪಿಯಲ್ಲಿ ಸಿದ್ದರಾಮಯ್ಯ ಮೋರ್ಚಾ ಸೃಷ್ಟಿ: ಎಚ್.ವಿಶ್ವನಾಥ್ ವ್ಯಂಗ್ಯ
'ಬಿಜೆಪಿಯಲ್ಲಿ ಸಿದ್ದರಾಮಯ್ಯ ಮೋರ್ಚಾ ಆರಂಭವಾಗಿದೆ. ಬಸನಗೌಡ ಪಾಟೀಲ ಯತ್ನಾಳ, ಪ್ರತಾಪ ಸಿಂಹ, ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಯ ಪರವಾಗಿ ಮಾತನಾಡುತ್ತಿದ್ದು, ಒಂದು ಪಕ್ಷದ ನಾಯಕರೆಂದು ಕರೆದುಕೊಳ್ಳುವ ಅವರಿಗೆ ನಾಚಿಕೆಯಾಗಬೇಕು' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.;
'ಬಿಜೆಪಿಯಲ್ಲಿ ಸಿದ್ದರಾಮಯ್ಯ ಮೋರ್ಚಾ ಆರಂಭವಾಗಿದೆ. ಬಸನಗೌಡ ಪಾಟೀಲ ಯತ್ನಾಳ, ಪ್ರತಾಪ ಸಿಂಹ, ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಯ ಪರವಾಗಿ ಮಾತನಾಡುತ್ತಿದ್ದು, ಒಂದು ಪಕ್ಷದ ನಾಯಕರೆಂದು ಕರೆದುಕೊಳ್ಳುವ ಅವರಿಗೆ ನಾಚಿಕೆಯಾಗಬೇಕು' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 'ಮುಡಾ ನಿವೇಶನ ಹಂಚಿಕೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಮಹಿಷಾ ದಸರಾ ಕುರಿತು ಮಾತನಾಡುತ್ತಿದ್ದಾರೆ' ಎಂದು ಅವರು ದೂರಿದರು.
ಯತ್ನಾಳ್, ಪ್ರತಾಪ್ ಸಿಂಹ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಪರ ಇದ್ದಾರೆ. ನಿಮಗೆ ನಾಚಿಕೆ ಆಗೋದಿಲ್ವಾ? ಸಿದ್ದರಾಮಯ್ಯ ಪರ ಬೆಂಬಲ ನೀಡುತ್ತೇನೆ ಎಂದು ಹೇಳುತ್ತೀರಾ' ಎಂದು ವಾಗ್ದಾಳಿ ನಡೆಸಿದ ಅವರು, ಪ್ರತಾಪ್ ಸಿಂಹ ನೀನೇ ಮಹಿಷಾಸುರ. ಮುಡಾದಲ್ಲಿ ಮಹಿಷಾಸುರರು ಇದ್ದಾರೆ. ಮೊದಲು ಅವರನ್ನು ನಿಲ್ಲಿಸು. ನಿಮಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ ನವರು ತಪ್ಪೇ ಮಾಡಿಲ್ಲ ಅಂತೀರಾ ಎಂದು ವಾಗ್ದಾಳಿ ನಡೆಸಿದರು.