ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಭೇಟಿ ನಿರಾಕರಿಸಿದ ನಟ ದರ್ಶನ್

ಕನ್ನಡದ ಹಾಸ್ಯ ನಟ ಸಾಧುಕೋಕಿಲ ದರ್ಶನ್‌ ಭೇಟಿಗೆ ಆಗಮಿಸಿದ್ದರು. ಆದರೆ ಸಾಧು ಕೋಕಿಲ ಭೇಟಿಯನ್ನು ದರ್ಶನ್ ಅವರು ನಿರಾಕರಣೆ ಮಾಡಿದ್ದಾರೆ.

Update: 2024-07-23 11:11 GMT
ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಸಾಧುಕೋಕಿಲ ಭೇಟಿ ನಿರಾಕರಿಸಿದ ನಟ ದರ್ಶನ್
ದರ್ಶನ್‌ ಭೇಟಿಗೆ ಆಗಮಿಸಿದ ಹಾಸ್ಯ ನಟ ಸಾಧುಕೋಕಿಲ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಪರಪ್ಪನ ಜೈಲು ಸೇರಿದ್ದಾರೆ. ದರ್ಶನ್‌ ಅನ್ನು ಭೇಟಿ ಮಾಡಲು ಕುಟುಂಬದ ಸದಸ್ಯರು ಸೇರಿದಂತೆ ಹಲವರು ಭೇಟಿ ಮಾಡಿ ಹೋಗಿದ್ದರು. ಇದೀಗ ಕನ್ನಡದ ಹಾಸ್ಯ ನಟ  ಹಾಗೂ  ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಸಾಧುಕೋಕಿಲ ಅವರು ಆಗಮಿಸಿದ್ದರು. ಆದರೆ ಸಾಧು ಕೋಕಿಲ ಭೇಟಿಯನ್ನು ದರ್ಶನ್ ಅವರು ನಿರಾಕರಣೆ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ನಟ ಸಾಧು ಕೋಕಿಲ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ವಕೀಲರ ಜೊತೆ ಆಗಮಿಸಿದ್ದ ಸಾಧು ಕೋಕಿಲ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಹೋಗಿದ್ದರು. ಆದರೆ ಈ ಭೇಟಿಗೆ ದರ್ಶನ್ ಅವರು ನಿರಾಕರಣೆ ಮಾಡಿದ್ದಾರೆ.

ದರ್ಶನ್‌ ಭೇಟಿಗೆ ವಾರಕ್ಕೆ ಎರಡು ಬಾರಿ ಮಾತ್ರ ಅವಕಾಶವಿದೆ. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಈಗಾಗಲೇ ಒಂದು ಬಾರಿ ದರ್ಶನ್ ಭೇಟಿಗೆ ಕುಟುಂಬ ಹೋಗಿತ್ತು. ಗುರುವಾರ ಮತ್ತೊಮ್ಮೆ ದರ್ಶನ್ ಫ್ಯಾಮಿಲಿ ಆಗಮಿಸುವ ಹಿನ್ನೆಲೆಯಲ್ಲಿ ಸಾಧುಕೋಕಿಲ ಅವರಿಗೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಫ್ಯಾಮಿಲಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಗುರುವಾರ ಫ್ಯಾಮಿಲಿ ಜೊತೆಗೆ ಸಾಧುಕೋಕಿಲ ಅವರಿಗೆ ಬನ್ನಿ ಎಂದು ದರ್ಶನ್ ಜೈಲಾಧಿಕಾರಿಗಳ ಮೂಲಕ ಸಾಧುಕೋಕಿಲಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಾಧುಕೋಕಿಲ ಮಾತನಾಡಿ, ಗುರುವಾರ ದರ್ಶನ್ ಫ್ಯಾಮಿಲಿ ಬರುತ್ತಾರೆ. ಅವಾಗ ಒಟ್ಟಿಗೆ ಬಂದು ಅವರನ್ನು ಮೀಟ್ ಮಾಡುತ್ತೇನೆ. ಒಬ್ಬೊಬ್ಬರಿಗೆ ಎಂಟ್ರಿಯೆಲ್ಲ ಕೊಡಲ್ಲ. ವಾರಕ್ಕೆ ಒಂದೋ, ಎರಡೋ ಎಂಟ್ರಿ ಅಷ್ಟೇ ಇರೋದು. ನಾನು ಈಗ ಮೀಟ್ ಮಾಡಿದ್ರೆ ಮುಂದೆ ಬರೋರಿಗೆ ಅವಕಾಶ ಸಿಗಲ್ಲ. ಗುರುವಾರ ಇದೇ ಸಮಯಕ್ಕೆ ಮತ್ತೆ ಬರೋಣ. ಅವರ ಕುಟುಂಬವಂತಲ್ಲ. ಯಾರು ಬರುತ್ತಾರೋ ಅವರ ಜೊತೆ ನೋಡ್ಕೊಂಡು ಬರುತ್ತೇನೆ ಎಂದು ಸಾಧು ಕೋಕಿಲ ಅವರು ಹೇಳಿದ್ದಾರೆ.

Tags:    

Similar News