Caste Census Issue | ಪೇಜಾವರ ಶ್ರೀ, ಬಿಕೆ ಹರಿಪ್ರಸಾದ್ ನಡುವೆ ಜಾತಿ ಗಣತಿ ಸಂಘರ್ಷ
“ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು? ಎಂದು ಪೇಜಾವರ ಸ್ವಾಮೀಜಿ ಹೇಳಿದ್ದರು;
ಜಾತಿ ಗಣತಿ ವಿಚಾರವಾಗಿ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ ವಿರುದ್ಧ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದು, ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಿ ಕೆ ಹರಿಪ್ರಸಾದ್ ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಇದು ಪೇಜಾವರ ಶ್ರೀಗಳು ಮತ್ತು ಬಿ ಕೆ ಹರಿಪ್ರಸಾದ್ ನಡುವಿನ ಜಾಟಾಪಟಿಗೆ ಕಾರಣವಾಗಿದೆ.
ಪೇಜಾವರ ಶ್ರೀ ಹೇಳಿದ್ದೇನು?
“ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜಾತ್ಯತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು?. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ? ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಜಾತಿ ಗಣತಿ ಅಗತ್ಯವೇ ಎಂದು ಪ್ರಶ್ನಿಸಿದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು "ಶ್ರೀಗಳು ದಡ್ಡ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಕೇಸರಿ ವಸ್ತ್ರವನ್ನು ಧಿಕ್ಕರಿಸಿದ ಬಳಿಕವೇ ಅವರು ರಾಜಕೀಯ ಮಾತನಾಡಬೇಕು" ಎಂದು ಹರಿಪ್ರಸಾದ್ ಕಟುವಾಗಿ ಪ್ರತಿಕ್ರಿಯಿಸಿದ್ದರು.
ಕಾವಿ ಬಟ್ಟೆ ತ್ಯಜಿಸಿ ಬಂದರೆ ತಕ್ಕ ಉತ್ತರ ನೀಡುತ್ತೇವೆ
ಜಾತಿ ಗಣತಿ ಕುರಿತು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ವಿರುದ್ಧ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, "ಈಗಿನ ಸ್ವಾಮೀಜಿ ಅಯೋಧ್ಯೆಯಿಂದ ಹಿಡಿದು ಎಲ್ಲ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಜಾತಿ ಗಣತಿ ಬಗ್ಗೆ ಮಾತನಾಡುವ ಸ್ವಾಮೀಜಿ ತಮ್ಮ ಮಠದಲ್ಲಿ ಪಂಕ್ತಿಭೋಜನ ಹಾಗೂ ಮಡೆಸ್ನಾನ ಉತ್ತೇಜನ ನೀಡುತ್ತಾರೆ. ಮಠದಲ್ಲಿ ಸಹಪಂಕ್ತಿ ಭೋಜನ ಮಾಡಲು ಇತರರಿಗೆ (ಇತರ ಸಮುದಾಯದವರಿಗೆ) ಏಕೆ ಅವಕಾಶ ನೀಡುವುದಿಲ್ಲ? ಅವರು ಇತರರನ್ನು ಯಾಕೆ ಮಠದೊಳಗೆ ಬಿಡುವುದಿಲ್ಲ. ಜಾತಿ ಮತ್ತು ಜಾತಿ ಗಣತಿಯ ಬಗ್ಗೆ ಹೇಳಿಕೆ ನೀಡುವ ಮೊದಲು ಸ್ವಂತ ಮಠದಲ್ಲಿ ಏನಾಗುತ್ತಿದೆ ಎಂಬುದನ್ನು ಮೊದಲು ನೋಡಬೇಕು. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ" ಎಂದು ಹೇಳಿದ್ದರು.
ವ್ಯಕ್ತಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿಲ್ಲವೇ?
ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ್ದ ಪೇಜಾವರ ಸ್ವಾಮೀಜಿ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿಲ್ಲವೇ? ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ರಾಜಕಾರಣಿಗಳಿಗೆ ಮಾತ್ರವೇ ಇರುವುದು? ಎಂದು ಪ್ರಶ್ನಿಸಿದ್ದರು.
ಜಾತಿ ವ್ಯವಸ್ಥೆಯೇ ಅನಿಷ್ಟಗಳ ಮೂಲ ಎಂದು ಹೇಳುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ಜಾತ್ಯತೀತರು ಎಂದು ಹೇಳಿಕೊಂಡರೆ ಮತ್ತೊಂದೆಡೆ ಎಲ್ಲ ಕ್ಷೇತ್ರಗಳಲ್ಲೂ ಜಾತಿಯನ್ನು ಉತ್ತೇಜಿಸುತ್ತಾರೆ. ನನ್ನ ಅಭಿಪ್ರಾಯ ತೆಗೆದುಕೊಳ್ಳಲು ನಾನು ಯಾರನ್ನೂ ಆಹ್ವಾನಿಸಲಿಲ್ಲ, ಆದರೆ ವ್ಯವಸ್ಥೆಯು ನನ್ನ ಅಭಿಪ್ರಾಯಗಳನ್ನು ಕೇಳಿದೆ. ನನ್ನ ಅಭಿಪ್ರಾಯದಲ್ಲಿ, ನೀವು ಸೆಕ್ಯುಲರ್ ಎಂದು ಹೇಳಿಕೊಳ್ಳುವಾಗ ಜಾತಿ ಮತ್ತು ಪಂಗಡಗಳ ಬಗ್ಗೆ ಜನಗಣತಿಯ ಅಗತ್ಯವೇನು? ನಾನು ಹೇಳಿದ್ದು ತಪ್ಪು ಮತ್ತು ನಾನು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ಇದು ಪ್ರಜಾಪ್ರಭುತ್ವ ದೇಶವೋ ಅಲ್ಲವೋ? ಪ್ರಜಾಸತ್ತಾತ್ಮಕ ರಾಷ್ಟ್ರವಾದರೆ ಕೇವಲ ಧಾರ್ಮಿಕ ನಾಯಕನಷ್ಟೇ ಅಲ್ಲ, ಸಾಮಾನ್ಯ ಪ್ರಜೆಗೂ ಮಾತನಾಡುವ ಹಕ್ಕಿದೆ. ಸಮಾಜದಲ್ಲಿ ಮಾತನಾಡುವ ಹಕ್ಕು ಕೆಲವು ರಾಜಕಾರಣಿಗಳಿಗೆ ಮಾತ್ರ ಇದೆಯೇ? ಆಗ ಅವರು ಹೇಳಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಮತ್ತು ಇದು ರಾಜಕಾರಣಿಗಳಿಗೆ ಮಾತ್ರ, ರಾಷ್ಟ್ರ ಪ್ರಜಾಪ್ರಭುತ್ವ ಇಲ್ಲ, ರಾಜಕೀಯ ಮಾತ್ರ ಎಂದು ಅವರು ಹೇಳಲಿ ಎಂದು ಸ್ವಾಮೀಜಿ
ಅಲ್ಲದೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೂಡ ಪೇಜಾವರ ಶ್ರೀಗಳ ವಿರುದ್ಧದ ಹೇಳಿಕೆಯನ್ನು ಖಂಡಿಸಿತ್ತು.