Bomb Threat| ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ; ಸಂದೇಶ ಕಳುಹಿಸಿದವನ ವಿರುದ್ಧ ಪ್ರಕರಣ ದಾಖಲು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶ ಬಂದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ತಪಾಸಣಾ ಕಾಯ ಕೈಗೊಂಡರು.

Update: 2024-10-20 13:22 GMT

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್‌ ಸೆಂಟರ್‌ಗೆ ಭಾನುವಾರವೂ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ,. ಇಂಡಿಗೂ ವಿಮಾನದ ಒಟ್ಟು 6 ವಿಮಾನಗಳಲ್ಲಿ ತಲಾ ಇಬ್ಬರಂತೆ 12 ಬಾಂಬರ್‌ಗಳಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬರು ಎಕ್ಸ್‌ ಖಾತೆಯಿಂದ ಬಾಂಬ್‌ ಬೆದರಿಕೆ ಸಂದೇಶ ರವಾನಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ಬಾಂಬರ್‌ಗಳು ಇರುವುದಾಗಿ ಸಂದೇಶ ಬಂದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ತಪಾಸಣಾ ಕಾಯ ಕೈಗೊಂಡರು. ಈ ವಿಮಾನಗಳು ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ಸೇರಿದಂತೆ ದೇಶದ ವಿವಿಧ ತೆರಳುತ್ತಿದ್ದವು.

ಕಳೆದ ಒಂದು ವಾರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ಎರಡನೇ ಬಾಂಬ್‌ ಬೆದರಿಕೆ ಇದಾಗಿದೆ. ವಿಮಾನಗಳ ತಪಾಸಣೆ ನಡೆಸಿದ ಬಳಿಕ ಹುಸಿ ಬೆದರಿಕೆ ಎಂಬುದು ಗೊತ್ತಾಗಿದ್ದು, ಸಂದೇಶ ಕಳುಹಿಸಿದ ಅನಾಮಧೇಯ ವ್ಯಕ್ತಿಯ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ, ಇಂಡಿಗೋ ಏರ್‌ಲೈನ್ಸ್‌ ಸರ್ವರ್‌ ಸಮಸ್ಯೆಯಿಂದ ಟರ್ಮಿನಲ್ 1ರಲ್ಲಿ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ನೂರಾರು ಪ್ರಯಾಣಿಕರು ಪರದಾಡಿದರು.

ಚೆಕ್ಇನ್ ಸಮಸ್ಯೆ ಹಿನ್ನೆಲೆಯಲ್ಲಿ ವಿಮಾನಗಳ ಟೇಕಾಫ್‌ ಕೂಡ ವಿಳಂಬವಾಯಿತು. ಏರ್‌ಲೈನ್ಸ್‌ ಸಿಬ್ಬಂದಿ ಕೆಲ ವಿಮಾನಗಳನ್ನು ಮರು ಹೊಂದಿಸಿದರು.

ಭಾನುವಾರವೂ ಕೂಡ ದೇಶದ ವಿವಿಧ ಭಾಗಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ 20 ಕ್ಕೂ ಹೆಚ್ಚು ಬಾಂಬ್‌ ಬೆದರಿಕೆಗಳು ಬಂದಿರುವುದು ವರದಿಯಾಗಿದೆ. ಒಟ್ಟಾರೆ ಕಳೆದ ಒಂದು ವಾರದಿಂದ 90ಕ್ಕೂ ಹೆಚ್ಚು ವಿಮಾನಗಳು ಬಾಂಬ್‌ ಬೆದರಿಕೆ ಕರೆ ಹಾಗೂ ಸಂದೇಶ ಸ್ವೀಕರಿಸಿವೆ.

Tags:    

Similar News