ಬೆಂಗಳೂರು: ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಸಾವು, ಮತ್ತೋರ್ವ ಗಂಭೀರ; ಎಎನ್‌ಐ ತಂಡದಿಂದ ಪರಿಶೀಲನೆ

ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದ ಮನೆಯಲ್ಲಿ ಅನುಮಾನಸ್ಪದವಾಗಿ ಕುಕ್ಕರ್‌ವೊಂದು ಸ್ಪೋಟಗೊಂಡಿದ್ದು,ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.;

Update: 2024-08-15 06:40 GMT
ಕುಕ್ಕರ್‌ ಸ್ಟೋಟಗೊಂಡು ಓರ್ವ ಯುವಕ ಸಾವನ್ನಪಿದ್ದಾನೆ.
Click the Play button to listen to article

ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದ ಮನೆಯಲ್ಲಿ ಅನುಮಾನಸ್ಪದವಾಗಿ ಕುಕ್ಕರ್‌ವೊಂದು ಸ್ಪೋಟಗೊಂಡಿದ್ದು,ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿದ್ದ ಮೋಹ್ಸೀನ್ (23) ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.  ಇನ್ನೋರ್ವ ಗಾಯಾಳು ಸಮೀರ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸ್ಫೋಟದ ಹಿಂದೆ ಅನುಮಾನಗಳು ಶುರುವಾಗಿವೆ. ಜೆಪಿ ನಗರ 24ನೇ ಮುಖ್ಯರಸ್ತೆಯ ಉಡುಪಿ ಉಪಹಾರದ ಮನೆಯ ಬಳಿ ಈ ಘಟನೆ ನಡೆದಿದೆ. 

ಮಂಗಳವಾರ ಅಡುಗೆ ಮಾಡಲು ಗ್ಯಾಸ್ ಸ್ಟೌವ್‌​ ಮೇಲೆ ಕುಕ್ಕರ್​ ಇಟ್ಟು ಇಬ್ಬರು ಯುವಕರು ಮಲಗಿದ್ದರು. ಈ ವೇಳೆ ಕುಕ್ಕರ್ ಹೀಟ್ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಅಂದಾಜಿಸಲಾಗಿದೆ. 

ಅನುಮಾನ ಹುಟ್ಟಿಸಿದ ಸ್ಫೋಟ

ಈ ಸ್ಫೋಟ​ ಕೂಡ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ​ ಮಾದರಿಯಲ್ಲೇ ನಡೆದಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ವಾತಂತ್ರ್ಯೋತ್ಸವದ ಸನಿಹದಲ್ಲೇ ಸಂಭವಿಸಿದ ಸ್ಪೋಟ ಅನುಮಾನಕ್ಕೂ ಕಾರಣವಾಗಿದೆ. ಘಟನಾ ಸ್ಥಳಕ್ಕೆ ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಎನ್‌ಐಎ ಅಧಿಕಾರಿಗಳು ಕೂಡ ಸ್ಥಳಕ್ಕೆ ಡೌಡಾಯಿಸಿದ್ದು, ಇವರಿಗೆ ಪುಟ್ಟೇನಹಳ್ಳಿ ಪೊಲೀಸರು ಕೂಡ ಸಾಥ್‌ ನೀಡಿದ್ದಾರೆ. ಈ ಯುವಕರ ಹಿನ್ನೆಲೆ ಏನು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಹೇಗೆ ಬಂದರು, ಇಲ್ಲಿ ಏನು ಕೆಲಸ ಮಾಡ್ತಾ ಇದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ತೀವ್ರವಾಗಿ ಪರಿಶೀಲನೆ ಮಾಡಲಾಗಿದ್ದು, ಸ್ಪೋಟಗೊಂಡಿರುವ ವಸ್ತುಗಳನ್ನು ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ.

Tags:    

Similar News