Road Rage in Bangalore| ಕೆ.ಆರ್.ಪುರಂ ಫ್ಲೈಓವರ್‌ನಲ್ಲಿ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ

ಅಕ್ಟೋಬರ್ 31 ರಂದು ಮಧ್ಯಾಹ್ನ 1.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕ್ಯಾಬ್‌ನ ಹಿಂದೆ ಚಲಿಸುತ್ತಿದ್ದ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದೆ.

Update: 2025-11-03 04:58 GMT

ಬೈಕ್‌ಗೆ ಡಿಕ್ಕಿ ಹೊಡೆದ ಕ್ಯಾಬ್‌ ಚಾಲಕ 

Click the Play button to listen to article

ಬೆಂಗಳೂರಿನಲ್ಲಿ ದಿನೇ ದಿನೇ ರೋಡ್‌ರೇಜ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಕೆ.ಆರ್.ಪುರಂ ಫ್ಲೈಓವರ್‌ನಲ್ಲಿ ಮತ್ತೊಂದು ರಸ್ತೆ ಗಲಭೆ ಪ್ರಕರಣ ವರದಿಯಾಗಿದೆ. ಇಲ್ಲಿ ಕ್ಯಾಬ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಗಾಯಗೊಂಡಿದ್ದಾರೆ.

ಅಕ್ಟೋಬರ್ 31 ರಂದು ಮಧ್ಯಾಹ್ನ 1.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕ್ಯಾಬ್‌ನ ಹಿಂದೆ ಚಲಿಸುತ್ತಿದ್ದ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದೆ. ವೀಡಿಯೋ ತುಣುಕಿನಲ್ಲಿ ಕ್ಯಾಬ್ ಚಾಲಕ ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆಯ ಮಧ್ಯೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕೆಲವೇ ಕ್ಷಣಗಳಲ್ಲಿ, ಕ್ಯಾಬ್ ಚಾಲಕ ಏಕಾಏಕಿ ಬಲಕ್ಕೆ ತಿರುಗಿ ಮೋಟಾರ್ ಸೈಕಲ್‌ಗೆ ಗುದ್ದಿದ್ದಾನೆ. ಈ ಡಿಕ್ಕಿಯ ಪರಿಣಾಮದಿಂದ ದ್ವಿಚಕ್ರ ವಾಹನದ ಇಬ್ಬರೂ ಸವಾರರು ಸಮತೋಲನ ಕಳೆದುಕೊಂಡಿದ್ದಾರೆ. ಹಿಂಬದಿ ಸವಾರ ರಸ್ತೆಗೆ ಉರುಳಿ ಗಾಯಗೊಂಡರೆ, ಬೈಕ್ ಸವಾರರ ಸ್ವಲ್ಪ ಪರದಾಟದ ನಂತರ ಮೋಟಾರ್ ಸೈಕಲ್ ಅನ್ನು ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ.

ಈ ಘಟನೆ ಸಂಬಂಧ ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಕೆ. ಪರಶುರಾಮ್ ಅವರು 'ಎಕ್ಸ್' (X) ನಲ್ಲಿ ಮಾಹಿತಿ ನೀಡಿದ್ದು, ಗಾಯಗೊಂಡ ಇಬ್ಬರು ಸವಾರರನ್ನು ಸಂಪರ್ಕಿಸಲಾಗಿದೆ. ಆದರೆ, ಅವರು ಯಾವುದೇ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೂ ಘಟನೆಗೆ ಕಾರಣನಾದ ಕ್ಯಾಬ್ ಚಾಲಕನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಕಾರಿನ ಮಿರರ್‌ಗೆ ಬೈಕ್‌ ಡಿಕ್ಕಿ ಹೊಡೆದಿದ್ದಕ್ಕೆ  ಕೋಪಗೊಂಡ ಕಾರಿನ ಚಾಲಕ ವೇಗವಾಗಿ ಬಂದು ಬೈಕ್‌ ಅನ್ನೇ ಹಿಂಬಾಲಿಸಿ ಗುದ್ದಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಘಟನೆಯಲ್ಲಿ ಕಾರು ಗುದ್ದಿದ ರಭಸಕ್ಕೆ ಯುವಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದ ಘಟನೆ ನಡೆದಿತ್ತು. 

Tags:    

Similar News