ಪ್ರಜ್ವಲ್‌ ಪೆನ್‌ಡ್ರೈವ್ ಪ್ರಕರಣ‌ | ಕಾಂಗ್ರೆಸ್‌ ಹೇಳಿಕೆ ಹಾಸ್ಯಾಸ್ಪದ ಎಂದ ನಟ ಚೇತನ್‌

ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾದದ್ದು. ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದ ನಟ

Update: 2024-05-01 07:54 GMT
ನಟ ಚೇತನ್‌
Click the Play button to listen to article

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಚೇತನ್‌, ಪ್ರಧಾನಿ ಮೋದಿ ಮತ್ತು ಬಿಜೆಪಿ ಅದರ ಹೊಣೆ ಹೊರಬೇಕು ಎಂದು ಕಾಂಗ್ರೆಸ್‌ ಪಕ್ಷದ ಮಹಿಳಾ ಮುಖಂಡರು ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ತಪ್ಪು..ತಪ್ಪೇ.. ತಪ್ಪು ಸಾಬೀತಾದರೆ ಶಿಕ್ಷೆ ಆಗಬೇಕು. ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾದದ್ದು. ತಪ್ಪು ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆದರೆ, ಕಾಂಗ್ರೆಸ್‌ ಪಕ್ಷದ ಮಹಿಳೆಯರು ಈ ಪ್ರಕರಣವನ್ನು ʼಸಾವಿರಾರು ನಿರ್ಭಯಾʼಗಳಿಗೆ ಹೋಲಿಸಿರುವುದು ಮತ್ತು ಪ್ರಕರಣದ ಹೊಣೆಯನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ಹೊರಬೇಕೆಂದು ಒತ್ತಾಯಿಸುತ್ತಿರುವ ಹಾಸ್ಯಾಸ್ಪದ ಎಂದು ಚೇತನ್‌ ತಮ್ಮ ಅಧಿಕೃತ x ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. 

ಇನ್ನೂ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಅಂಜಿಕೆ ಇಲ್ಲದಿರುವುದು ನನ್ನ ಮನಸನ್ನು ದಿಗ್ಭ್ರಮೆಗೊಳಿಸಿದೆ. 2900 ಚಿತ್ರಗಳು ಅಥವಾ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್‌ನ್ನೂ ಸಾರ್ವಜನಿಕಗೊಳಿಸಿದರೆ ಜೆಡಿಎಸ್ ಪಕ್ಷ ಮತ್ತು ಕುಟುಂಬದವರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಪ್ರಜ್ವಲ್ ರೇವಣ್ಣ ಅವರಿಗೆ ಯಾವುದೇ ಭಯ ಇರಲಿಲ್ಲವೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Similar News