Price Hike | ಮನೆ ಮಾಲೀಕರಿಗೆ ಬರೆ ; ಲಿಫ್ಟ್, ವಿದ್ಯುತ್ ಪರಿವರ್ತಕ ಪರಿಶೀಲನಾ, ನವೀಕರಣ ಶುಲ್ಕ ಹೆಚ್ಚಳ

ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ನವೀಕರಣ ಶುಲ್ಕವನ್ನು 800 ರಿಂದ 1000 ರೂ. ತೆಗೆದುಕೊಳ್ಳಲಾಗುತ್ತಿತ್ತು. ಈಗ ಆ ದರವನ್ನು 5 ಸಾವಿರ ರೂ.ನಿಂದ 8 ಸಾವಿರ ರೂ.ಗೆ ಏರಿಕೆ ಮಾಡಲು ಮುಂದಾಗಿದೆ.;

Update: 2025-03-31 03:49 GMT

ರಾಜ್ಯದಲ್ಲಿ ಬೆಳೆ ಏರಿಕೆ ಪರ್ವ ಮುಂದುವರಿದಿದೆ. ಮೆಟ್ರೋ, ಬಸ್, ಹಾಲು, ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಇಂಧನ ಇಲಾಖೆಗೆ ವ್ಯಾಪ್ತಿಗೆ ಬರುವ  ಎಲೆಕ್ಟ್ರಿಕಲ್ ಇನ್ಸ್ಪೆಕ್ಟರೇಟ್ ವಿಭಾಗದಿಂದ ಪರಿಶೀಲನೆ ಮತ್ತು ವಾರ್ಷಿಕ ನವೀಕರಣ  ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ನವೀಕರಣ ಶುಲ್ಕವನ್ನು 800 ರಿಂದ 1000 ರೂ. ತೆಗೆದುಕೊಳ್ಳಲಾಗುತ್ತಿತ್ತು. ಈಗ ಆ ದರವನ್ನು 5 ಸಾವಿರ ರೂ.ನಿಂದ 8 ಸಾವಿರ ರೂ.ಗೆ ಏರಿಕೆ ಮಾಡಲು ಮುಂದಾಗಿದೆ.

ಅದೇ ರೀತಿ ಮನೆ, ಕಚೇರಿ, ಫ್ಯಾಕ್ಟರಿಗೆ 25 ಕೆವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ​ ಹಾಕಿಸಿಕೊಂಡಿದ್ದರೆ ಅದನ್ನು ಪರಿಶೀಲನೆ ಮಾಡಲು 1300 ರೂ.ನಿಂದ 1500 ರೂ. ಶುಲ್ಕ ಪಡೆಯಲಾಗುತ್ತಿತ್ತು.   ಈಗ ಆ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಲಿಫ್ಟ್ ಹಾಗೂ ವಿದ್ಯುತ್ ಪರಿವರ್ತಕ ಪರಿಶೀಲನಾ ಹಾಗೂ ನವೀಕರಣ ಶುಲ್ಕ ಹೆಚ್ಚಿಸುವ ಇಂಧನ ಇಲಾಖೆ ಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ( FKCCI) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಹಿಂದೆ 5 ರಿಂದ 10 ಕೆವಿಎ ಸಾಮರ್ಥ್ಯದ ಸಣ್ಣ ಜನರೇಟರ್ ಪರಿಶೀಲನೆ ಮತ್ತು ನವೀಕರಣಕ್ಕೆ 2 ಸಾವಿರ ರೂ. ಇದ್ದ ಶುಲ್ಕವನ್ನು 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ. ಇದು ಕೇವಲ ಆರಂಭಿಕ ಶುಲ್ಕಗಳಷ್ಟೇ. ಮಹಡಿ ಹೆಚ್ಚಾದಂತೆ ಲಿಫ್ಟ್ ಶುಲ್ಕ, ವಿದ್ಯುತ್ ಪರಿವರ್ತಕ ಸಾಮರ್ಥ್ಯದ ಶುಲ್ಕವು ಹೆಚ್ಚಲಿದೆ.  ಜನರೇಟರ್ ಕೆವಿಎ ಹೆಚ್ಚಾದಂತೆ ನವೀಕರಣ ಶುಲ್ಕ ಕೂಡ ಹೆಚ್ಚಲಿದೆ. ಇದರಿಂದ ಹೊಸದಾಗಿ ಮನೆ, ಅಪಾರ್ಟ್​ಮೆಂಟ್, ಫ್ಯಾಕ್ಟರಿ ಕಟ್ಟುವವರಿಗೂ, ಮತ್ತು ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್​ಮೆಂಟ್, ಫ್ಯಾಕ್ಟರಿ, ಮನೆ ಮಾಲೀಕರಿಗೂ ಹೆಚ್ಚಿನ ಹೊರೆ ಆಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಇಂಧನ ಇಲಾಖೆಯ ನಡೆಗೆ ಮನೆಯಲ್ಲಿ ಮಾಲೀಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ನಡೆಯಲ್ಲ. ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸಲು ಈ ರೀತಿ ದರ ಏರಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

Tags:    

Similar News