Wheeling Cases | ಬೈಕ್ ವೀಲಿಂಗ್ ತಡೆ ವಿಶೇಷ ಕಾರ್ಯಾಚರಣೆ: 58 ಪ್ರಕರಣ ದಾಖಲು, 45 ಬಂಧನ

ವಿಶೇಷವಾಗಿ ಪೀಣ್ಯ ಫ್ಲೈಓವರ್ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎತ್ತರದ ಕಾರಿಡಾರ್‌ನಲ್ಲಿಯೂ ಪೊಲೀಸರು ಕಣ್ಗಾವಲು ಬಿಗಿಗೊಳಿಸಿದ್ದರು.;

Update: 2025-03-29 07:18 GMT

ಬೈಕ್‌ ವೀಲಿಂಗ್‌ 

ಬೈಕ್ ವೀಲಿಂಗ್ ಕುರಿತ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆ, ಬೆಂಗಳೂರು ಸಂಚಾರ ಪೊಲೀಸರು ಗುರುವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ 58 ಪ್ರಕರಣಗಳನ್ನು ದಾಖಲಿಸಲಾಗಿದ್ದು, 45 ಮಂದಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಆರ್ ಪುರಂ ಬಳಿ 17 ಬೈಕ್‌ ವೀಲಿಂಗ್‌ ಮಾಡುತ್ತಿದ್ದವರನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ಹಳೆಯ ಮದ್ರಾಸ್ ರಸ್ತೆಯ ಜೊತೆಗೆ, ತುಮಕೂರು ರಸ್ತೆ, ವಿಶೇಷವಾಗಿ ಪೀಣ್ಯ ಫ್ಲೈಓವರ್ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎತ್ತರದ ಕಾರಿಡಾರ್‌ನಲ್ಲಿಯೂ ಪೊಲೀಸರು ಕಣ್ಗಾವಲು ಬಿಗಿಗೊಳಿಸಿದ್ದರು. ಸರ್ವೀಸ್‌ ರಸ್ತೆಗಳಲ್ಲಿ ಕೂಡ ಕೆಲವನ್ನು ಬೈಕ್ ವೀಲಿಂಗ್ ಮಾಡುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ತಿಳಿಸಿದ್ದಾರೆ. 

ಬೈಕ್ ವೀಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 25,000 ರೂ.ಗಳವರೆಗೆ ದಂಡ ವಿಧಿಸಬಹುದು. ಇದಲ್ಲದೇ ಇಂತಹ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು, ನೋಂದಣಿ ಪ್ರಮಾಣಪತ್ರ (RC) ರದ್ದತಿ ಅಥವಾ ಅಮಾನತುಗೊಳಿಸಲು ಕಳುಹಿಸುತ್ತಾರೆ. ಅಪ್ರಾಪ್ತ ವಯಸ್ಕರು ಭಾಗಿಯಾಗಿರುವ ಪ್ರಕರಣಗಳಲ್ಲಿ, ಅವರ ಪೋಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 281 ರ ಅಡಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಅತಿವೇಗದ ಚಾಲನೆ ಅಥವಾ ಸವಾರಿಗಾಗಿ ಪ್ರಕರಣ ದಾಖಲಿಸಲಾಗುತ್ತದೆ.

Tags:    

Similar News