CHINA GOODS | ಉಡುಪಿಯಲ್ಲಿ 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ಜಪ್ತಿ

Update: 2024-10-02 12:05 GMT

ಚೀನಾದ ಸರಕು ಈಗ ಭಾರತದ ಅಡುಗೆ ಮನೆಗೂ ಲಗ್ಗೆ ಇಟ್ಟಿದೆ. ಎಲೆಕ್ಟ್ರಾನಿಕ್ ವಸ್ತುಗಳ ಹೇರಳ ಉತ್ಪಾದನೆ ಹಾಗೂ ಮಾರಾಟದಿಂದ ನೆರೆಹೊರೆಯ ರಾಷ್ಟ್ರಗಳಿಗೆ ಹೊಡೆತ ನೀಡಿದ್ದ ಚೀನಾ ಇದೀಗ ಕೃಷಿ ಉತ್ಪನ್ನಗಳ ಸರಬರಾಜು ಮೂಲಕ ರೈತರು ಹಾಗೂ ಆಹಾರ ತಜ್ಞರಲ್ಲಿ ಕಳವಳ ಸೃಷ್ಟಿಸಿದೆ.

ಉಡುಪಿ ಮಾರುಕಟ್ಟೆಯಲ್ಲಿ ಬುಧವಾರ ಚೀನಾ ಬೆಳೆದಿರುವ ಬೆಳ್ಳುಳ್ಳಿ, ದೇಶಿಯ ಉತ್ಪನ್ನಕ್ಕೆ ಪರ್ಯಾಯವಾಗಿ ಮಾರಾಟವಾಗುತ್ತಿತ್ತು. ಇದನ್ನು ಅರಿತ ವರ್ತಕರು ನಗರಸಭೆಗೆ ದೂರು ನೀಡಿದ್ದು, ಸಗಟು ವ್ಯಾಪಾರದ ಮಳಿಗೆಯೊಂದರ ಮೇಲೆ ನಗರಸಭೆ ಆಯುಕ್ತ ಬಿ.ರಾಯಪ್ಪ ಅವರು ದಾಳಿ ನಡೆಸಿ, ಐದು ಕ್ವಿಂಟಲ್ ಚೀನಾ ಬೆಳ್ಳುಳ್ಳಿಯನ್ನು ಜಪ್ತಿ ಮಾಡಿದ್ದಾರೆ.

ಚೀನಾದ ಬೆಳ್ಳುಳ್ಳಿಯು ಎರಡನೇ ಶ್ರೇಣಿಯ ನಗರಗಳಾದ ಮಂಗಳವಾರ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಸಣ್ಣ ಪಟ್ಟಣ ನಗರಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆ.ಜಿ.ಗೆ 160 ರಿಂದ 320 ರೂ. ನಂತೆ ಮಾರಾಟವಾಗುತ್ತಿದೆ. ಆದರೆ, ಚೀನಾದ ಬೆಳ್ಳುಳ್ಳಿ ಕೇವಲ 50 ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿದೆ.

ದರ ಸಮರದಿಂದಾಗಿ ಭಾರತೀಯ ಕೃಷಿಕರಿಗೆ ಚೀನಾ ಬೆಳ್ಳುಳ್ಳಿ ತೀವ್ರ ಪೆಟ್ಟು ನೀಡಿದೆ. ಚೀನಾ ಅತಿ ಹೆಚ್ಚು ಬೆಳ್ಳುಳ್ಳಿ ಬೆಳೆಯುವುದಲ್ಲದೇ ಇತರೆ ದೇಶಗಳಿಗೆ ರಫ್ತು ಮಾಡುತ್ತಿದೆ. ಭಾರತವು ತನ್ನ ಆಮದನ್ನು 2014 ರಲ್ಲಿ ನಿಷೇಧಿಸಿದ ನಂತರವೂ ಚೀನಾ ಬೆಳ್ಳುಳ್ಳಿ ಮಾರಾಟ ಆಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಭಾರತೀಯ ಬೆಳ್ಳುಳ್ಳಿ ಕಟು ವಾಸನೆ, ದೃಢವಾದ ರುಚಿ ಹೊಂದಿರುತ್ತದೆ. ಆದರೆ, ಚೀನೀ ಉತ್ಪನ್ನವು ಪರಿಮಳ ಹೊಂದಿದೆ.

Tags:    

Similar News