Donald Trump: ಗಾಜಾಪಟ್ಟಿಯನ್ನು ಅಮೆರಿಕದ ವಶಕ್ಕೆ ಪಡೆಯುತ್ತೇವೆ; ಡೊನಾಲ್ಡ್‌ ಟ್ರಂಪ್‌

Donld Trump: ಯುದ್ಧದಿಂದ ನಾಶವಾಗಿರುವ ಗಾಜಾ ಪಟ್ಟಿ ಪ್ರದೇಶವನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ. ಪ್ಯಾಲೆಸ್ತೀನಿಯರಿಗೆ ಅಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.;

Update: 2025-02-05 04:57 GMT
ಟ್ರಂಪ್‌ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌

ಯುದ್ಧಪೀಡಿತ ಹಾಗೂ ಹಮಾಸ್‌ ಉಗ್ರರ ಹಿಡಿತದಲ್ಲಿರುವ ಗಾಜಾಪಟ್ಟಿಯನ್ನು ಅಮೆರಿಕ ತನ್ನ ವಶಕ್ಕೆ ಪಡೆದುಕೊಂಡು ಅಭಿವೃದ್ಧಿ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ವಾಸ್ತವವಾಗಿ ಇದು ಮಧ್ಯ ಪ್ರಾಚ್ಯದ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಲಿದೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಗಾಜಾದ ಭವಿಷ್ಯವನ್ನು ಪುನರ್ ರೂಪಿಸಬಲ್ಲ ಐತಿಹಾಸಿಕ ತೀರ್ಮಾನ ಎಂದು ಹೇಳಿದ್ದಾರೆ.

ಬುಧವಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಯುದ್ಧದಿಂದ ನಾಶವಾಗಿರುವ ಗಾಜಾ ಪಟ್ಟಿ ಪ್ರದೇಶವನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ. ಪ್ಯಾಲೆಸ್ತೀನಿಯರಿಗೆ ಅಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಹೀಗಾಗಿ ಅಮೆರಿಕ ಆ ಪ್ರದೇಶದ ಮೇಲೆ ದೀರ್ಘಕಾಲದ ಮಾಲೀಕತ್ವ ಹೊಂದಲಿದೆ ಎಂದು ಹೇಳಿದರು.

ಇಸ್ರೇಲ್‌ ಪ್ರಧಾನಿ ನೆತನ್ಯಾಹು, ಟ್ರಂಪ್ ಈ ಕಲ್ಪನೆಯು ಇತಿಹಾಸ ಬದಲಾಯಿಸಬಲ್ಲ ಮಹತ್ತರ ತೀರ್ಮಾನವೆಂದು ಶ್ಲಾಘಿಸಿದ್ದಾರೆ.

ರಕ್ತ ಸಿಕ್ತ ಯುದ್ಧ

2023 ಅಕ್ಟೋಬರ್‌ನಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿರುವ ಹಮಾಸ್ ನಡುವೆ ಗಾಜಾದಲ್ಲಿ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ಒಪ್ಪಂದೊಂದಿಗೆ ಯುದ್ಧ ವಿರಾಮ ಘೋಷಣೆಯಾಗಿದೆ.

ಇಸ್ರೇಲ್ ನಡೆಸಿದ ಭಾರೀ ಬಾಂಬ್ ದಾಳಿಯಿಂದ ಗಾಜಾದ ಬಹುತೇಕ ಕಟ್ಟಡಗಳು ನಾಶವಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಈ ಪ್ರದೇಶದಲ್ಲಿ ಸುಮಾರು 21 ಲಕ್ಷ ಜನರು ವಾಸಿಸುತ್ತಿದ್ದಾರೆ.

ನಾವು ಗಾಜಾವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿನ ಅಪಾಯಕಾರಿ ಉಳಿದಿರುವ ಬಾಂಬುಗಳು ಮತ್ತು ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ನಾವು ಪ್ರದೇಶದ ಧ್ವಂಸಗೊಂಡ ಕಟ್ಟಡಗಳನ್ನು ತೆರವು ಮಾಡಿ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸುತ್ತೇವೆ. ಉದ್ಯೋಗ ಮತ್ತು ವಸತಿ ಅವಕಾಶಗಳನ್ನು ಕಲ್ಪಿಸುತ್ತೇವೆ ಎಂದು ಅವರು ಹೇಳಿದರು.

ಪ್ರದೇಶದಲ್ಲಿ ಸುರಕ್ಷತೆ ಖಾತ್ರಿ ನೀಡಲು ಅಮೆರಿಕ ಸೇನೆ ನಿಯೋಜನೆ ಮಾಡುವ ಸಂಭವದ ಬಗ್ಗೆ ಪ್ರಶ್ನೆ ಕೇಳಿದಾಗ, ಅಗತ್ಯವಾದರೆ ನಾವು ಅದನ್ನೂ ಮಾಡುತ್ತೇವೆ. ಇದು ಸಂಪೂರ್ಣ ಮಧ್ಯಪ್ರಾಚ್ಯಕ್ಕೆ ಹೆಮ್ಮೆಯ ವಿಷಯವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮಧ್ಯಪ್ರಾಚ್ಯದ ದೇಶಗಳಿಗೆ ಭೇಟಿ

ಗಾಜಾ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ಸೇರಿ ಮಧ್ಯಪ್ರಾಚ್ಯದ ಹಲವಾರು ಭಾಗಗಳಿಗೆ ಭೇಟಿ ನೀಡುವುದಾಗಿ ಟ್ರಂಪ್‌ ಇದೇ ವೇಳೆ ನುಡಿದರು. ಆದರೆ ದಿನಾಂಕವನ್ನು ಅವರು ಪ್ರಕಟಿಸಲಿಲ್ಲ.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗಾಜಾವನ್ನು ಹೇಗೆ ಮತ್ತು ಯಾವಾಗ ವಶಪಡಿಸಿಕೊಳ್ಳುತ್ತಾರೆ ಎಂದು ಹೇಳಿಲ್ಲ. 

Tags:    

Similar News