Open AI | ಭಾರತ ಮೂಲದ ಕೃತಕ ಬುದ್ಧಿಮತ್ತೆ ತಜ್ಞನ ಮೃತದೇಹ ಅಮೆರಿಕದಲ್ಲಿ ಪತ್ತೆ
ಸುಚೀರ್ ಬಾಲಾಜಿ ಅವರ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಪತ್ತೆ ಹಚ್ಚಿದ್ದರು.;
ಭಾರತೀಯ ಮೂಲದ ಕೃತಕ ಬುದ್ಧಿಮತ್ತೆ ತಜ್ಱ ಸುಚೀರ್ ಬಾಲಾಜಿಯ ಮೃತದೇಹ ಅಮೆರಿಕದ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆ ಎಂಬುದಾಗಿ ಅಲ್ಲಿನ ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಆದಾಗ್ಯೂ ದ್ಯತ್ಯ ಉದ್ಯಮಿ ಎಲಾನ್ ಮಸ್ಕ್ ಈ ಸಾವಿನ ಬಗ್ಗೆ ಗೌಪ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸುಚಿರ್ ಬಾಲಾಜಿ ಬೃಹತ್ ಕೃತಕಬುದ್ಧಿಮತ್ತೆಕಂಪನಿ ''ಓಪನ್ಎಐ''ನಲ್ಲಿ ಉದ್ಯೋಗಿಯಾಗಿದ್ದರು. ಆದರೆ, ಆ ಕಂಪನಿಯ ಅಭ್ಯಾಸಗಳು ಮತ್ತು ಕಾರ್ಯಾಚರಣೆಗಳ ಸರಿಯಿಲ್ಲ ಎಂದು ದೂರಿದ್ದರು. ಪ್ರಮುಖವಾಗಿ ಅವರು ಕಾಪಿರೈಟ್ ವಿಚಾರವಾಗಿ ತಕರಾರು ಎತ್ತಿದ್ದರು.
ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರಿಗೆ, ಸುಚಿರ್ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಮಾಹಿತಿ ನೀಡಿದ ಬಳಿಕ ವಿಷಯ ಬಹಿರಂಗಗೊಂಡಿದೆ. ಪೊಲೀಸ್ ಅಧಿಕಾರಿಗಳು ಸುಚಿರ್ ಮೃತ ದೇಹವನ್ನು ಅವರ ಅಪಾರ್ಟ್ಮೆಂಟ್ನಲ್ಲಿ ಪತ್ತೆಹಚ್ಚಿದ್ದಾರೆ. ನವೆಂಬರ್ 26ರಂದು ಅವರು ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಓಪನ್ಎಐ ಕೃತಿಸ್ವಾಮ್ಯ ಉಲ್ಲಂಘನೆಯ ಆರೋಪ ಮಾಡಿದ್ದ ಸುಚಿರ್
ಸುಚಿರ್ ಬಾಲಾಜಿ ಈ ವರ್ಷದ ಆಗಸ್ಟ್ನಲ್ಲಿ ಓಪನ್ಎಐಗೆ ರಾಜೀನಾಮೆ ನೀಡಿದ್ದರು. ಈ ಸಂಸ್ಥೆಯು ಕೃತಿಸ್ವಾಮ್ಯ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಕಂಪನಿಯು ತನ್ನ ಉತ್ಪಾದನಾ ಎಐ ಯೋಜನೆಯಾಗಿರುವ ಚಾಟ್ ಜಿಪಿಟಿಗೆ ತರಬೇತಿ ನೀಡುವ ಸಲುವಾಗಿ ಸರಿಯಾದ ಅನುಮತಿಯಿಲ್ಲದೆ ವಿಷಯಗಳನ್ನು ಬಳಸುತ್ತಿದೆ ಎಂದು ಅವರು ಸಾರ್ವಜನಿಕವಾಗಿ ಆರೋಪಿಸಿದ್ದರು. ಚಾಟ್ ಜಿಪಿಟಿಯಂತಹ ತಂತ್ರಜ್ಞಾನಗಳು ಅಂತರ್ಜಾಲವನ್ನು ಹಾನಿಗೊಳಿಸುತ್ತಿವೆ ಎಂದು ಅವರು ಹೇಳಿದ್ದರು.
ನ್ಯೂಯಾರ್ಕ್ ಟೈಮ್ಸ್ಗೆ ಸಂದರ್ಶನ ನೀಡಿದ್ದ ಸುಚಿರ್, ಓಪನ್ಎಐನ ಅಭ್ಯಾಸಗಳು ಇಂಟರ್ನೆಟ್ ಕ್ಷೇತ್ರದ ದೊಡ್ಡ ಸಮಸ್ಯೆ. ಅನುಮತಿಯಿಲ್ಲದೆ ಡೇಟಾಗಳು ವೈಯಕ್ತಿಕ ಹಾನಿ ಮಾಡುತ್ತದೆ ಎಂದು ಆರೋಪಿಸಿದ್ದರು.
ಎಲಾನ್ ಮಸ್ಕ್ ಪ್ರತಿಕ್ರಿಯೆ
ಸುಚಿರ್ ಬಾಲಾಜಿ ಅವರ ಅನಿರೀಕ್ಷಿತ ಸಾವಿನ ಬಗ್ಗೆ ಹಲವಾರು ಜನರು ಸೋಶಿಯಲ್ ಮೀಡಿಯಾಗಳಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ. ಟೆಸ್ಲಾ ಸಿಇಒ ಕೂಡ ಕೇವಲ್ ''ಮ್'' ಎಂದಷ್ಟೇ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಓಪನ್ಎಐ ಅನ್ನು 2015 ರಲ್ಲಿ ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್ಮನ್ ಜತೆಯಾಗಿ ಸ್ಥಾಪಿಸಿದ್ದರು. ಮಸ್ಕ್ 2018ರಲ್ಲಿ ಕಂಪನಿಯನ್ನು ತೊರೆದು ಮತ್ತೊಂದು ಸ್ಟಾರ್ಟ್ ಅಪ್ ಎಕ್ಸ್ಎಐ ಅನ್ನು ಸ್ಥಾಪಿಸಿದ್ದರು. ಅಂದಿನಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ. ಕಳೆದ ತಿಂಗಳು, ಓಪನ್ಎಐ ಏಕಸ್ವಾಮ್ಯ ಹೊಂದಿದೆ ಎಂದು ಮಸ್ಕ್ ಆರೋಪ ಮಾಡಿದ್ದರು.