ಭಾರತದ ಕುಲಭೂಷಣ್ ಜಾಧವ್ ಅಪಹರಣ ಮಾಡಿದ್ದ ಮೌಲ್ವಿ ಪಾಕಿಸ್ತಾನದಲ್ಲಿ ಹತ್ಯೆ
ಮೀರ್ ಶುಕ್ರವಾರದ ಪ್ರಾರ್ಥನೆ ಮುಗಿಸಿ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ, ಇಬ್ಬರು ಬೈಕ್ ಸವಾರರು ಮಾರ್ಗಮಧ್ಯೆ ತಡೆದು, ಅತಿ ಸಮೀಪದಿಂದ ಹಲವಾರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.;
ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಅಪಹರಣ ಮಾಡಿಸಿ ಜೈಲು ಸೇರುವಂತೆ ಮಾಡಿದ್ದ ಪಾಕಿಸ್ತಾನದ ವಿದ್ವಾಂಸ ಮುಫ್ತಿ ಶಾ ಮಿರ್ ಹತ್ಯೆಯಾಗಿದ್ದಾರೆ. ಬಲೂಚಿಸ್ತಾನದಲ್ಲಿ ಮುಫ್ತಿ ಶಾ ಮಿರ್ ಎಂಬುವನನ್ನು ಅನಾಮಧೇಯ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ಮಾನವ, ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರ ಸಾಗಣೆಯಲ್ಲಿ ತೊಡಗಿದ್ದ ಆರೋಪ ಮೀರ್ ಮೇಲಿದೆ. ಆತ ಶುಕ್ರವಾರದ ಪ್ರಾರ್ಥನೆ ಮುಗಿಸಿ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ, ಇಬ್ಬರು ಬೈಕ್ ಸವಾರರು ಮಾರ್ಗಮಧ್ಯೆ ತಡೆದು, ಅತಿ ಸಮೀಪದಿಂದ ಹಲವಾರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಮೀರ್ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ, ಮಸೀದಿ ಬಲೂಚಿಸ್ತಾನದ ದಕ್ಷಿಣ ಭಾಗದ ಕೇಚ್ ಜಿಲ್ಲೆಯ ತುರ್ಬಟ್ ನಗರದಲ್ಲಿ ಇದೆ. ಈತ 2023ರಲ್ಲಿ ತುರ್ಬಟ್‌ನಲ್ಲಿ, ಅಧ್ಯಾಪಕ ಅಬ್ದುಲ್ ರೌಫ್ ಅವರನ್ನು ಧರ್ಮದ್ರೋಹ ಆರೋಪದಡಿ ಹತ್ಯೆ ಮಾಡಿದ್ದ.
ಐಎಸ್ಐಗೆ ಒಡನಾಡಿಯಾದ ಮೀರ್ ಈ ಹಿಂದೆ ಜೀವಬೆದರಿಕೆ ಎದುರಿಸಿದ್ದ. ಎರಡು ಬಾರಿ ಹತ್ಯಾ ಯತ್ನಗಳೂ ನಡೆದಿದ್ದವು. ಇದೀಗ ಸತತ ಗುಂಡಿನ ದಾಳಿ ಬಳಿಕ ಮುಫ್ತಿ ಶಾ ಮಿರ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತನು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮುಫ್ತಿ ಶಾ ಮಿರ್ ಮಾನಹ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಮೂಲಭೂತವಾದಿ ಪಕ್ಷವಾದ ಉಲೇಮಾ ಎ ಇಸ್ಲಾಮ್ (ಜೆಯುಐ) ಸದಸ್ಯನೂ ಆಗಿದ್ದ. ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿಯೂ ಈತ ಕೆಲಸ ಮಾಡುತ್ತಿದ್ದ. ಆದರೆ, ಹೆಸರಿ ವಿದ್ವಾಂಸ ಎನಿಸಿಕೊಂಡಿದ್ದ.
ಕುಲಭೂಷಣ್ ಅವರನ್ನು ಇರಾನ್ನಿಂದ ಅಪಹರಣ ಮಾಡಿದ್ದರು
ಕಳೆದ ಒಂದು ವಾರದಲ್ಲಿ ಜೆಯುಐನ ಮೂವರು ಸದಸ್ಯರನ್ನು ಅನಾಮಧೇಯ ವ್ಯಕ್ತಿಗಳು ಕೊಂದಿದ್ದಾರೆ. ಇದಕ್ಕೂ ಮೊದಲು ಇಬ್ಬರು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಅಪಹರಣ ಮಾಡಲಾಗಿತ್ತು. ಅಪಹರಣದ ಹಿಂದೆ ಮುಫ್ತಿ ಶಾ ಮಿರ್ ಕೈವಾಡವಿತ್ತು.
ಜಾಧವ್ ಅವರು ಗೂಢಚಾರಿ ಎಂದು ಘೋಷಿಸಿದ್ದ ಪಾಕ್ ಮಿಲಿಟರಿ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿತ್ತು. ಆದರೆ, ಭಾರತ ಸರ್ಕಾರವು ಪ್ರಕರಣವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ, ಸಮರ್ಥ ವಾದ ಮಂಡಿಸಿದ ಕಾರಣ, ಜಾಧವ್ ಅವರಿಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ 2019ರಲ್ಲಿ ತಡೆಯಾಜ್ಞೆ ನೀಡಲಾಗಿದೆ.