Srilanka Election : ಲಂಕಾ ರಾಜಕೀಯದಲ್ಲಿ ಹೊಸ ಯಗಾರಂಭ, ಮಾರ್ಕ್ಸ್‌ವಾದಿ ಪಕ್ಷದ ತೆಕ್ಕೆಗೆ ದ್ವೀಪರಾಷ್ಟ್ರ
ದಿಸ್ಸಾನಾಯಕೆ ಅವರ ಎಡಪಂಥೀಯ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ ಬೆಂಬಲಿತ ನ್ಯಾಷನಲ್ ಪೀಪಲ್ಸ್ ಪವರ್ ಒಟ್ಟು 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.;
ದ್ವೀಪ ರಾಷ್ಟ್ರ ಶ್ರೀಲಂಕಾದ ರಾಜಕೀಯದಲ್ಲಿ ಹೊಸ ಯುಗ ಆರಂಭಗೊಂಡಿದೆ. ಸಾರ್ವತ್ರಿಕ ಸಂಸತ್ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರ ನೇತೃತ್ವದ ಎನ್‌ಪಿಪಿ ಶುಕ್ರವಾರ (ನವೆಂಬರ್ 15) ಐತಿಹಾಸಿಕ ಮೂರನೇ ಎರಡರಷ್ಟು ಬಹುಮತ ಗಳಿಸಿದೆ. ಇದೇ ವೇಳೆ ಈ ರಾಷ್ಟ್ರದಲ್ಲಿ ದಶಕಗಳಿಂದ ರಾಜಕೀಯ ಪ್ರಾಬಲ್ಯ ಹೊಂದಿದ್ದ ಸಾಂಪ್ರದಾಯಿಕ ಪಕ್ಷಗಳನ್ನು ಅಚ್ಚರಿಯಂತೆ ಮಣಿಸಿದೆ.
ದಿಸ್ಸಾನಾಯಕೆ ಅವರ ಎಡಪಂಥೀಯ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ ಬೆಂಬಲಿತ ನ್ಯಾಷನಲ್ ಪೀಪಲ್ಸ್ ಪವರ್ ಒಟ್ಟು 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಅಚ್ಚರಿಯೆಂದರೆ ಹಿಂದಿನ ಸಂಸತ್‌ನಲ್ಲಿ ಈ ಪಕ್ಷ ಕೇವಲ 3 ಸ್ಥಾನ ಹೊಂದಿತ್ತು.
ಚಲಾವಣೆಯಾದ ಎಲ್ಲಾ ಮತಗಳಲ್ಲಿ ಎನ್‌ಪಿಪಿ ಶೇಕಡಾ 61 ರಷ್ಟು ಮತಗಳನ್ನು ಗಳಿಸಿದೆ. ಇದು ಸೆಪ್ಟೆಂಬರ್‌ನಲಿ ದಿಸ್ಸಾನಾಯಕೆ ಅಧ್ಯಕ್ಷರಾಗಲು ಪಡೆದ ಮೊದಲ ಸುತ್ತಿನಲ್ಲಿ ಮತಗಳ ಶೇಕಡಾ 42ಕ್ಕಿಂತ ಅಧಿಕ ಎಂಬುದು ವಿಶೇಷ. ಸಂಸತ್ತಿನಲ್ಲಿ ಸರಳ ಬಹುಮತಕ್ಕಾಗಿ ಆಡಳಿತ ಪಕ್ಷವು 113 ಸ್ಥಾನಗಳನ್ನು ಗೆಲ್ಲಬೇಕು. ಆದರೆ ಎನ್‌ಪಿಪಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡಿದೆ.
ದಿಕ್ಕೆಟ್ಟ ಪ್ರತಿಪಕ್ಷಗಳು
ಫೆಡರಲ್ ಪಾರ್ಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ʼಇಳಂಕೈ ತಮಿಳು ಅರಸು ಕಚ್ಚಿʼ (ಐಟಿಎಕೆ) ದ್ವೀಪದ ಉತ್ತರ ಮತ್ತು ಪೂರ್ವದ ತಮಿಳು ಪ್ರದೇಶಗಳಲ್ಲಿ ಒಟ್ಟು ಎಂಟು ಸ್ಥಾನಗಳನ್ನು ಗೆದ್ದು ಸಂಸತ್ತಿನಲ್ಲಿ ಮತ್ತೊಂದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವ್ಯತಿರಿಕ್ತವಾಗಿ, ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಬೆಂಬಲಿತ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಒಂದು ಕಾಲದಲ್ಲಿ ಬಲಶಾಲಿ ಎಸ್‌ಎಲ್‌ಪಿಪಿ ಕ್ರಮವಾಗಿ 5 ಮತ್ತು 3 ಸ್ಥಾನಗಳಿಗೆ ಇಳಿದಿದೆ. ಉಳಿದ ಸ್ಥಾನಗಳು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರಿಗೆ ಲಭಿಸಿತು.
ಬದಲಾವಣೆಗಾಗಿ ಮತ
"ಇದು ಸಂಪೂರ್ಣ ಬದಲಾವಣೆಗೆ ಸಿಕ್ಕ ಬಹುಮತ" ಎಂದು ರಾಜಕೀಯ ವಿಶ್ಲೇಷಕ ಕುಸಾಲ್ ಪೆರೆರಾ ಕೊಲಂಬೊದಿಂದ ʼದ ಫೆಡರಲ್. ಜತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ. "ಮತದಾರರು ವಿಷಯಗಳಲ್ಲಿ ಮಾತ್ರವಲ್ಲದೆ ಸ್ವರೂಪದಲ್ಲೂ ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಸ್ಪಷ್ಟ ಎಂದು ಅವರು ಹೇಳಿದ್ದಾರೆ.
1978ರಲ್ಲಿ ಹೊಸ ಸಂವಿಧಾನವನ್ನು ಪರಿಚಯಿಸಿದಾಗಿನಿಂದ ಶ್ರೀಲಂಕಾದ ಯಾವುದೇ ರಾಜಕೀಯ ಪಕ್ಷವು ಸ್ವಂತವಾಗಿ ಮೂರನೇ ಎರಡರಷ್ಟು ಬಹುಮತವನ್ನು ಗೆದ್ದಿಲ್ಲ. ಹೀಗಾಗಿ ಈ ಎನ್‌ಪಿಪಿ ಪಾಲಿಗೆ ಇದು ಗರಿಷ್ಠ ಸಾಧನೆಯಾಗಿದೆ.
55 ವರ್ಷದ ದಿಸ್ಸಾನಾಯಕೆ ಗುರುವಾರ ಮತ ಚಲಾಯಿಸಿದ ನಂತರ "ಇದು ಶ್ರೀಲಂಕಾದ ನಿರ್ಣಾಯಕ ಚುನಾವಣೆ" ಎಂದು ಪ್ರತಿಪಾದಿಸಿದ್ದರು. ಶುಕ್ರವಾರದ ಚುನಾವಣಾ ಫಲಿತಾಂಶವು ಇದನ್ನೇ ಪ್ರತಿಬಿಂಬಿಸಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ನಿರ್ಗಮನ ಸಂಸತ್ತಿನಲ್ಲಿ ಕೇವಲ 3 ಸ್ಥಾನಗಳನ್ನು ಹೊಂದಿದ್ದ ಎನ್‌ಪಿಪಿ ಗೆಲುವಿನ ಅಬ್ಬರ ಹೇಗಿದೆಯೆಂದರೆ ಪೂರ್ವ ಕರಾವಳಿಯ ತಮಿಳು ಬಹುಸಂಖ್ಯಾತ ಬಟ್ಟಿಕಲೋವಾವನ್ನು ಹೊರತುಪಡಿಸಿ ಎಲ್ಲಾ 22 ಚುನಾವಣಾ ಜಿಲ್ಲೆಗಳಲ್ಲಿ ಅದು ಅಗ್ರಸ್ಥಾನ ಗಳಿಸಿದೆ. ಅಲ್ಲಿ ಐಟಿಎಕೆ ಮಾತ್ರ ಹೆಚ್ಚಿನ ಸ್ಥಾನ ಪಡೆದಿದೆ.
ಎನ್‌ಪಿಪಿ ಮತ್ತು ತಮಿಳು ಪ್ರದೇಶಗಳುದಗೆ
ಎನ್‌ಪಿಸಿಗೆ ಬಹುಸಂಖ್ಯಾತ ಸಿಂಹಳೀಯ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಿನ ಬಹುಮತ ಸಿಕ್ಕರೂ , ದ್ವೀಪದ ಉತ್ತರ ಮತ್ತು ಪೂರ್ವದ ತಮಿಳು ಪ್ರದೇಶಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಯಾಕೆಂದರೆ ಇದು ತಮಿಳು ಪ್ರತ್ಯೇಕವಾದಿ ಯುದ್ಧವನ್ನು ನಡೆದ ಭೂಮಿಯಾಗಿದೆ. ಎಲ್‌ಟಿಟಿಐ ಪ್ರಭಾಕರನ್ ಹತ್ಯೆ ಬಳಿಕ 2009ರಲ್ಲಿ ಅದು ಕೊನೆಗೊಂಡಿತ್ತು.
ಭಾರತೀಯ ಮೂಲದ ತಮಿಳು ಕಾರ್ಮಿಕರು ಹೆಚ್ಚು ವಾಸಿಸುವ ದೇಶದ ಕೇಂದ್ರ ಚಹಾ ತೋಟದ ಪ್ರದೇಶಗಳಲ್ಲಿಯೂ ಎನ್‌ಪಿಪಿ ಎಲ್ಲರನ್ನೂ ಮೀರಿಸಿದೆ.
ಎನ್‌ಪಿಪಿ ಶೇಕಡಾ 61.56 ರಷ್ಟು ಮತಗಳು ಎಸ್‌ಕೆಬಿ ಶೇಕಡಾ 17.66 ಕ್ಕಿಂತ ದೊಡ್ಡ ವ್ಯತ್ಯಾಸ ಹೊಂದಿದೆ. ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಲೀನ್ ಸ್ವೀಪ್
ಎನ್‌ಪಿಪಿಯ ಅಬ್ಬರ ಎಲ್ಲಾ ಮಾಜಿ ಕ್ಯಾಬಿನೆಟ್ ಮಂತ್ರಿಗಳ ಸೋಲಿಗೆ ಕಾರಣವಾಯಿತು, ಭ್ರಷ್ಟಾಚಾರ ತೊಡೆದುಹಾಕುವ, ರಾಷ್ಟ್ರೀಯ ಸಾಮರಸ್ಯಕ್ಕೆ ಬೆಂಬಲಿಸುವ ಮತ್ತು ಜರ್ಜರಿತ ಆರ್ಥಿಕತೆ ಉತ್ತೇಜಿಸುವ ಆಡಳಿತದ ಭರವಸೆಯನ್ನು ದಿಸ್ಸಾನಾಯಕೆ ನೀಡಿದ್ದರು. ಅದು ಫಲಕೊಟ್ಟಿದೆ.
2022ರಲ್ಲಿ ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಅಧಿಕಾರದಿಂದ ಇಳಿಸಲು ಸಾಮೂಹಿಕ ದಂಗೆ ನಡೆದಿತ್ತು. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಜನರು ಸಿಡಿದೆದ್ದಿದ್ದರು. ಇದೀಗ ಮತದಾರರು ಹೊಸ ಪಕ್ಷಕ್ಕೆ ಅವಕಾಶ ಕೊಟ್ಟಿದ್ದಾರೆ.
ಗೊಟಬಯ ಬಳಿಕ ವಿಕ್ರಮಸಿಂಘೆ ಶ್ರೀಲಂಕಾವನ್ನು ಮುನ್ನಡೆಸಿದ್ದರು. ಅವರು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದರೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೇಲ್ ಔಟ್ ನಂತರ ಅವರು ಅಳವಡಿಸಿಕೊಂಡ ನೀತಿಗಳು ಗೊಂದಲದಲ್ಲಿದ್ದವು. ಈ ಅಸಮಾಧಾನವು ಮೊದಲು ದಿಸ್ಸಾನಾಯಕೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಿತು. ಇದೀಗ ಮಾರ್ಕ್ಸ್‌ವಾದಿಗಳಿಗೆ ಸಂಸತ್ ಕೂಡ ಲಭಿಸಿದೆ.
ಬೃಹತ್ ಗೆಲುವು ಹೊಸ ಅಧ್ಯಕ್ಷರಿಗೆ ಹಲವಾರು ಸವಾಲುಗಳನ್ನು ಒಡ್ಡಲಿದೆ ಎಂದು ಪೀರಿಸ್ ಹೇಳಿದ್ದಾರೆ. ಅವರು ಇತರ ವಿಷಯಗಳ ಜೊತೆಗೆ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸುವುದಾಗಿ ಮತ್ತು ಸಂಸತ್ತಿನಲ್ಲಿ ಪರಮಾಧಿಕಾರವನ್ನು ಪುನಃಸ್ಥಾಪಿಸುವ ಭರವಸೆ ನೀಡಿದ್ದಾರೆ.