S Jaishankar | ಲಂಡನ್ ನಲ್ಲಿ ಸಚಿವ ಜೈಶಂಕರ್ ಮೇಲೆ ದಾಳಿಗೆ ಯತ್ನಿಸಿದ ಖಲಿಸ್ತಾನಿ ಬೆಂಬಲಿಗರು

ವಿದೇಶಾಂಗ ಸಚಿವರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋದಾಗ ಗರಿಷ್ಠ ಭದ್ರತೆಯನ್ನು ನೀಡಬೇಕಾಗಿದೆ. ಆದರೆ, ಎಸ್ ಜೈಶಂಕರ್ ಅವರಿಗೆ ಬ್ರಿಟನ್​​ನಲ್ಲಿ ಭಾರಿ ಭದ್ರತಾ ಲೋಪದ ಕಿರಿಕಿರಿ ಉಂಟಾಗಿದೆ.;

Update: 2025-03-06 06:38 GMT

ಜೈಶಂಕರ್ ಅವರ ಕಾರಿನ ಮೇಲೆ ದಾಳಿ ನಡೆಸಲು ಮುಂದಾದ ಖಲಿಸ್ತಾನಿ ಬೆಂಬಲಿಗ.

ಅಧಿಕೃತ ಭೇಟಿಗಾಗಿ ಲಂಡನ್​ಗೆ ತೆರಳಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಂಶಕರ್ (S Jaishankar) ಅವರ ಮೇಲೆಯೇ ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಲು ಯತ್ನಿಸಿದ ಪ್ರಸಂಗ ನಡೆದಿದೆ. ಪೊಲೀಸರ ಮಧ್ಯಪ್ರವೇಶದಿಂದ ಯಾವುದೇ ಅನಾಹುತ ನಡೆದಿಲ್ಲ. ಆದಾಗ್ಯೂ ಭಾರತದ ಧ್ವಜವನ್ನು ಸಾರ್ವಜನಿಕಗಾಗಿ ಹರಿಯುವ ಮೂಲಕ ಅವರು ದುಷ್ಕೃತ್ಯ ತೋರಿದ್ದಾರೆ.

ವಿದೇಶಾಂಗ ಸಚಿವರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋದಾಗ ಗರಿಷ್ಠ ಭದ್ರತೆಯನ್ನು ನೀಡಬೇಕಾಗಿದೆ. ಆದರೆ, ಎಸ್ ಜೈಶಂಕರ್ ಅವರಿಗೆ ಬ್ರಿಟನ್​​ನಲ್ಲಿ ಭಾರಿ ಭದ್ರತಾ ಲೋಪದ ಕಿರಿಕಿರಿ ಉಂಟಾಗಿದೆ. ಲಂಡನ್​​ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವರು ಹಿಂದಿರುಗುವಾಗ ಅವರ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ. ಅವರು ಕಾರು ಹತ್ತುವ ಮುಂದಾದಾಗ ಖಲಿಸ್ತಾನಿ ಬೆಂಬಲಿಗನೊಬ್ಬ ಅವರತ್ತ ಓಡಿ ಬಂದಿದ್ದಾನೆ. ಪೊಲೀಸರು ಆತನನ್ನು ತಡೆದರೂ ಭಾರತದ ಧ್ವಜವನ್ನು ಹರಿದು ಉದ್ಧಟತನ ಪ್ರದರ್ಶಿಸಿದ್ದಾನೆ.

ಸ್ಥಳದಲ್ಲಿದ್ದ ಭದ್ರತಾ ಪಡೆ ಖಲಿಸ್ತಾನ್ ಬೆಂಬಲಿಗನನ್ನು ಬಂಧಿಸಿದ್ದಾರೆ. ಆದರೆ, ಸಚಿವರ ಮೇಲಿನ ದಾಳಿಯ ಯತ್ನವನ್ನು ಭಾರತ ಖಂಡಿಸಿದೆ. ಬ್ರಿಟನ್ ಕೂಡ ಘಟನೆ ಬಗ್ಗೆ ಉನ್ನತ ತನಿಖೆ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಖಲಿಸ್ತಾನಿಗಳ ಹತ್ಯೆಗೆ ಪ್ರತೀಕಾರ?

ಕೆನಡಾ ಸೇರಿ ಹಲವೆಡೆ ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿರುವುದರ ಹಿಂದೆ ಭಾರತದ ಕೈವಾಡ ಇದೆ ಎಂಬುದು ಖಲಿಸ್ತಾನಿ ಉಗ್ರರು ಹೇಳುತ್ತಿದ್ದಾರೆ. ಹೀಗಾಗಿ ವಿದೇಶದಲ್ಲಿ ಕುಳಿತು ಭಾರತ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಲಂಡನ್, ಕೆನಡಾ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ಅವರೆಲ್ಲರೂ ಭಾರತ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ.

ಪಾಕ್ ವಿರುದ್ಧ ಆಕ್ರೋಶ

ಘಟನೆ ಮೊದಲು ಲಂಡನ್​​ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಮಾತನಾಡಿದ್ದ ಜೈಶಂಕರ್, ಭಾರತದ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪವನ್ನು ತಿರಸ್ಕರಿಸಿದರು. “ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿರುವುದು ಭಾರತದ ಆಡಳಿತದಲ್ಲಿ ಪ್ರಮುಖ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಕಾಶ್ಮೀರದಲ್ಲಿ ಬೆಳವಣಿಗೆ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ನ್ಯಾಯವನ್ನು ಪುನಃಸ್ಥಾಪಿಸುವ ಎಲ್ಲ ಕೆಲಸಗಳು ಆಗಿವೆ. ಅತಿ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮತದಾನ ನಡೆಸಿರುವುದು ಮೂರನೇ ಯಶಸ್ವಿ ಹೆಜ್ಜೆ. ಈ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಅಗತ್ಯವೇ ಇಲ್ಲ. ಎಂದು ಅವರು ಹೇಳಿದ್ದಾರೆ.

ನಾವು ಪಾಕಿಸ್ತಾನವು ನಮ್ಮ ಕಡೆಯಿಂದ ಆಕ್ರಮಣ ಮಾಡಿಕೊಂಡಿರುವ ಕಾಶ್ಮೀರದ ಭಾಗವನ್ನು ಹಿಂದಿರುಗಿಸಬೇಕು ಎಂದು ಕಾಯುತ್ತಿದ್ದೇವೆ. ಅಲ್ಲಿಗೆ ಕಾಶ್ಮೀರದ ಸಮಸ್ಯೆ ಬಗೆಹರಿದಂತಾಗುತ್ತದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಶ್ವೇತಭವನದಲ್ಲಿ ನಡೆದ ಚರ್ಚೆಯ ನಂತರ, ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಗತ್ಯವನ್ನು ಒಪ್ಪಿಕೊಂಡಿವೆ ಎಂದು ಜೈಶಂಕರ್ ತಿಳಿಸಿದರು. 

Tags:    

Similar News