ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ

ಸಮಿತಿಯಲ್ಲಿ ಭಾರತದ ಕಾಯಂ ಮಿಷನ್ ನ ಡಿಪ್ಲೋಮ್ಯಾಟ್ ಕ್ಷಿತಿಜ್ ತ್ಯಾಗಿ ಅವರು ಪಾಕಿಸ್ತಾನದ ಆರೋಪಗಳನ್ನು ನಿರಾಕರಿಸಿ ತಿರುಗೇಟು ನೀಡಿದರು.;

Update: 2025-02-27 07:31 GMT

ಭಾರತದ ಕಾಯಂ ಮಿಷನ್ ನ ಡಿಪ್ಲೋಮ್ಯಾಟ್ ಕ್ಷಿತಿಜ್ ತ್ಯಾಗಿ ಮಾತನಾಡಿದರು. 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನವು ಯಾರಿಗೂ ಪಾಠ ಹೇಳುವ ಸ್ಥಿತಿಯಲ್ಲಿ ಇಲ್ಲ. ಆ ದೇಶ ಅಂತಾರಾಷ್ಟ್ರೀಯ ಆರ್ಥಿಕ ನೆರವಿನಿಂದ ನಡೆಯುತ್ತಿದೆ. ಅಂತಹ ರಾಷ್ಟ್ರವು ಜಮ್ಮು-ಕಾಶ್ಮೀರದ ಕುರಿತು ಹುರುಳಿಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತ್ಯುತ್ತರ ಕೊಟ್ಟಿದೆ. 

ಜಿನೆವಾದಲ್ಲಿ ಬುಧವಾರ (ಫೆಬ್ರವರಿ 26) ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 58 ನೇ ಅಧಿವೇಶನ ನಡೆಯಿತು. ಈ ವೇಳೆ ಭಾರತವು ತನ್ನ ಹಕ್ಕನ್ನು ಚಲಾಯಿಸಿತು. ಜಾಗತಿಕ ಸಂಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಅನಗತ್ಯವಾಗಿ ಎತ್ತಿದ ಪಾಕಿಸ್ತಾನಕ್ಕೆ ಬಲವಾದ ಪ್ರತ್ಯುತ್ತರ ನೀಡಿತು.

ಆಧಾರರಹಿತ ಆರೋಪಗಳು

ಸಮಿತಿಯಲ್ಲಿ ಭಾರತದ ಕಾಯಂ ಮಿಷನ್ ನ ಡಿಪ್ಲೋಮ್ಯಾಟ್ ಕ್ಷಿತಿಜ್ ತ್ಯಾಗಿ ಅವರು ಪಾಕಿಸ್ತಾನದ ಆರೋಪಗಳನ್ನು ನಿರಾಕರಿಸಿ ತಿರುಗೇಟು ನೀಡಿದರು. . “ಪಾಕಿಸ್ತಾನವು ಎಲ್ಲ ರೀತಿಯಲ್ಲೂ ಭಯೋತ್ಪಾದನೆ ನಿಯಂತ್ರಣ ಮಾಡಲು ವಿಫಲವಾಗಿದೆ. ಆ ದೇಶವು ಈಗ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಹಣದ ಮೇಲೆ ನಡೆಯುತ್ತಿದೆ. ಇಂತಹ ರಾಷ್ಟ್ರವು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ,” ಎಂದು ಹೇಳಿದರು. .

ಜಮ್ಮು-ಕಾಶ್ಮೀರದ ಕುರಿತು ಪಾಕಿಸ್ತಾನ ಹುರುಳಿಲ್ಲದ ಆರೋಪ ಮಾಡಿತ್ತು. “ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಲ್ಲಿ ಸರ್ಕಾರದ ದೌರ್ಜನ್ಯ ಹೆಚ್ಚಾಗಿದೆ” ಎಂದು ದೂರಿತ್ತು. ಹಾಗಾಗಿ, ಭಾರತವು ವಿಶ್ವಸಂಸ್ಥೆ ಸಭೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದೆ. “ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ನಡೆಸುತ್ತಿದೆ. ಭಯೋತ್ಪಾದಕರು ಅಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇಂತಹ ದೇಶದಿಂದ ಯಾವುದೇ ಉಪನ್ಯಾಸ ಬೇಕಾಗಿಲ್ಲ” ಎಂದು ತ್ಯಾಗಿ ಹೇಳಿದ್ದಾರೆ.

“ಪಾಕಿಸ್ತಾನದ ಕುತುಂತ್ರವು ವಿಶ್ವಕ್ಕೇ ಗೊತ್ತಿದೆ. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಧನಸಹಾಯವೇ ಗತಿಯಾಗಿದೆ. ಪಾಕಿಸ್ತಾನದಲ್ಲಿಯೇ ಅಶಾಂತಿ, ಅರಾಜಕತೆ ಮನೆಮಾಡಿದೆ. ಆದರೆ, ಭಾರತವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ. ದೇಶದ ಜನರ ಘನತೆಯನ್ನು ಸರ್ಕಾರ ಎತ್ತಿಹಿಡಿಯುತ್ತಿದೆ,” ಎಂದಿದ್ದಾರೆ.

Tags:    

Similar News