ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಲು ಬಾಂಗ್ಲಾದೇಶ ಸಿದ್ಧತೆ

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಆಡಳಿತವು 2011ರಲ್ಲಿ ಮಾಡಿದ ಸಂವಿಧಾನದ 15ನೇ ತಿದ್ದುಪಡಿಯ ಸಿಂಧುತ್ವ ರಿಟ್ ಅರ್ಜಿ ಪ್ರಶ್ನಿಸಿದ್ದು, ಅದಕ್ಕೆ ಪ್ರತಿಕ್ರಿಯಿಸುವಾಗ ಅಟಾರ್ನಿ ಜನರಲ್‌ ಮಾಹಿತಿ ನೀಡಿದ್ದಾರೆ.;

Update: 2024-11-14 15:07 GMT

ಬಾಂಗ್ಲಾದೇಶ ತನ್ನ ಜಾತ್ಯತೀತ ಸ್ಥಾನಮಾನವನ್ನು ಕಳೆದುಕೊಂಡು ಸಂಪೂರ್ಣ ಇಸ್ಲಾಂ ರಾಷ್ಟ್ರವಾಗುವ ದಿಕ್ಕಿನಲ್ಲಿ ಸಾಗುತ್ತಿದೆ. ರಿಟ್‌ ಅರ್ಜಿಯೊಂದರ ವಿಚಾರಣೆ ವೇಳೆ ಅಲ್ಲಿನ ಕೋರ್ಟ್‌ಗೆ ಸರ್ಕಾರದ ಅಟಾರ್ನಿ ಜನರಲ್‌ ಸಂವಿಧಾನದಲ್ಲಿರುವ ʼಜಾತ್ಯತೀತʼ ಹಾಗೂ ʼಸಮಾಜವಾದʼ ಪದವನ್ನು ತೆಗೆದುಹಾಕುವುದಾಗಿ ಮಾಹಿತಿ ನೀಡಿದ್ದಾರೆ. ಆಡಳಿತ ಬದಲಾವಣೆ ಮಾಡಲು ಮುಂದಾದರೆ ಸಂವಿಧಾನೇತರ ವಿಧಾನದ ಮೂಲಕ ಮರಣದಂಡನೆ ವಿಧಿಸುವ ಕ್ರಮವನ್ನೂ ತೆಗೆದು ಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಾಗರಿಕರ ಗುಂಪು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಮೊಹಮ್ಮದ್ ಅಸಾಝಮಾನ್ ಬುಧವಾರ ಹೈಕೋರ್ಟ್‌ಗೆ ಈ ಹೇಳಿಕೆ ನೀಡಿದ್ದಾರೆ. ಶೇಖ್ ಮುಜಿಬುರ್ ರಹಮಾನ್ ಅವರನ್ನು ರಾಷ್ಟ್ರಪಿತ ಎಂದು ಹೆಸರಿಸುವುದರ ಜೊತೆಗೆ ಸಂವಿಧಾನದ ನಾಲ್ಕು ತತ್ವಗಳಲ್ಲಿ "ಜಾತ್ಯತೀತತೆ" ಮತ್ತು "ಸಮಾಜವಾದ" ವನ್ನು ತೆಗೆದು ಹಾಕಲಾಗುವುದು ಎಂದು ಹೇಳಿದ್ದಾರೆ.

ಶೇಖ್ ಮುಜಿಬುರ್ ರಹಮಾನ್ ಬಾಂಗ್ಲಾದೇಶದ ನಿರ್ವಿವಾದ ನಾಯಕರಾಗಿದ್ದರು. ಆದರೆ ʼಅವಾಮಿ ಲೀಗ್ʼ ಪಕ್ಷದ ತನ್ನ ಹಿತಾಸಕ್ತಿಗೋಸ್ಕರ ಅವರನ್ನು ರಾಜಕೀಯಗೊಳಿಸಿತು ಎಂದು ಅವರು ಬಾಂಗ್ಲಾದೇಶದ ಸ್ಥಾಪಕ ನಾಯಕನನ್ನು ಉಲ್ಲೇಖಿಸಿ ಹೇಳಿಕೆ ಕೊಟ್ಟಿದ್ದಾರೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತ ʼಅವಾಮಿ ಲೀಗ್ʼ ಆಡಳಿತವು 2011ರಲ್ಲಿ ಮಾಡಿದ ಸಂವಿಧಾನದ 15ನೇ ತಿದ್ದುಪಡಿಯ ಸಿಂಧುತ್ವವನ್ನು ರಿಟ್ ಅರ್ಜಿ ಪ್ರಶ್ನಿಸಿದೆ.

"ಒಟ್ಟಾರೆಯಾಗಿ, ಹೈಕೋರ್ಟ್ ನಿಯಮ ರದ್ದುಗೊಳಿಸಲು ನಾವು ಬಯಸುವುದಿಲ್ಲ" ಎಂದು ಅಟಾರ್ನಿ ಜನರಲ್ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ರಿಟ್ ಅರ್ಜಿಯ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ರಿಟ್ ಅರ್ಜಿಯಲ್ಲಿ ಹಲವಾರು ಮಂದಿ ಪ್ರಮುಖವಾಗಿ ವಕೀಲರು ಮಧ್ಯಸ್ಥಿಕೆದಾರರಾಗಿದ್ದರು. , ಕೆಲವರು ಮನವಿಯನ್ನು ಬೆಂಬಲಿಸಿದರೆ. ಕೆಲವರು ಅದನ್ನು ವಿರೋಧಿಸಿದರು.

ಹಲವಾರು ನಿಬಂಧನೆಗಳನ್ನು ಪುನಃಸ್ಥಾಪಿಸುವ, ಸೇರಿಸುವ ಮತ್ತು ರದ್ದುಗೊಳಿಸುವ ಮೂಲಕ ಅವಾಮಿ ಲೀಗ್‌ ಸಂವಿಧಾನಕ್ಕೆ 15ನೇ ತಿದ್ದುಪಡಿ ತಂದಿತ್ತು.

ಜಾತ್ಯತೀತತೆಯನ್ನು ರಾಜ್ಯ ತತ್ವವಾಗಿ ಪುನಃಸ್ಥಾಪಿಸುವುದು, ಚುನಾವಣಾ ಮೇಲ್ವಿಚಾರಣೆಗಾಗಿ ಉಸ್ತುವಾರಿ ಸರ್ಕಾರಿ ವ್ಯವಸ್ಥೆ ರದ್ದುಗೊಳಿಸುವುದು, ಸಾಂವಿಧಾನಿಕೇತರ ವಿಧಾನಗಳ ಮೂಲಕ ರಾಜ್ಯ ಅಧಿಕಾರವನ್ನು ವಹಿಸಿಕೊಳ್ಳುವುದು ಮತ್ತು ಶೇಖ್ ಮುಜಿಬುರ್ ರಹಮಾನ್ ಅವರನ್ನು ರಾಷ್ಟ್ರಪಿತ ಎಂದು ಹೆಸರಿಸುವುದು ಈ ತಿದ್ದುಪಡಿಗಳಲ್ಲಿ ಸೇರಿವೆ.

ಸಂವಿಧಾನದ 15ನೇ ತಿದ್ದುಪಡಿಯನ್ನು ಹೆಚ್ಚಾಗಿ ಅಸಾಂವಿಧಾನಿಕ ಎಂದು ಘೋಷಿಸಲು ಮಧ್ಯಂತರ ಸರ್ಕಾರ ಬಯಸಿದೆ.

ಉಸ್ತುವಾರಿ ಸರ್ಕಾರಿ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕು ಮತ್ತು ಸಂವಿಧಾನದಲ್ಲಿ ಜನಮತಗಣನೆಯನ್ನು ಒದಗಿಸಬೇಕು ಎಂದು ಅಟಾರ್ನಿ ಜನರಲ್‌ ಒತ್ತಾಯಿಸಿದ್ದಾರೆ.

ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಮೂಲಕ ಆರಂಭಗೊಂಡ ಪ್ರತಿಭಟನೆ ಆಗಸ್ಟ್ 5 ರಂದು ಅವಾಮಿ ಲೀಗ್ ಆಡಳಿತವನ್ನು ಉರುಳಿಸಿತ್ತು. ಮೂರು ದಿನಗಳ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದೀಗ ಬಲವಂತ ಅಥವಾ ಅಸಂವಿಧಾನಿಕ ವಿಧಾನಗಳ ಮೂಲಕ ಸಂವಿಧಾನವನ್ನು ರದ್ದುಗೊಳಿಸುವ ಅಮಾನತು ಮಾಡುವ ಅಥವಾ ಬುಡಮೇಲು ಮಾಡುವ ಯಾವುದೇ ಪ್ರಯತ್ನವನ್ನು ಅಪರಾಧ ಎಂದು ಹೇಳುವ 15 ನೇ ತಿದ್ದುಪಡಿಯ ಅಡಿಯಲ್ಲಿ ಸೇರಿಸಲಾದ 7 ಎ ವಿಧಿಯನ್ನು ಅಟಾರ್ನಿ ಜನರಲ್ ಪ್ರಶ್ನಿಸಿದ್ದಾರೆ. ಆ ತಿದ್ದುಪಡಿ ಪ್ರಕಾರ ಅದು ಮರಣದಂಡನೆಗೆ ಅರ್ಹವಾದ ಅಪರಾಧವಾಗಿದೆ.

ಈ ನಿರ್ಬಂಧವು ಪ್ರಜಾಪ್ರಭುತ್ವದ ಬದಲಾವಣೆಯನ್ನು ಮಿತಿಗೊಳಿಸುತ್ತದೆ. ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಿದ ಇತ್ತೀಚಿನ ಸಾಮೂಹಿಕ ದಂಗೆಯ ಮೌಲ್ಯ ಕಡಿಮೆ ಮಾಡುತ್ತದೆ.

"15 ನೇ ತಿದ್ದುಪಡಿಯ ನಿಬಂಧನೆಗಳು ಅಬು ಸಯೀದ್ ಮತ್ತು ಮುಗ್ಧೋ ಅವರಂತಹ ಹುತಾತ್ಮರ ತ್ಯಾಗವನ್ನು ಕಡೆಗಣಿಸುತ್ತದೆ. ಎಂದು ಜುಲೈ-ಆಗಸ್ಟ್ ಸಾಮೂಹಿಕ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ಅಸಾದುಝಮಾನ್ ವಾದ ಮಾಡಿದ್ದಾರೆ.

ಹಿಂದಿನ ಆಡಳಿತವನ್ನು ಪದಚ್ಯುತಗೊಳಿಸಿದ ಮತ್ತು ಅವರ ಹಿಂದಿನ ಆಡಳಿತದ ರಾಜೀನಾಮೆಯ ನಂತರ ಅಸಾದುಝಮಾನ್ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಿಸಲಾಯಿತು.  

Tags:    

Similar News