ಇಸ್ರೇಲ್-ಇರಾನ್ ಸಂಘರ್ಷ: ಮುಸ್ಲಿಂ ರಾಷ್ಟ್ರಗಳ ಒಡಕಿನ ಲಾಭ ಪಡೆದ ದಾಳಿ
ದಕ್ಷಿಣಾಮೂರ್ತಿ ಅವರ ಪ್ರಕಾರ, "ಅಮೆರಿಕದ ಬೆಂಬಲ ಮತ್ತು ಮತೀಯ ಒಡಕುಗಳು ಇಸ್ರೇಲ್ಗೆ ದಾಳಿಗಳನ್ನು ನಡೆಸಲು ಧೈರ್ಯ ತುಂಬಿದೆ. ಇರಾನ್ ಈಗ ತನ್ನ ಪ್ರಭಾವ ಮತ್ತು ಪರಮಾಣು ಮಹತ್ವಾಕಾಂಕ್ಷೆಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.;
ಇಸ್ರೇಲ್ ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ನಡೆಸಿದ ಇತ್ತೀಚಿನ ವೈಮಾನಿಕ ದಾಳಿಗಳು ಜಾಗತಿಕವಾಗಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿವೆ. ಅಮೆರಿಕ ಈ ದಾಳಿಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡರೂ, ಇಸ್ರೇಲ್ಗೆ ಅದರ ನಿರಂತರ ಬೆಂಬಲ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಆತಂಕವನ್ನು ವೃದ್ಧಿಸಿದಿಎ. 'ದ ಫೆಡರಲ್'ನ ಕೆ.ಎಸ್. ದಕ್ಷಿಣ ಮೂರ್ತಿ ಅವರು ಈ ಬೆಳವಣಿಗೆಗಳ ಮಹತ್ವ ಮತ್ತು ಭವಿಷ್ಯದ ಪರಿಣಾಮಗಳನ್ನು ವಿವರಿಸಿದ್ದಾರೆ.
ಇಸ್ರೇಲ್ನ ಶುಕ್ರವಾರದ (ಜೂನ್ 13) ಮುಂಜಾನೆಯ ದಾಳಿಗೆ ಪ್ರಮುಖ ಕಾರಣ. ಇರಾನ್ ಯುರೇನಿಯಂ ಅನ್ನು ಶೇ.60ರಷ್ಟು ಸಂವರ್ಧನೆ ಮಾಡಿರುವುದು ಎಂಬ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ವರದಿ. ಇದು ಅಣ್ವಸ್ತ್ರ ತಯಾರಿಕೆಗೆ ಬೇಕಾದ ಶೇ.90ರಷ್ಟು ಸಂಗ್ರಹಕ್ಕೆ ಹತ್ತಿರವಾಗಿದೆ. 2015ರ ಪರಮಾಣು ಒಪ್ಪಂದದ ಪ್ರಕಾರ ಇರಾನ್ ಶೇ.4ಕ್ಕಿಂತ ಕಡಿಮೆ ಸಂಗ್ರಹ ಮಾಡಬೇಕು. ಆದರೆ, 2018ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದದಿಂದ ಹಿಂದೆ ಸರಿದ ನಂತರ ಈ ಮಾತುಕತೆಗಳು ಮುರಿದು ಬಿದ್ದವು.
"ಇರಾನ್ ಮತ್ತು ಅಮೆರಿಕ ಒಮಾನ್ನ ಮಸ್ಕತ್ನಲ್ಲಿ ಹೊಸ ಪರಮಾಣು ಮಾತುಕತೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಇಸ್ರೇಲ್ ಈ ದಾಳಿ ನಡೆಸಿದೆ," ಎಂದು ದಕ್ಷಿಣಾ ದಮೂರ್ತಿ ಹೇಳಿದ್ದಾರೆ. ಈ ಹಿಂದೆ ಸೈಬರ್ ಯುದ್ಧ (ಸ್ಟಕ್ಸ್ನೆಟ್ ವೈರಸ್ ಮೂಲಕ) ಮತ್ತು ಇರಾನ್ನ ಪರಮಾಣು ತಾಣಗಳ ಮೇಲೆ ನೇರ ದಾಳಿಗಳ ಮೂಲಕ ಇಸ್ರೇಲ್ ಈ ಪರಮಾಣು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತ್ತು.
ಇಸ್ರೇಲ್ನ ಏಕಪಕ್ಷೀಯ ಕಾರ್ಯಾಚರಣೆ. ಅಮೆರಿಕದ ನಿಲುವು
ಟ್ರಂಪ್ ಈ ದಾಳಿಗೆ ಒಪ್ಪಿಗೆ ನೀಡಿರಲಿಲ್ಲ ಎಂಬ ವರದಿಗಳಿರುವ ಕಾರಣ ಇಸ್ರೇಲ್ ಏಕಪಕ್ಷೀಯವಾಗಿ ಕಾರ್ಯಾಚರಣೆ ನಡೆಸಿದೆ ಎನ್ನಬಹುದು. ಇರಾನ್ ಪ್ರತಿಯಾಗಿ 100ಕ್ಕೂ ಹೆಚ್ಚು ಡ್ರೋನ್ಗಳನ್ನು ಇಸ್ರೇಲ್ನತ್ತ ಉಡಾಯಿಸಿದೆ. ಆದರೆ ಅವುಗಳಲ್ಲಿ ಹೆಚ್ಚಿನವನ್ನು ನಿಷ್ಕ್ರಿಯಗೊಳಿಸಲಾಗಿದೆ.
"ಇದು ದೊಡ್ಡ ಯುದ್ಧವಾಗಿ ಬದಲಾಗಬಹುದು ಎಂಬ ಆತಂಕ ಸೃಷ್ಟಿಸಿದ್ದು ಹೌದಾದರೂ ಪ್ರಸ್ತುತ ಮೌಲ್ಯಮಾಪನಗಳ ಪ್ರಕಾರ, ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆ ಕಡಿಮೆ ಎಂದು ದಕ್ಷಿಣಾಮೂರ್ತಿ ಅವರು ಹೇಳುತ್ತಾರೆ. ಇತ್ತೀಚಿನ ದಾಳಿಯಲ್ಲಿ ಅಮೆರಿಕದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರೂ, ಇಸ್ರೇಲ್ಗೆ ಅದರ ಸತತ ಬೆಂಬಲ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. "ಟ್ರಂಪ್ ಆಡಳಿತವು ಈ ದಾಳಿಗೆ ಅನುಮತಿ ನೀಡದಿದ್ದರೂ, ಅಮೆರಿಕ-ಇಸ್ರೇಲ್ ಸಂಬಂಧಗಳು ಈ ವಾದವನ್ನು ಒಪ್ಪಂದತೆ ಮಾಡಿದೆ," ಎಂದು ದಕ್ಷಿಣಾ ಮೂರ್ತಿ ಅಭಿಪ್ರಾಯಪಡುತ್ತಾರೆ.
ಇರಾನ್ನ ದುರ್ಬಲಗೊಂಡ ಮಿತ್ರಪಕ್ಷಗಳು
ಇಸ್ರೇಲ್ ಮತ್ತು ಅಮೆರಿಕ ಸೇರಿಕೊಂಡು ಇರಾನ್ ಬೆಂಬಲಿತ ಹೆಜ್ಬೊಲ್ಲಾ, ಹಮಾಸ್, ಹೌತಿಗಳು ಮತ್ತು ಸಿರಿಯಾದ ಬಶರ್ ಅಲ್-ಅಸದ್ ಆಡಳಿತವನ್ನು ನಿಷ್ಪ್ರಯೋಜಕಗೊಳಿಸಿವೆ. ಹಮಾಸ್ನ ಮಾಜಿ ನಾಯಕ ಇಸ್ಮಾಯಿಲ್ ಹನಿಯೆಹ್ ತೆಹರಾನ್ನಲ್ಲಿ ಇಸ್ರೇಲ್ನ ಹಿಂದಿನ ದಾಳಿಯಲ್ಲೇ ಹತ್ಯೆಗೀಡಾಗಿದ್ದು ಗಮನಾರ್ಹ.
"ಅಸದ್ ಪತನ ಮತ್ತು ಹೈದರ್ ಅಲ್-ಶಮ್ ಅವರ ಉದಯದ ನಂತರ ಸಿರಿಯಾ ಈಗ ಅಮೆರಿಕಕ್ಕೆ ಹೆಚ್ಚು ಹತ್ತಿರವಾಗಿದೆ," ಎಂದು ಮೂರ್ತಿ ಹೇಳಿಕೊಂಡಿದ್ದಾರೆ. ಎಲ್ಲ ಕಾರಣಗಳಿಂದ ಇರಾನ್ನ ಸಾಂಪ್ರದಾಯಿಕ ಮಿತ್ರಪಕ್ಷಗಳು ದುರ್ಬಲಗೊಂಡಿವೆ. ಪ್ರಾದೇಶಿಕ ಶಕ್ತಿಗಳು ಮೌನವಾಗಿರುವುದರಿಂದ ಅಥವಾ ಇಸ್ರೇಲ್ನೊಂದಿಗೆ ರಾಜತಾಂತ್ರಿಕವಾಗಿ ಸಹಕರಿಸುತ್ತಿರುವುದರಿಂದ, ಇಸ್ರೇಲ್ನ ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ಪ್ರತಿರೋಧ ಇಲ್ಲವಾಗಿದೆ.
ಶಿಯಾ-ಸುನ್ನಿ ಒಡಕು ಮತ್ತು ಪ್ರಾದೇಶಿಕ ರಾಜಕೀಯ
ಇರಾನ್ನ ಪ್ರತ್ಯೇಕತೆಗೆ ಶಿಯಾ ಮತ್ತು ಸುನ್ನಿ ಮುಸ್ಲಿಂ ರಾಷ್ಟ್ರಗಳ ನಡುವಿನ ಐತಿಹಾಸಿಕ ವಿಭಜನೆಯೂ ಒಂದು ಪ್ರಮುಖ ಕಾರಣ. "ಸುನ್ನಿ ಇಸ್ಲಾಂನ ರಕ್ಷಕ ಸೌದಿ ಅರೇಬಿಯಾ, ಪರಮಾಣು ಶಕ್ತಿ ಹೊಂದಿರುವ ಇರಾನ್ಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ," ಎಂದು ಮೂರ್ತಿ ಹೇಳಿದ್ದಾರೆ. ಈ ಸಾಂಪ್ರದಾಯಿಕ ಒಡಕು ಬಹ್ರೇನ್, ಯುಎಇ ಮತ್ತು ಟರ್ಕಿಯಂತಹ ರಾಷ್ಟ್ರಗಳು ಇಸ್ರೇಲ್ನೊಂದಿಗೆ ಸ್ನೇಹ ಸಂಬಂಧಗಳನ್ನು ಸ್ಥಾಪಿಸಲು ಕಾರಣವಾಗಿದೆ.
ಇದೇ ಸಮಯದಲ್ಲಿ, ಗಾಜಾದಲ್ಲಿ ಪ್ಯಾಲೆಸ್ತೀನಿಯರ ಕಷ್ಟಗಳು ಮುಂದುವರಿಯುತ್ತಿವೆ. "ಇಸ್ರೇಲ್ಗೆ ಮೌಖಿಕ ವಿರೋಧ ವ್ಯಕ್ತಪಡಿಸಿದ್ದರೂ, ಹೆಚ್ಚಿನ ಮುಸ್ಲಿಂ ರಾಷ್ಟ್ರಗಳು ಈ ದಾಳಿಗಳನ್ನು ತಡೆಯಲು ಪ್ರಯತ್ನ ಮಾಡುತ್ತಿಲ್ಲ," ಎಂದು ಮೂರ್ತಿ ಹೇಳುತ್ತಾರೆ.
ಇಸ್ರೇಲ್ನ ಪರಮಾಣು ಶಸ್ತ್ರಾಸ್ತ್ರಗಳ ಮೌನ
ಇರಾನ್ನ ಪರಮಾಣು ಕಾರ್ಯಕ್ರಮ ಅಂತರರಾಷ್ಟ್ರೀಯ ಗಮನ ಸೆಳೆಯುತ್ತಿರುವಾಗ, ಇಸ್ರೇಲ್ ತನ್ನಲ್ಲಿರುವ ಸುಮಾರು 400 ಅಣ್ವಸ್ತ್ರಗಳ ಸಂಗ್ರಹವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ದಕ್ಷಿಣಾಮೂರ್ತಿ ಅವರ ಪ್ರಕಾರ, "ಅಮೆರಿಕದ ಬೆಂಬಲ ಮತ್ತು ಮತೀಯ ಒಡಕುಗಳು ಇಸ್ರೇಲ್ಗೆ ದಾಳಿಗಳನ್ನು ನಡೆಸಲು ಧೈರ್ಯ ತುಂಬಿದೆ. ಇರಾನ್ ಈಗ ತನ್ನ ಪ್ರಭಾವ ಮತ್ತು ಪರಮಾಣು ಮಹತ್ವಾಕಾಂಕ್ಷೆಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.