ಪಾಕಿಸ್ತಾನ ವಿಮಾನಗಳ ಮೇಲಿನ ವಾಯುಪ್ರದೇಶ ನಿಷೇಧ ಆಗಸ್ಟ್ 24 ರವರೆಗೆ ವಿಸ್ತರಣೆ
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು. ಆ ನಂತರ ಪಾಕಿಸ್ತಾನದ ಮಿಲಿಟರಿ ಹಾಗೂ ನಾಗರಿಕ ವಿಮಾನಗಳಿಗೆ ಏಪ್ರಿಲ್ 30 ರಿಂದ ಜಾರಿಗೆ ಬರುವಂತೆ ಭಾರತ ನಿರ್ಬಂಧ ವಿಧಿಸಿತ್ತು.;
ಸಾಂದರ್ಭಿಕ ಚಿತ್ರ
ಭಾರತ ಪಾಕಿಸ್ತಾನ ವಿಮಾನಗಳಿಗೆ ತನ್ನ ವಾಯುಪ್ರದೇಶದ ಮೇಲಿನ ನಿರ್ಬಂಧವನ್ನು ಆಗಸ್ಟ್ 24 ರವರೆಗೆ ವಿಸ್ತರಿಸಿದೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು. ಆ ನಂತರ ಪಾಕಿಸ್ತಾನದ ಮಿಲಿಟರಿ ಹಾಗೂ ನಾಗರಿಕ ವಿಮಾನಗಳಿಗೆ ಏಪ್ರಿಲ್ 30 ರಿಂದ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿತ್ತು.
ವಾಯುಪ್ರದೇಶ ನಿಷೇಧ
"ಪಾಕಿಸ್ತಾನದ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವುದನ್ನು ಅಧಿಕೃತವಾಗಿ ಆಗಸ್ಟ್ 23ರವರೆಗೂ ವಿಸ್ತರಿಸಲಾಗಿದೆ. ಈ ಕುರಿತು ವಾಯುಪಡೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಸಾಯಿ ಮಂಗಳವಾರ(ಜು.22) ರಾತ್ರಿ ತಮ್ಮ ʼಎಕ್ಸ್ʼ ಖಾತೆಯಲ್ಲಿ ತಿಳಿಸಿದ್ದಾರೆ".
ಈ ವಿಸ್ತರಣೆಯು ಶಿಷ್ಟಾಚಾರ ಹಾಗೂ ಕಾರ್ಯತಂತ್ರದ ಭಾಗವಾಗಿದೆ. ಚಾಲ್ತಿಯಲ್ಲಿರುವ ಭದ್ರತೆಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಲ್ಲಿ ವಾಯುಪ್ರದೇಶ ನೀಷೇಧವು ಒಂದಾಗಿದೆ.
ನಿಷೇದ ಮುಂದುವರಿಕೆ
ಆರಂಭದಲ್ಲಿ ನಿಷೇಧವು ಮೇ. 24 ರಂದು ಕೊನೆಗೊಳ್ಳಬೇಕಿತ್ತು. ನಂತರ ಅದನ್ನು ಜೂನ್ 24, ಹಾಗೂ ಜುಲೈ 24 ವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಆದೇಶದಿಂದ ಭಾರತೀಯ ಕಾಲಮಾನ ಆಗಸ್ಟ್ 23 ತಡರಾತ್ರಿವರೆಗೂ ಹಾಗೂ ಅಂತರಾಷ್ಟ್ರೀಯ ಕಾಲಮಾನದ ಪ್ರಕಾರ ಆಗಸ್ಟ್ 24 ರವರೆಗೆ ವಿಸ್ತರಿಸಲಾಗಿದೆ.
ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಆಗಸ್ಟ್ 24 ರವರೆಗೆ ನಿರ್ಬಂಧಿಸಿದ ನಂತರ ಭಾರತ ಈ ಕ್ರಮ ಕೈಗೊಂಡಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಸಿಂಧೂ ನದಿ ಜಲ ಒಪ್ಪಂದ ರದ್ದತಿ ಸೇರಿದಂತೆ ಎಲ್ಲಾ ನಿರ್ಧಾರಗಳು ಮುಂದವರಿಯಲಿವೆ ಎಂದು ತಿಳಿಸಿದ್ದಾರೆ.