ಉಮರ್ ಖಲೀದ್‌ಗೆ ಪತ್ರ ಬರೆದಿದ್ದ ಜೊಹ್ರಾನ್ ಮಮ್ದಾನಿಗೆ ಭಾರತದ ಖಡಕ್‌ ವಾರ್ನಿಂಗ್‌
x
ಜೊಹ್ರಾನ್ ಮಮ್ದಾನಿ ಮತ್ತು ಉಮರ್ ಖಲೀದ್‌

ಉಮರ್ ಖಲೀದ್‌ಗೆ ಪತ್ರ ಬರೆದಿದ್ದ ಜೊಹ್ರಾನ್ ಮಮ್ದಾನಿಗೆ ಭಾರತದ ಖಡಕ್‌ ವಾರ್ನಿಂಗ್‌

ಉಮರ್ ಖಲೀದ್‌ಗೆ ಬೆಂಬಲ ಸೂಚಿಸಿ ಕೈಬರಹದ ಪತ್ರ ನೀಡಿದ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ವಿರುದ್ಧ ಭಾರತದ ವಿದೇಶಾಂಗ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


Click the Play button to hear this message in audio format

ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಲೀದ್‌ಗೆ ಪತ್ರ ಬರೆದು ಬೆಂಬಲ ಸೂಚಿಸಿದ್ದ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಕ್ರಮಕ್ಕೆ ಭಾರತ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ. ಮಮ್ದಾನಿ ಅವರು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕು ಮತ್ತು ಅವರಿಗೆ ನೀಡಿರುವ ಜವಾಬ್ದಾರಿಗಳ ಮೇಲೆ ಗಮನ ಹರಿಸಿದರೆ ಉತ್ತಮ ಎಂದು ಭಾರತ ಸರ್ಕಾರ ತಿರುಗೇಟು ಕೊಟ್ಟಿದೆ.

ಏನಿದು ವಿವಾದ?

ಕಳೆದ ತಿಂಗಳು ಉಮರ್ ಖಾಲಿದ್ ಪೋಷಕರನ್ನು ಭೇಟಿಯಾಗಿದ್ದ ಮೇಯರ್ ಮಮ್ದಾನಿ, ಉಮರ್ ಖಲೀದ್‌ಗೆ ಬರೆದ ಕೈಬರಹದ ಪತ್ರವೊಂದನ್ನು ಅವರಿಗೆ ಹಸ್ತಾಂತರಿಸಿದ್ದರು. ಅದರಲ್ಲಿ, "ಪ್ರಿಯ ಉಮರ್, ಕಹಿ ಭಾವನೆಗಳು ನಮ್ಮನ್ನು ಆವರಿಸದಂತೆ ನೋಡಿಕೊಳ್ಳುವ ಕುರಿತು ನೀನು ಹೇಳಿದ ಮಾತುಗಳನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ನಿನ್ನ ಪೋಷಕರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ. ನಾವೆಲ್ಲರೂ ನಿನ್ನ ಬಗ್ಗೆ ಯೋಚಿಸುತ್ತಿದ್ದೇವೆ," ಎಂದು ಬರೆದಿದ್ದರು.

ಭಾರತದ ಪ್ರತಿಕ್ರಿಯೆ

ವಿದೇಶಾಂಗ ವ್ಯವಸ್ಥೆ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಸಾರ್ವಜನಿಕ ಪ್ರತಿನಿಧಿಗಳು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಅಧಿಕಾರದಲ್ಲಿರುವವರು ವೈಯಕ್ತಿಕ ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ. ಇಂತಹ ಹೇಳಿಕೆಗಳ ಬದಲಿಗೆ ಅವರಿಗೆ ವಹಿಸಿರುವ ಜವಾಬ್ದಾರಿಗಳತ್ತ ಗಮನ ಹರಿಸುವುದು ಉತ್ತಮ” ಎಂದು ತಿರುಗೇಟು ನೀಡಿದ್ದಾರೆ.

ಹಿನ್ನೆಲೆ

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಖಲೀದ್‌ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ. 2023ರ ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ, ಮಮ್ದಾನಿ ಅವರು ಖಾಲಿದ್ ಪರ ಪ್ರತಿಭಟನೆ ನಡೆಸಿ ಅವರ ಜೈಲು ಡೈರಿಯ ಭಾಗಗಳನ್ನು ಓದಿದ್ದರು. ಖಾಲಿದ್ ಅವರ ತಂದೆ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಅವರು ಡಿಸೆಂಬರ್ 9 ರಂದು ಮಮ್ದಾನಿ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದರು.

ಉಮರ್ ಖಲೀದ್‌ ಜೈಲಿನಲ್ಲಿರುವುದು ಏಕೆ?

ಉಮರ್ ಖಲೀದ್‌ನನ್ನು 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣದ ಸಂಚಿನ ಆರೋಪದ ಮೇಲೆ ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದ್ದರು. ಅವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಐದು ವರ್ಷಗಳಿಂದ ಅವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ ಅವರ ಸಹೋದರಿಯ ಮದುವೆಗಾಗಿ ಡಿಸೆಂಬರ್ 16 ರಿಂದ 29 ರವರೆಗೆ ಅವರಿಗೆ ಪೆರೋಲ್ (ಜಾಮೀನು) ನೀಡಲಾಗಿತ್ತು.

Read More
Next Story