
2002ನೇ ಮಾದರಿಯ ಹಳೆಯ ಹೋಂಡಾ ಸಿಟಿ ಕಾರಿನ ಮಾರುಕಟ್ಟೆ ಮೌಲ್ಯ ಸುಮಾರು 70,000 ರೂಪಾಯಿ ಆಗಿದ್ದರೆ, ವಿದ್ಯಾರ್ಥಿ ಪಾವತಿಸಿದ ದಂಡದ ಮೊತ್ತ 1,11,500 ರುಪಾಯಿ ಪಾವತಿಸಿದ್ದಾರೆ.
70 ಸಾವಿರ ಮೌಲ್ಯದ ಕಾರಿಗೆ 1.11 ಲಕ್ಷ ರೂ. ದಂಡ! ಸೈಲೆನ್ಸರ್ ಅಲ್ಟರೇಶನ್ ಮಾಡಿದವನಿಗೆ RTO ಶಾಕ್
ಸೈಲೆನ್ಸರ್‌ನಿಂದ ಬೆಂಕಿ ಮತ್ತು ಕಿಡಿಗಳು ಬರುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ಹೊಸ ವರ್ಷದ ಆಚರಣೆಗಾಗಿ ಕೇರಳದಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಟ್ರಾಫಿಕ್ ಪೊಲೀಸರು ಶಾಕ್ ಕೊಟ್ಟಿದ್ದಾರೆ ತನ್ನ ಕಾರಿನ ಸೈಲೆನ್ಸರ್ ಮಾರ್ಪಡಿಸಿ ರಸ್ತೆಯಲ್ಲಿ ಅಬ್ಬರಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಬರೋಬ್ಬರಿ 1,11,500 ರೂ. ದಂಡ ವಿಧಿಸಿರುವ ಘಟನೆ ನಡೆದಿದೆ. 2002ನೇ ಮಾದರಿಯ ಹಳೆಯ ಹೋಂಡಾ ಸಿಟಿ ಕಾರಿನ ಮಾರುಕಟ್ಟೆ ಮೌಲ್ಯ ಸುಮಾರು 70,000 ರೂಪಾಯಿ ಆಗಿದ್ದರೆ, ವಿದ್ಯಾರ್ಥಿ ಪಾವತಿಸಿದ ದಂಡದ ಮೊತ್ತ 1,11,500 ರೂಪಾಯಿಗಳಾಗಿರುವುದು ವಿಶೇಷ.
ಘಟನೆಯ ಹಿನ್ನೆಲೆ
ಜನವರಿ 2ರಂದು ಹೆಣ್ಣೂರು ರಸ್ತೆಯಲ್ಲಿ ಈ ಕಾರು ಸಂಚರಿಸುವಾಗ ಸೈಲೆನ್ಸರ್‌ನಿಂದ ಕಿಡಿ ಹಾಗೂ ಬೆಂಕಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ, ವಾಹನ ಸವಾರರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ಅತಿ ಹೆಚ್ಚು ಶಬ್ದ ಮಾಡುತ್ತಾ ಈ ಕಾರು ಚಲಿಸುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದರು.
ವಿಡಿಯೋ ಪುರಾವೆಗಳ ಆಧಾರದ ಮೇಲೆ ಕಾರನ್ನು ಪತ್ತೆಹಚ್ಚಿದ ಹೆಣ್ಣೂರು ಸಂಚಾರಿ ಪೊಲೀಸರು, ವಾಹನವನ್ನು ಜಪ್ತಿ ಮಾಡಿದ್ದರು. ಈ ಪ್ರಕರಣವನ್ನು ಆರ್‌ಟಿಒ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಕಾರಿನ ಸೈಲೆನ್ಸರ್ ಮಾರ್ಪಾಡು ಮಾಡಿದ್ದಲ್ಲದೆ, ಅನುಮತಿ ಇಲ್ಲದೆ ಬಣ್ಣ ಬದಲಾವಣೆ ಹಾಗೂ ಇತರೆ ಅಕ್ರಮ ಮಾರ್ಪಾಡುಗಳನ್ನು ಮಾಡಲಾಗಿತ್ತು.
ಮೋಟಾರು ವಾಹನ ಕಾಯ್ದೆಯ ವಿವಿಧ ಕಲಂ ಅಡಿಯಲ್ಲಿ ಗರಿಷ್ಠ ದಂಡವನ್ನು ವಿಧಿಸಲಾಗಿದ್ದು, ಒಟ್ಟು 1,11,500 ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗಿದೆ. ಬುಧವಾರದಂದು ವಿದ್ಯಾರ್ಥಿಯು ಈ ದಂಡವನ್ನು ಪಾವತಿಸಿದ ನಂತರವಷ್ಟೇ ವಾಹನವನ್ನು ಬಿಡುಗಡೆ ಮಾಡಲಾಗಿದೆ.

