ರಾಜ್ಯಪಾಲರಿಗೆ ಕೊಲೆ ಬೆದರಿಕೆ: ಇಮೇಲ್‌ನಲ್ಲಿ ಮೊಬೈಲ್ ಸಂಖ್ಯೆ ನೀಡಿ ಚಾಲೆಂಜ್ ಹಾಕಿದ ಕಿಡಿಗೇಡಿ!
x
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್

ರಾಜ್ಯಪಾಲರಿಗೆ ಕೊಲೆ ಬೆದರಿಕೆ: ಇಮೇಲ್‌ನಲ್ಲಿ ಮೊಬೈಲ್ ಸಂಖ್ಯೆ ನೀಡಿ ಚಾಲೆಂಜ್ ಹಾಕಿದ ಕಿಡಿಗೇಡಿ!

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರಿಗೆ ಇಮೇಲ್ ಮೂಲಕ ಭೀಕರ ಕೊಲೆ ಬೆದರಿಕೆ ಬಂದಿದೆ. ಮೊಬೈಲ್ ಸಂಖ್ಯೆ ಸಹಿತ ಇಮೇಲ್ ಕಳುಹಿಸಿರುವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ (CV Ananda Bose) ಅವರಿಗೆ ಗುರುವಾರ ರಾತ್ರಿ ಇಮೇಲ್ ಮೂಲಕ ಭೀಕರ ಕೊಲೆ ಬೆದರಿಕೆ ಬಂದಿದೆ. ಈ ಘಟನೆಯಿಂದಾಗಿ ಕೋಲ್ಕತ್ತಾದ ಲೋಕಭವನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯಪಾಲರ ಭದ್ರತೆಯನ್ನು ತಕ್ಷಣದಿಂದಲೇ ಹೆಚ್ಚಿಸಲಾಗಿದೆ.

ಇ-ಮೇಲ್‌ನಲ್ಲಿ ಏನಿದೆ?

ಅಪರಿಚಿತ ವ್ಯಕ್ತಿಯೊಬ್ಬ ಕಳುಹಿಸಿರುವ ಇಮೇಲ್‌ನಲ್ಲಿ ರಾಜ್ಯಪಾಲರನ್ನು 'ಬ್ಲಾಸ್ಟ್' ಮಾಡುವುದಾಗಿ (ಸ್ಪೋಟಿಸುವುದಾಗಿ) ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಇಮೇಲ್ ತಲುಪಿದ ಕೂಡಲೇ ಲೋಕಭವನದ ಹಿರಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಕಿಡಿಗೇಡಿಯ ಸುಳಿವು

ಬೆದರಿಕೆ ಹಾಕಿದ ವ್ಯಕ್ತಿ ತನ್ನ ಮೊಬೈಲ್ ಸಂಖ್ಯೆಯನ್ನು ಇಮೇಲ್‌ನಲ್ಲಿ ಉಲ್ಲೇಖಿಸುವ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ. ಈ ಸಂಖ್ಯೆಯ ಆಧಾರದ ಮೇಲೆ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸುವಂತೆ ರಾಜ್ಯ ಡಿಜಿಪಿಗೆ (DGP) ಸೂಚಿಸಲಾಗಿದೆ.

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮಾಹಿತಿ: ರಾಜ್ಯಪಾಲರ ಕಚೇರಿಯು ಈ ವಿಚಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಧಿಕೃತವಾಗಿ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯಕ್ಕೂ ಈ ಬಗ್ಗೆ ವರದಿ ಸಲ್ಲಿಸಲಾಗಿದೆ.

ಭದ್ರತೆ ಹೆಚ್ಚಳ

ಸಿ.ವಿ. ಆನಂದ್ ಬೋಸ್ ಅವರು ಈಗಾಗಲೇ Z-Plus ಭದ್ರತೆ ಹೊಂದಿದ್ದಾರೆ. ಆದರೆ ಈ ಘಟನೆಯ ನಂತರ, ಸುಮಾರು 60 ರಿಂದ 70 ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಅವರ ರಕ್ಷಣೆಗಾಗಿ ನಿಯೋಜಿಸಲಾಗಿದೆ. ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್ ಸಮನ್ವಯದೊಂದಿಗೆ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.

Read More
Next Story