LIVE Union Budget 2025-26:  12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್‌ ಮಂಡನೆ ಮುಕ್ತಾಯ
x
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೊದಲ ಕೇಂದ್ರ ಬಜೆಟ್‌ನಿಂದ ಎಂಟನೇ ಬಜೆಟ್‌ ಮಂಡನೆವರೆಗಿನ ಚಿತ್ರ

Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್‌ ಮಂಡನೆ ಮುಕ್ತಾಯ

Union Budget 2025-26: ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್‌ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಫೆ.1) ಲೋಕಸಭೆಯಲ್ಲಿ ಬಜೆಟ್‌ ಮಂಡಿಸಲಿದ್ದಾರೆ. ಶುಕ್ರವಾರ ಬಜೆಟ್‌ ಅಧಿವೇಶನ ಅರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್‌ ತಮ್ಮ 8ನೇ ಬಜೆಟ್‌ ಮಂಡಿಸಲಿದ್ದಾರೆ. ಈ ಆಯವ್ಯಯದಲ್ಲಿ ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ನಿರೀಕ್ಷೆ ಇದೆ. ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿಯ ಬೇಡಿಕೆಯೂ ಇದೆ. ಹೀಗಾಗಿ ಕೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ, ಯಾವೆಲ್ಲ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎನ್ನುವ ಪ್ರಶ್ನೆ ಎದುರಾಗಿದೆ.

ಎಷ್ಟು ಗಂಟೆಗೆ?

ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್‌ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್‌ ಮಂಡಿಸಿ ದಾಖಲೆ ಬರೆದಿದ್ದರು. ಅವರು ಒಟ್ಟು 10 ಬಜೆಟ್‌ ಮಂಡಿಸಿದ್ದಾರೆ.

ಲೈವ್‌ ವೀಕ್ಷಣೆ ಹೇಗೆ?

ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ಬಜೆಟ್ ಭಾಷಣದ ನೇರ ಪ್ರಸಾರ ಪ್ರಸಾರ ಮಾಡಲಿವೆ. ಜತೆಗೆ ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯುಟ್ಯೂಬ್ ನಲ್ಲಿ ಬಜೆಟ್‌ ಮಂಡನೆಯ ನೇರ ಪ್ರಸಾರ ವೀಕ್ಷಿಸಬಹುದು.

ಕೇಂದ್ರ ಬಜೆಟ್ 2025-26ರ ಪ್ರತಿ ಎಲ್ಲಿ ಸಿಗುತ್ತೆ?

ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್‌ ಮೊಬೈಲ್ ಆ್ಯಪ್‌ನಲ್ಲಿ ಪಿಡಿಎಫ್‌ ಪ್ರತಿಯ ರೂಪದಲ್ಲಿ ಲಭ್ಯವಿದೆ ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in)ನಲ್ಲೂ ದೊರೆಯಲಿದೆ.

ನಿರೀಕ್ಷೆಗಳೇನು?

ತೆರಿಗೆ ಕಡಿತ ಘೋಷಣೆ.

ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್‌ವರ್ಕ್‌, ಮಲ್ಟಿ ಮಾಡೆಲ್‌ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳ ಉತ್ತೇಜನಕ್ಕೆ ನೆರವು.

ಸಿಮೆಂಟ್‌, ಉಕ್ಕಿನ ಜಿಎಸ್‌ಟಿ ಇಳಿಕೆ.

ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹಲವು ಯೋಜನೆಗಳು.

ಉಚಿತ ಆಹಾರ ಧಾನ್ಯ ವಿತರಣೆ.

ಪಿಎಂಎವೈ ಸ್ಕೀಮ್‌ ಅಡಿಯಲ್ಲಿ ಅಫರ್ಡೆಬಲ್ ಮನೆಗಳ ನಿರ್ಮಾಣ‌.

ನರೇಗಾಕ್ಕೆ ಹೆಚ್ಚಿನ ಅನುದಾನ.

ಉದ್ಯೋಗ ಸೃಷ್ಟಿಗೆ ಆದ್ಯತೆ.

Live Updates

  • 1 Feb 2025 11:52 AM IST

    ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ

    ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಕ್ಯಾನ್ಸರ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಹಾಗೂ ದೂರುದ ನಗರಗಳಿಗೆ ಅಲೆಯಬೇಕಾಗಿದೆ. ಹಾಗಾಗಿ ಇನ್ನು ಮುಂದೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಕೇಂದ್ರ ತೆರೆಯಲಾಗುವುದು ಎಂದು ಹೇಳಿದ್ದಾರೆ.

  • 1 Feb 2025 11:52 AM IST

    ಭಾರತ್ ಟ್ರೇಡ್‌ ನೆಟ್‌ವರ್ಕ್‌ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು

  • 1 Feb 2025 11:48 AM IST

    ಜೀನ್ ಬ್ಯಾಂಕ್ ಸ್ಥಾಪನೆ ಮಾಡಿ ಅನುವಂಶೀಯ ಕಾಯಿಲೆಗಳ ಸಂಶೋಧನೆಗೆ ಆದ್ಯತೆ. ಐಐಟಿ, ಐಐಎಸ್‌ಸಿಯಲ್ಲಿ ಹೆಚ್ಚುವರಿ ಸಂಶೋಧನೆಗೆ ನಿಧಿ ಮೀಸಲು. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ.

  • 1 Feb 2025 11:47 AM IST

    ಪ್ರವಾಸೋಧ್ಯಮಕ್ಕೆ ಒತ್ತು. ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ, ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.

  • 1 Feb 2025 11:46 AM IST

    ಗಿಗ್‌ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ; 1 ಕೋಟಿ ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದರಿಗೆ ವಿಶೇಷ ಯೋಜನೆ.

  • 1 Feb 2025 11:44 AM IST

    ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮೂರು ಸಂಸ್ಥೆಗಳ ಸ್ಥಾಪನೆ. 23 ಐಐಟಿಗಳಲ್ಲಿ ವಿದ್ಯಾರ್ಥಿಗಳ ದಾಖಲು ಮಾಡುವ ಪ್ರಮಾಣ ಹೆಚ್ಚಳ. 60 ಸಾವಿರದಿಂದ 1.35 ಲಕ್ಷಕ್ಕೆ ಹೆಚ್ಚಳ. ಪಟನಾ ಐಐಟಿ ವಿಸ್ತರಣೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು 10 ವರ್ಷಗಳಲ್ಲಿ ಶೇ 100ರಷ್ಟು ಹೆಚ್ಚಳ.

  • 1 Feb 2025 11:29 AM IST

    ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರ ಉತ್ತೇಜನ. 22 ಲಕ್ಷ ಉದ್ದಿಮೆದಾರರಿಗೆ ಇದರಿಂದ ಅನುಕೂಲ.ಚರ್ಮೋದ್ಯಮಕ್ಕೆ ಉತ್ತೇಜನ.  

  • 1 Feb 2025 11:26 AM IST

    ಮೇಕ್‌ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಾಷ್ಟ್ರೀಯ ತಯಾರಿಕಾ ವಲಯ ರಚನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿ. ಸೌರ, ಇವಿ ಬ್ಯಾಟರಿ, ಮೋಟಾರ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಹೂಡಿಕೆಗೆ ಉತ್ತೇಜನ.

  • 1 Feb 2025 11:21 AM IST

    ಸ್ಟಾರ್ಟ್‌ಅಪ್‌ಗಳಿಗೆ ₹10 ಕೋಟಿಯಿಂದ ₹20ಕೋಟಿವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ. ಅತಿ ಸಣ್ಣ ಕಂಪನಿಗಳಿಗೆ ₹5 ಲಕ್ಷವರೆಗಿನ ಕ್ರೆಡಿಟ್‌ ಕಾರ್ಡ್‌ ವಿತರಣೆ. ಮೊದಲ ಹಂತದಲ್ಲಿ 10 ಲಕ್ಷ ಕಾರ್ಡ್‌ ಹಂಚಿಕೆ

  • 1 Feb 2025 11:19 AM IST

    ₹60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಗೆ ಆದ್ಯತೆ. ಅಂಡಮಾನ್ ನಿಕೋಬಾರ್‌ ಹಾಗೂ ಲಕ್ಷ ದ್ವೀಪಗಳಲ್ಲಿ ವಿಶೇಷ ವಲಯ ನಿರ್ಮಾಣ. ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು.

Read More
Next Story