Union Budget 2025-26: 12 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ; ಬಜೆಟ್ ಮಂಡನೆ ಮುಕ್ತಾಯ
Union Budget 2025-26: ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಶುಕ್ರವಾರ ಬಜೆಟ್ ಅಧಿವೇಶನ ಅರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡಿಸಲಿದ್ದಾರೆ. ಈ ಆಯವ್ಯಯದಲ್ಲಿ ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ನಿರೀಕ್ಷೆ ಇದೆ. ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿಯ ಬೇಡಿಕೆಯೂ ಇದೆ. ಹೀಗಾಗಿ ಕೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ, ಯಾವೆಲ್ಲ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎನ್ನುವ ಪ್ರಶ್ನೆ ಎದುರಾಗಿದೆ.
ಎಷ್ಟು ಗಂಟೆಗೆ?
ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಅವರು ಒಟ್ಟು ಎಂಟು ಬಜೆಟ್ ಇದುವರೆಗೆ ಮಂಡಿಸಿದ್ದಾರೆ.ಅದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದರು. ಅವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.
ಲೈವ್ ವೀಕ್ಷಣೆ ಹೇಗೆ?
ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ಬಜೆಟ್ ಭಾಷಣದ ನೇರ ಪ್ರಸಾರ ಪ್ರಸಾರ ಮಾಡಲಿವೆ. ಜತೆಗೆ ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯುಟ್ಯೂಬ್ ನಲ್ಲಿ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಿಸಬಹುದು.
ಕೇಂದ್ರ ಬಜೆಟ್ 2025-26ರ ಪ್ರತಿ ಎಲ್ಲಿ ಸಿಗುತ್ತೆ?
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್‌ನಲ್ಲಿ ಪಿಡಿಎಫ್ ಪ್ರತಿಯ ರೂಪದಲ್ಲಿ ಲಭ್ಯವಿದೆ ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in)ನಲ್ಲೂ ದೊರೆಯಲಿದೆ.
ನಿರೀಕ್ಷೆಗಳೇನು?
ತೆರಿಗೆ ಕಡಿತ ಘೋಷಣೆ.
ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್‌ವರ್ಕ್, ಮಲ್ಟಿ ಮಾಡೆಲ್ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳ ಉತ್ತೇಜನಕ್ಕೆ ನೆರವು.
ಸಿಮೆಂಟ್, ಉಕ್ಕಿನ ಜಿಎಸ್‌ಟಿ ಇಳಿಕೆ.
ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಹಲವು ಯೋಜನೆಗಳು.
ಉಚಿತ ಆಹಾರ ಧಾನ್ಯ ವಿತರಣೆ.
ಪಿಎಂಎವೈ ಸ್ಕೀಮ್ ಅಡಿಯಲ್ಲಿ ಅಫರ್ಡೆಬಲ್ ಮನೆಗಳ ನಿರ್ಮಾಣ.
ನರೇಗಾಕ್ಕೆ ಹೆಚ್ಚಿನ ಅನುದಾನ.
ಉದ್ಯೋಗ ಸೃಷ್ಟಿಗೆ ಆದ್ಯತೆ.
Live Updates
- 1 Feb 2025 11:17 AM IST
ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನ ಕ್ಷೇತಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- 1 Feb 2025 11:16 AM IST
ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನ ಕ್ಷೇತಕ್ಕೆ ಒತ್ತು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- 1 Feb 2025 11:08 AM IST
ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ಅನುಮೋದನೆ ಪಡೆದ ವಿತ್ತ ಸಚಿವೆ. ಸಂಪ್ರದಾಯದಂತೆ ಅವರಿಗೆ ದ್ರೌಪದಿ ಮುರ್ಮು ಅವರು ಮೊಸರು ಹಾಗೂ ಸಕ್ಕರೆಯನ್ನು ತಿನ್ನಿಸಿ ಶುಭಹಾರೈಸಿದರು
- 1 Feb 2025 11:07 AM IST
ಬಜೆಟ್ ಮಂಡನೆಗೆ ಮಾಡಲು ಮುಂದಾದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿ ಪಕ್ಷಗಳ ವಿರೋಧ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ. ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭ.
- 1 Feb 2025 10:59 AM IST
ಇದು ಗ್ಯಾನ್ ( GYAN) ಬಜೆಟ್ - ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ
ಪ್ರಧಾನಿ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಈ ಬಜೆಟ್ ಸಾಮಾನ್ಯ ಜನರಿಗಿರುವ ಬಜೆಟ್ ಎಂದು ಹೇಳಿದ್ದಾರೆ. ಇದು ಬಡ ರೈತರು, ಮಹಿಳೆಯರು ಮತ್ತು ಯುವಕರ ಆಶೋತ್ತರಗಳ ಬಜೆಟ್. ಇದು ಜ್ಞಾನದ (ಬಡವರು, ಯುವಕರು, ರೈತರು ಮತ್ತು ಮಹಿಳಾ ಶಕ್ತಿ) ಬಜೆಟ್ ಎಂದು ಅವರು ತಿಳಿಸಿದ್ದಾರೆ.
- 1 Feb 2025 10:43 AM IST
ಬಜೆಟ್‌ಗೆ ಸಂಪುಟ ಸಭೆಯಲ್ಲಿ ಅನುಮೋದನೆ
2025-2026ನೇ ಸಾಲಿನ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು.
- 1 Feb 2025 10:19 AM IST
ಸಂಸತ್ ಭವನ ತಲುಪಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನ ತಲುಪಿದ್ದಾರೆ. ಸಚಿವ ಸಂಪುಟ ಸಭೆ ಶೀಘ್ರದಲ್ಲೇ ಆರಂಭವಾಗಲಿದೆ. ಬಜೆಟ್ ಮಂಡನೆಗೂ ಮುನ್ನ ಬೆಳಿಗ್ಗೆ 10:25 ಕ್ಕೆ ಸಂಸತ್ ಭವನದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು,ಇದರಲ್ಲಿ ಬಜೆಟ್ ಮಂಡನೆಗೆ ಅನುಮೋದನೆ ಪಡೆಯಲಾಗುತ್ತದೆ.
- 1 Feb 2025 9:55 AM IST
ಪದ್ಮಶ್ರೀ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ ಸೀರೆ ಧರಿಸಲಿರುವ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಧರಿಸಿರುವ ಸೀರೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ (2021) ಉಡುಗೊರೆಯಾಗಿ ನೀಡಿದ್ದಾರೆ. ಬಜೆಟ್ ದಿನದಂದು ದುಲಾರಿ ದೇವಿ ಈ ಸೀರೆಯನ್ನು ಧರಿಸಲು ಹಣಕಾಸು ಸಚಿವರನ್ನು ವಿನಂತಿಸಿದ್ದರು.