ಭಾರತ-ಜರ್ಮನಿ ಸಂಬಂಧಕ್ಕೆ 75 ವರ್ಷ: ಪ್ರಧಾನಿ ಮೋದಿ- ಮೆರ್ಜ್ ಐತಿಹಾಸಿಕ ಮಾತುಕತೆ
x
ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್

ಭಾರತ-ಜರ್ಮನಿ ಸಂಬಂಧಕ್ಕೆ 75 ವರ್ಷ: ಪ್ರಧಾನಿ ಮೋದಿ- ಮೆರ್ಜ್ ಐತಿಹಾಸಿಕ ಮಾತುಕತೆ

ಭಾರತ-ಜರ್ಮನಿ ರಾಜತಾಂತ್ರಿಕ ಸಂಬಂಧದ 75ನೇ ವರ್ಷಾಚರಣೆಯ ಅಂಗವಾಗಿ ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅಹಮದಾಬಾದ್‌ಗೆ ಭೇಟಿ ನೀಡಿದ್ದಾರೆ.


ಭಾರತ ಮತ್ತು ಜರ್ಮನಿ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ತುಂಬುತ್ತಿರುವ ಐತಿಹಾಸಿಕ ಕ್ಷಣದಲ್ಲಿ, ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ತಮ್ಮ ಮೊದಲ ಅಧಿಕೃತ ಭಾರತ ಪ್ರವಾಸಕ್ಕಾಗಿ ಅಹಮದಾಬಾದ್‌ಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೆರ್ಜ್ ಅವರನ್ನು ಸಬರಮತಿ ಆಶ್ರಮದಲ್ಲಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು.

ಗಾಳಿಪಟ ಹಾರಿಸಿದ ಮೆರ್ಜ್‌

ಈ ಭೇಟಿಯು ಕೇವಲ ಔಪಚಾರಿಕವಾಗಿರದೆ, ರಕ್ಷಣೆ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಪ್ರಮುಖ ವಲಯಗಳಲ್ಲಿ ಉಭಯ ದೇಶಗಳ ಬಾಂಧವ್ಯವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿದೆ. ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದ ನಾಯಕರು, ನಂತರ ಸಾಬರಮತಿ ರಿವರ್‌ಫ್ರಂಟ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2026 ಅನ್ನು ಉದ್ಘಾಟಿಸಿದರು. ವಿಶೇಷವಾಗಿ, ಹನುಮಂತನ ಚಿತ್ರವಿರುವ ಗಾಳಿಪಟವನ್ನು ಉಭಯ ನಾಯಕರು ಜೊತೆಯಾಗಿ ಹಾರಿಸಿದ್ದು ಸಾಂಸ್ಕೃತಿಕ ಐಕ್ಯತೆಯ ಸಂಕೇತವಾಗಿ ಗಮನಸೆಳೆಯಿತು.

ಚರ್ಚೆಯ ಪ್ರಮುಖ ವಿಷಯಗಳು

ನಂತರ ನಡೆದ ನಿಯೋಗ ಮಟ್ಟದ ಮಾತುಕತೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಜಿತ್ ದೋವಲ್ ಭಾಗವಹಿಸಿದ್ದರು. ಈ ವೇಳೆ ವ್ಯಾಪಾರ, ಹೂಡಿಕೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಸ್ಥಿರತೆಯನ್ನು ಮೆಚ್ಚಿದ ಮೆರ್ಜ್, ಭವಿಷ್ಯದ ರಕ್ಷಣಾ ಮತ್ತು ತಂತ್ರಜ್ಞಾನ ಯೋಜನೆಗಳಲ್ಲಿ ಭಾರತದೊಂದಿಗೆ ಕೈಜೋಡಿಸಲು ಆಸಕ್ತಿ ವ್ಯಕ್ತಪಡಿಸಿದರು.

ಮಂಗಳವಾರ ಬೆಂಗಳೂರಿಗೆ ಭೇಟಿ

ಜರ್ಮನ್ ಚಾನ್ಸಲರ್ ನಾಳೆ (ಜನವರಿ 13) ಬೆಂಗಳೂರಿಗೆ ಭೇಟಿ ನೀಡಲಿದ್ದು, ಅಲ್ಲಿನ ಬಾಷ್ (Bosch) ಕಂಪನಿ ಮತ್ತು ನ್ಯಾನೋ ಸೈನ್ಸ್ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಇದು ಜನವರಿ 27 ರಂದು ನಡೆಯಲಿರುವ ಭಾರತ-ಯುರೋಪಿಯನ್ ಒಕ್ಕೂಟದ (EU) ಶೃಂಗಸಭೆಗೆ ಪೂರಕವಾದ ವೇದಿಕೆಯನ್ನು ಸಿದ್ಧಪಡಿಸಿದೆ.

Read More
Next Story